Asianet Suvarna News Asianet Suvarna News

RAMAYANA: ಶ್ರೀರಾಮನಷ್ಟೇ ಪರಿಶುದ್ಧನಾಗುವೆ, ಮಾಂಸ-ಮದ್ಯ ಮುಟ್ಟಲ್ಲ ಎಂದ ರಣಬೀರ್​ ಕಪೂರ್​

ರಾಮಾಯಣ ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕಾಗಿ ನಟ ರಣಬೀರ್​ ಕಪೂರ್​ ಮದ್ಯ, ಮಾಂಸ ತೊರೆದು ಶ್ಲಾಘನೆಗೆ ಪಾತ್ರರಾಗಿದ್ದಾರೆ. 
 

Ranbir Kapoor To Turn Down Drinking  Eating Meat for Ramayana film suc
Author
First Published Oct 10, 2023, 12:49 PM IST

1987- 88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ  ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಯಾರಿಗೆ ತಾನೆ ನೆನಪಿಲ್ಲ. ಟಿ.ವಿ ಇನ್ನೂ ಕೆಲವೇ ಕೆಲವರ ಮನೆಯನ್ನು ಅಲಂಕರಿಸಿತ್ತು.   ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದ್ದರು . ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು.  ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇದೇ ಕಾರಣಕ್ಕೆ ಅಂದು ದೇವತೆಗಳ ಪಾತ್ರ ಮಾಡುವವರು ಮದ್ಯ, ಮಾಂಸಾಹಾರ ಸೇವನೆಯನ್ನು ಬಿಡುತ್ತಿದ್ದರು. ಒಮ್ಮೆ ರಾಮನ ಪಾತ್ರಧಾರಿ ಅರುಣ್​ ಗೋವಿಲ್​ ಸಿಗರೇಟ್​ ಸೇಯುತ್ತಿರುವುದನ್ನು ನೋಡಿ ಅವರ ಅಭಿಮಾನಿಯೊಬ್ಬ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಜೀವನ ಪೂರ್ತಿ ತಾವು ಸ್ಮೋಕ್​ ಮಾಡುವುದನ್ನು ಬಿಟ್ಟಿರುವುದಾಗಿ ಅರುಣ್​ ಹೇಳಿದ್ದರು.

ಇದು ಧಾರಾವಾಹಿಗಳ ಮಾತಾದರೆ, ಸಿನಿಮಾದಲ್ಲಿಯೂ ದೇವತೆಗಳ ಪಾತ್ರವನ್ನು ಮಾಡುವಂತೆ ಮದ್ಯ, ಮಾಂಸಾಹಾರ ಸೇವನೆ ಮಾಡುವ ನಾಯಕರಿದ್ದಾರೆ. ಡಾ.ರಾಜ್​ಕುಮಾರ್​ ಅವರು ರಾಘವೇಂದ್ರ ಸೇರಿದಂತೆ ಕೆಲವು ದೇವರ ಪಾತ್ರಗಳನ್ನು ಮಾಡುವ ವೇಳೆ ಮಾಂಸಾಹಾರ ಸೇವನೆ ಬಿಟ್ಟಿದ್ದ ಬಗ್ಗೆ ತಿಳಿಸಿದ್ದರು. ಇಂಥ ದೊಡ್ಡ ವರ್ಗವೇ ಇದೆ. ಈಗ ಇದೇ ಸಾಲಿಗೆ ಸೇರಿದ್ದಾರೆ ನಟ ರಣಬೀರ್​ ಕಪೂರ್​. ರಾಮಾಯಣ ಆಧರಿಸಿ ಸಿದ್ಧವಾದ ‘ಆದಿಪುರುಷ್’ (Adipurush Movie) ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ಬೆನ್ನಲ್ಲೇ ಇದೀಗ ರಾಮಾಯಣ ತೆರೆಯ ಮೇಲೆ ಬರಲಿದೆ. ಇದರಲ್ಲಿ ರಾಮನ ಪಾತ್ರಧಾರಿ ರಣಬೀರ್​ ಕಪೂರ್​ ಈಗ ಬಹಳ ಸುದ್ದಿಯಲ್ಲಿದ್ದಾರೆ.

ಸಾವಿನ ಸೂಚನೆ ಸಿಗ್ತಿದ್ದಂತೆಯೇ ರಾಮ ಮಂದಿರದ ಉದ್ಘಾಟನೆಗಾಗಿ ಭಜನೆ ರೆಕಾರ್ಡ್​ ಮಾಡಿದ ಲತಾ ದೀದಿ!

 ನಿತೀಶ್ ತಿವಾರಿ ಅವರು ರಾಮಾಯಾಣವನ್ನು ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ.  ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್​ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ, ರಾಮನಾಗಿ ಮಿಂಚಲಿರುವ ರಣಬೀರ್​ ಕಪೂರ್​ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದಾರಂತೆ. ಇವರು  ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದಾರೆ.  ನಟಿ ಕಂಗನಾ ರಣಾವತ್​ ಕೂಡ ರಣಬೀರ್​ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಇದೀಗ ರಣಬೀರ್​ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದಾರೆ@

ರಣಬೀರ್ ಕಪೂರ್ ಅವರು ‘ಅನಿಮಲ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಇದರ ಮಧ್ಯೆಯೇ ರಾಮಾಯಣವೂ ಶುರುವಾಗಿದೆ. ರಣಬೀರ್​ ಅವರ ಈ ಹೇಳಿಕೆ ಸ್ಟಂಟ್​ಗಾಗಿ, ಪಬ್ಲಿಸಿಟಿಗಾಗಿ ಎಂದು ಟ್ರೋಲ್​ ಮಾಡಲಾಗುತ್ತಿದೆ. ಯಾರು ಏನೇ ಹೇಳಿದರೂ ತಾವು ತಮ್ಮ ಮಾತಿಗೆ ಬದ್ಧ ಎಂದಿರುವ ನಟ, ರಾಮಾಯಣ ಸಿನಿಮಾದ ಶೂಟಿಂಗ್​ ಮುಗಿಯುವವರೆಗೂ ಮದ್ಯ, ಮಾಂಸ ಮುಟ್ಟುವುದಿಲ್ಲ ಎಂದಿದ್ದಾರೆ.  ಶ್ರೀರಾಮಚಂದ್ರನಷ್ಟೇ ಪರಿಶುದ್ಧವಾಗಿರುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಸಸ್ಯಾಹಾರಿ ಪ್ರಿಯರು ತುಂಬಾ ಖುಷಿಯಾಗಿದ್ದಾರೆ. ನಮೋ ನಮಃ ನಿಮಗೆ ಎನ್ನುತ್ತಿದ್ದಾರೆ. ಜೈಶ್ರೀರಾಮ್​ ಎಂದೂ ನಟನಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಕ್ಷಮೆ ಕೋರಿದ್ದು ಮರ್ತೋಯ್ತಾ? ಪಾನ್​ ಮಸಾಲಾ ಆ್ಯಡ್​ನಲ್ಲಿ ಪ್ರತ್ಯಕ್ಷ! ವಿಷ ತಿನ್ನಿಸೋರು ನಮ್​ ಆದರ್ಶ ನೋಡಿ ಎಂದ ಫ್ಯಾನ್ಸ್​

Follow Us:
Download App:
  • android
  • ios