ಕಿಸ್ಸಿಂಗ್ ಸೀನ್ ಮಾಡಲಲು ಇಬ್ಬರಿಗೂ ತೀವ್ರ ಮುಜುಗರ. ಹೀರೋ ಹಾಗೂ ಹೀರೋಯಿನ್ ಇಬ್ಬರೂ ಈ ದೃಶ್ಯ ಬೇಡವೇ ಬೇಡ ಎಂದಿದ್ದಾರೆ. ಆದರೆ ನಿರ್ದೇಶಕರು ಬಿಡಲೇ ಇಲ್ಲ. ಕೊನೆಗೂ ಕಿಸ್ಸಿಂಗ್ ಸೀನ್ ಮಾಡಿದ ನಾಯಕ-ನಾಯಕಿಗೆ ಇದು ಸಿನಿಮಾ ಇತಿಹಾಸದ ಅತ್ಯಂತ ಕೆಟ್ಟ ಕಿಸ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇದೇ ಕಿಸ್ಸಿಂಗ್ ಸೀನ್ ಸಿನಿ ರಸಿಕರನ್ನು ರಂಜಿಸಿ ಸಿನಿಮಾ ಸೂಪರ್ ಹಿಟ್ ಆಗುವಂತೆ ಮಾಡಿತ್ತು.

ಮುಂಬೈ(ಏ.08) ಹೀರೋ ಹಾಗೂ ಹೀರೋಯಿನ್ ಇಬ್ಬರಿಗೂ ಕಿಸ್ಸಿಂಗ್ ಸೀನ್ ಮಾಡಲು ಚಡಪಡಿಕೆ. ಇಬ್ಬರು ಈ ದೃಶ್ಯಕ್ಕೆ ತಯಾರಿರಲಿಲ್ಲ. ಆದರೆ ಕಿಸ್ ಅನಿವಾರ್ಯವಾಗಿತ್ತು. ಭಯ, ಮುಜುಗುರ, ಆತಂಕ, ಹಿಂಜರಿಕೆಯಿಂದಲೇ ಹೀರೋ ಹಾಗೂ ಹೀರೋಯಿನ್ ಈ ದೃಶ್ಯ ಮಾಡಿದ್ದರು. ದೃಶ್ಯದ ಬಳಿಕವೂ ಇಬ್ಬರೂ ಇದು ಈ ಸಿನಿಮಾದ ಕೆಟ್ಟ ದೃಶ್ಯ, ಕೆಟ್ಟ ಕಿಸ್ ಎಂದೇ ಹೇಳಿದ್ದರು. ಆದರೆ ಈ ಸಿನಿಮಾ, ಈ ಕಿಸ್ಸಿಂಗ್ ಸೀನ್ ಸೂಪರ್ ಹಿಟ್ ಆಗಿತ್ತು. ಅತ್ಯಂತ ಸಹಜವಾಗಿ ಕಿಸ್ಸಿಂಗ್ ಸೀನ್ ಮೂಡಿಬಂದಿತ್ತು. ಪರಿಣಾಮ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೋಟಿ ಕೋಟಿ ರೂಪಾಯಿ ಆದಾಯಗಳಿಸಿತ್ತು. ಇಷ್ಟೇ ಬರೋಬ್ಬರಿ 18 ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದರಲ್ಲಿ ನಾಯಕ ಉತ್ತಮ ನಟ ಅನ್ನೋ ರಾಷ್ಟ್ರೀಯ ಪುರಸ್ಕಾರ ಕೂಡ ಪಡೆದಿದ್ದಾರೆ. ಈ ಸಿನಿಮಾ 2004ರಲ್ಲಿ ಬಿಡುಗಡೆಯಾದ ಬಾಲಿವುಡ್‌ನ ಹಮ್ ತುಮ್ ಸಿನಿಮಾ.

ಕಿಸ್ ಬೇಡ ಎಂದಿದ್ದ ರಾಣಿ
ಹೃತಿಕ್ ರೋಶನ್, ಅಮಿರ್ ಖಾನ್ ತಿರಸ್ಕರಿಸಿದ ಈ ಸಿನಿಮಾವನ್ನು ಕೊನಗೆ ಒಪ್ಪಿಕೊಂಡಿದ್ದು ಸೈಫ್ ಆಲಿ ಖಾನ್. 2004ರ ಸಮಯದಲ್ಲಿ ಸೈಫ್ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ. ಹಮ್ ತುಮ್ ಸಿನಿಮಾ ಎಲ್ಲರಿಂದಲೂ ರಿಜೆಕ್ಟ್ ಆಗಿ ಕೊನೆಗೆ ಸೈಫ್ ಆಲಿ ಖಾನ್ ಶೂಟಿಂಗ್ ಆರಂಭಿಸಿದ್ದರು. ಈ ಸಿನಿಮಾದ ನಾಯಕಿ ರಾಣಿ ಮುಖರ್ಜಿ. ನಾಯಕಿ ರಾಣಿ ಮುಖರ್ಜಿಗೆ ಈ ಕಿಸ್ ಸೀನ್ ಮಾಡಲು ತುತಾರಂ ಇಷ್ಟವಿರಲಿಲ್ಲ. ಇಷ್ಟೇ ಅಲ್ಲ ರಾಣಿ ಮುಖರ್ಜಿ ತೀವ್ರ ಭಯಪಟ್ಟಿದ್ದರು. ಇತ್ತ ಸೈಫ್ ಆಲಿ ಖಾನ್ ಕತೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಹೊರಗಡೆ ಎಲ್ಲೂ ತೋರಿಸಿಕೊಳ್ಳುಂತಿರಲಿಲ್ಲ. ಕಿಸ್ ಸೀನ್ ಹೇಗಪ್ಪ ಮಾಡೋದು ಅನ್ನೋ ಚಿಂತೆಯಲ್ಲೇ ಮುಳುಗಿದ್ದರು.

ಭಾರತೀಯ ಸಿನಿಮಾದ ಮೊದಲ ಲಿಪ್ ಕಿಸ್‌ಗೆ 92 ವರ್ಷ, 4 ನಿಮಿಷ ಚುಂಬನ ದೃಶ್ಯ

ಕೊನೆಗೂ ಕಿಸ್ ಸೀನ್ ಶೂಟ್
ಈ ಕಿಸ್ ಸೀನ್ ಹೇಗಾದರೂ ಮಾಡಿ ರದ್ದು ಮಾಡಲು ಸೈಫ್ ಆಲಿ ಖಾನ್ ಹಾಗೂ ರಾಣಿ ಮುಖರ್ಜಿ ಪ್ರಯತ್ನಿಸಿದ್ದರು. ಆದರೆ ನಿರ್ದೇಶಕರು ಸೈಫ್ ಆಲಿ ಖಾನ್ ಹಾಗೂ ರಾಣಿ ಮುಖರ್ಜಿ ಇಬ್ಬರನ್ನೂ ಒಪ್ಪಿಸಿದ್ದರು. ಕೊನೆಗೆ ಭಯ, ಅಂಜಿಕೆ, ಮುಜುಗರದಿಂದಲೇ ಸೈಫ್ ಆಲಿ ಖಾನ್ ಹಾಗೂ ರಾಣಿ ಮುಖರ್ಜಿ ಈ ಸೀನ್ ಮಾಡಲು ಒಪ್ಪಿಕೊಂಡಿದ್ದರು. 

ಸಿನಿಮಾ ಇತಿಹಾಸದ ಕೆಟ್ಟ ಕಿಸ್
ನಿರ್ದೇಶಕರ ಒತ್ತಾಯ, ಸಿನಿಮಾದ ಬೇಡಿಕೆಗಳಿಂದ ಸೈಫ್ ಆಲಿ ಖಾನ್ ಹಾಗೂ ರಾಣಿ ಮುಖರ್ಜಿ ಇಬ್ಬರೂ ಈ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಆದರೆ ಇಬ್ಬರೂ ಈ ಕಿಸ್ಸಿಂಗ್ ಸೀನ್ ಇತರ ನಟ ನಟಿಯರಂತೆ ಮಾಡಲಿಲ್ಲ. ಆತ್ಮೀಯತೆ, ರೋಮ್ಯಾನ್ಸ್ ಇವರಲ್ಲಿ ಇರಲಿಲ್ಲ. ಅಂಜಿಕೆ, ಮುಜುಗರವೇ ಮುಖದಲ್ಲಿ ಕಾಣುತಿತ್ತು. ಸೀನ್ ಮುಗಿದ ಬಳಿಕ ಇಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಸೀನ್ ಚೆನ್ನಾಗಿ ಬರಲಿಲ್ಲ ಅನ್ನೋದು ಇಬ್ಬರಿಗೂ ಖಾತ್ರಿಯಾಗಿದೆ. ಆದರೆ ಮತ್ತೊಮ್ಮೆ ದೃಶ್ಯ ಮಾಡುವ ಸಾಹಸಕ್ಕೆ ಕೈಹಾಕಲಿಲ್ಲ. ಹಲವು ವೇದಿಕೆಗಳಲ್ಲಿ ಸೈಫ್ ಆಲಿ ಖಾನ್ ಇದು ಸಿನಿಮಾ ಇತಿಹಾಸದ ಅತ್ಯಂತ ಕೆಟ್ಟ ಕಿಸ್ ಎಂದು ಹೇಳಿಕೊಂಡಿದ್ದಾರೆ.

ಕಿಸ್-ಸಿನಿಮಾ ಸೂಪರ್ ಹಿಟ್
2004ರಲ್ಲಿ ಹಮ್ ತುಮ್ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ರಸಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕಿಸ್ಸಿಂಗ್ ಸೀನ್ ಸಿನಿಮಾ ವೀಕ್ಷಕರು ಇಷ್ಟಪಟ್ಟಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೇವಲ 8 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 42 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇನ್ನು ಬರೋಬ್ಬರಿ 18 ಪ್ರಶಸ್ತಿಗಳನ್ನು ಈ ಸಿನಿಮಾ ಗೆದ್ದುಕೊಂಡಿತ್ತು. ಇದರಲ್ಲಿ ಸೈಫ್ ಆಲಿ ಖಾನ್ ಪಡೆದ ಅತ್ಯುತ್ತಮ ನಟ ಪ್ರಶಸ್ತಿಯೂ ಸೇರಿದೆ. 

47 ಕಿಸ್ಸಿಂಗ್ ಸೀನ್ ಚಿತ್ರಕ್ಕೆ ₹6 ಕೋಟಿ ಬಜೆಟ್, ಈ ಬ್ಲಾಕ್ ಬಸ್ಟರ್ ಚಿತ್ರಗಳಿಸಿದ್ದು ಅದೆಷ್ಟು ಕೊಟಿ ರೂ?