Asianet Suvarna News Asianet Suvarna News

ಸುಶ್ಮಿತಾ ಸೇನ್ ವಿಡಿಯೋಗೆ ಲಲಿತ್ ಮೋದಿ 'ಹಾಟ್' ಕಾಮೆಂಟ್; ವೈರಲ್ ಪೋಸ್ಟ್

ಸುಶ್ಮಿತಾ ಶೇರ್ ಮಾಡಿರುವ ವಿಡಿಯೋಗೆ ಲಲಿತ್ ಮೋದಿ ಹಾಟ್ ಕಾಮೆಂಟ್ ಮಾಡಿದ್ದಾರೆ. ಲಲಿತ್ ಮೋದಿ ಮಾಡಿರುವ ಕಾಮೆಂಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಅಷ್ಟಕ್ಕೂ ಲಲಿತ್ ಮೋದಿ ಹೇಳಿರುವುದು ಏನು ಅಂತೀರಾ, ಪ್ರೇಯಸಿ ಸುಶ್ಮಿತಾ ವಿಡಿಯೋಗೆ ಸಖತ್ ಹಾಟ್ ಎಂದು ಹೇಳಿದ್ದಾರೆ. 'ಸರ್ದೇನಿಯಾದಲ್ಲಿ ಈಗ ಸಖತ್ ಹಾಟ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ಈ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಲಲಿತ್ ಮೋದಿ ಕಾಲೆಳೆಯುತ್ತಿದ್ದಾರೆ. 

Lalit Modi says Looking hot to his girlfriend Sushmita Sen latest post sgk
Author
Bengaluru, First Published Aug 7, 2022, 12:52 PM IST

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ ಸಂಬಂಧ ಸಿಕ್ಕಾಪಟ್ಟೆ ಕಳೆದ ಕೆಲವು ದಿನಗಳ ಹಿಂದೆ ಹಾಟ್ ಟಾಪಿಕ್ ಆಗಿತ್ತು. ಲಲಿತ್ ಮೋದಿ ಟ್ವೀಟ್ ಮೂಲಕ ಸುಶ್ಮಿತಾ  ಸೇನ್ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದ ನಂತರ ಚಿತ್ರರಂಗದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಮಾಜಿ ವಿಶ್ವಸುಂದರಿ ಜೊತೆಗಿನ ಲಲಿತ್ ಮೋದಿಯ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಲಲಿತ್ ಮೋದಿ ಮತ್ತು ಸುಶ್ಮಿತಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬಳಿಕ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲದ ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಸುಶ್ಮಿಕಾ ಸದಾ ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸುಶ್ಮಿತಾ ಪ್ರವಾಸಕ್ಕೆ ಹೋಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಇಟಲಿಯಲ್ಲಿರುವ ಸುಶ್ಮಿತಾ ಸರ್ದೇನಿಯಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸರ್ದೇನಿಯಾನಿಂದ ಒಂದಿಷ್ಟು ವಿಡಿಯೋ ಮತ್ತು ಫೋಟೋ ಶೇರ್ ಮಾಡಿದ್ದಾರೆ. 

ಸುಶ್ಮಿತಾ ಶೇರ್ ಮಾಡಿರುವ ವಿಡಿಯೋಗೆ ಲಲಿತ್ ಮೋದಿ ಹಾಟ್ ಕಾಮೆಂಟ್ ಮಾಡಿದ್ದಾರೆ. ಲಲಿತ್ ಮೋದಿ ಮಾಡಿರುವ ಕಾಮೆಂಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಅಷ್ಟಕ್ಕೂ ಲಲಿತ್ ಮೋದಿ ಹೇಳಿರುವುದು ಏನು ಅಂತೀರಾ, ಪ್ರೇಯಸಿ ಸುಶ್ಮಿತಾ ವಿಡಿಯೋಗೆ ಸಖತ್ ಹಾಟ್ ಎಂದು ಹೇಳಿದ್ದಾರೆ. 'ಸರ್ದೇನಿಯಾದಲ್ಲಿ ಈಗ ಸಖತ್ ಹಾಟ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ಈ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಲಲಿತ್ ಮೋದಿ ಕಾಲೆಳೆಯುತ್ತಿದ್ದಾರೆ.


'ಗೋಲ್ಡ್ ಡಿಗ್ಗರ್' ಎಂದ ನೆಟ್ಟಿಗರಿಗೆ ಸುಶ್ಮಿತಾ ಸೇನ್ ಖಡಕ್ ಪ್ರತಿಕ್ರಿಯೆ; ಪ್ರಿಯಾಂಕಾ, ರಣ್ವೀರ್ ಬೆಂಬಲ

 

ಅಂದಹಾಗೆ ಇತ್ತೀಚಿಗಷ್ಟೆ ಸುಶ್ಮಿತಾ ಸೇನ್ ತನ್ನನ್ನು ಗೋಲ್ಡ್ ಡಿಗ್ಗರ್ ಎಂದು ಕರೆದವರಿಗೆ ಖಡಕ್ ಉತ್ತರ ನೀಡಿದ್ದರು. ಲಲಿತ್ ಮೋದಿ ಜೊತೆ ಫೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಸುಶ್ಮಿತಾ ಸೇನ್ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಜರಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೋಲ್ಡ್ ಡಿಗ್ಗರ್ ಎಂದು ಕಾಮೆಂಟ್ ಮಾಡಿದ್ದರು. ಇದರಿಂದ ಕೆರಳಿದ್ದ ಮಾಜಿ ವಿಶ್ವಸುಂದರಿ ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡುವ ಮೂಲಕ ಬಾಯಿ ಮುಚ್ಚಿಸಿದ್ದರು. ಗೋಲ್ಡ್ ಗಿಂತ ವಜ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತೀನಿ ಎಂದು ಹೇಳಿದ್ದರು. ಸುಶ್ಮಿತಾ ಸೇನ್‌ಗೆ ಪ್ರಿಯಾಂಕಾ ಚೋಪ್ರಾ ಮತ್ತು ನಟ ರಣ್ವೀರ್ ಸಿಂಗ್ ಸಹ ಬೆಂಬಲ ನೀಡಿದ್ದರು. 

ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ, ಲಂಚ ಬೇಕಿಲ್ಲ, ಟ್ರೋಲ್‌ಗೆ ತಿರುಗೇಟು ನೀಡಿದ ಲಲಿತ್ ಮೋದಿ!

ಟ್ರೋಲಿಗೆ ಲಲಿತ್ ಮೋದಿ ಪ್ರತಿಕ್ರಿಯೆ 

ಸುಶ್ಮೀತಾ ಸೇನ್ ಜೊತೆಗಿನ ರಿಲೇಷನ್‌ಶಿಪ್‌ನಿಂದ ಹಿಡಿದು, ಐಪಿಎಲ್ ಸೇರಿದಂತೆ ಎಲ್ಲಾ ಟ್ರೋಲ್‌ಗೆ ಉತ್ತರ ನೀಡಿದ್ದರು. ಎಲ್ಲಾ ಮಾಧ್ಯಗಳು ಡೋನಾಲ್ಡ್ ಟ್ರಂಪ್ ರೀತಿ ಸುಳ್ಳು ಸುದ್ದಿ ಹರಡುತ್ತಿದೆ. ಫೋಟೋ ಹಂಚಿಕೊಂಡಿದ್ದೇನೆ ಅದರಲ್ಲಿ ತಪ್ಪೇನು? ಲಂಚ ಪಡೆದು ವಿದೇಶಕ್ಕೆ ಪರಾರಿಯಾಗುವ ಅವಶ್ಯಕತೆ ನನಗಿಲ್ಲ. ನಾನು ಹುಟ್ಟುವಾಗಲೇ ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ. ನನಗ್ಯಾಕೆ ಬೇಕು ಲಂಚ ಎಂದು ಲಲಿತ್ ಮೋದಿ ತಿರುಗೇಟು ನೀಡಿದ್ದರು. ಮಾಧ್ಯಮಗಳು ಯಾಕೆ ತಪ್ಪಾಗಿ ನನ್ನನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡುತ್ತಿದೆ. ನಾನು ಇನ್‌ಸ್ಟಾದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. ಅದು ತಪ್ಪಲ್ಲ ಎಂದು ಭಾವಿಸುತ್ತೇನೆ.  ನಾವು ಇನ್ನೂ ಮಧ್ಯಯುಗದಲ್ಲಿ ವಾಸಿಸುತ್ತಿದ್ದೇವೆ. ಸ್ನೇಹಿತರಾಗಿರಲು ಸಾಧ್ಯವಿಲ್ಲವೇ, ಸ್ನೇಹಿತರ ನಡುವೆ ಕೆಮೆಸ್ಟ್ರಿ ಚೆನ್ನಾಗಿದ್ದರೆ, ಸಮಯವೂ ಸರಿಯಾಗಿದ್ದರೆ ಮ್ಯಾಜಿಕ್ ನಡೆಯಬಹುದು.  ಯಾರಿಗೂ ಯಾವುದೇ ಹೊಣೆಗಾರಿಗೆ ಇಲ್ಲ. ಭಾರತದಲ್ಲಿ ಎಲ್ಲರೂ ಅರ್ನಬ್ ಗೋಸ್ವಾಮಿ ಆಗಲು ಬಯಸುತ್ತಿದ್ದಾರೆ. ದೊಡ್ಡ ಕೋಡಂಗಿ ಆತ. ನನ್ನ ಸಲಹೆ ಅಂದರೆ ಇತರರನ್ನು ಬದುಕಲು ಬಿಡಿ ಎಂದು ಕಿಡಿಕಾರಿದ್ದರು. 

Follow Us:
Download App:
  • android
  • ios