Asianet Suvarna News Asianet Suvarna News

ಕ್ಷಮೆ ಕೋರಿದ್ದು ಮರ್ತೋಯ್ತಾ? ಪಾನ್​ ಮಸಾಲಾ ಆ್ಯಡ್​ನಲ್ಲಿ ಪ್ರತ್ಯಕ್ಷ! ವಿಷ ತಿನ್ನಿಸೋರು ನಮ್​ ಆದರ್ಶ ನೋಡಿ ಎಂದ ಫ್ಯಾನ್ಸ್​

ಜೀವಕ್ಕೆ ಅಪಾಯ ತರುವ ಪಾನ್​ ಮಸಾಲಾ ಜಾಹೀರಾತಿನಲ್ಲಿ ಇನ್ಮುಂದೆ ನಟಿಸಲ್ಲ ಎಂದಿದ್ದ ಅಕ್ಷಯ್​ ಕುಮಾರ್​ಗೆ ಮಾತು ಮರೆತು ಹೋಯ್ತಾ? ವೈರಲ್​ ಆಗ್ತಿದೆ ಜಾಹಿರಾತು!
 

Akshay Kumar reunites with SRK Ajay Devgn for pan masala advertise trolled suc
Author
First Published Oct 9, 2023, 4:37 PM IST

 ದೊಡ್ಡ ದೊಡ್ಡ ಜಾಹೀರಾತು ಕಂಪೆನಿಗಳು ತಮ್ಮ  ಪದಾರ್ಥಗಳನ್ನು ಸುಲಭದಲ್ಲಿ ಮಾರಾಟ ಮಾಡುವ ಉದ್ದೇಶಕ್ಕೆ ಸ್ಟಾರ್​ ನಟರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ರೂಪಾಯಿ ದುಡ್ಡು ಕೊಟ್ಟು ರಾಯಭಾರಿಗಳನ್ನಾಗಿಸುವುದು ಹೊಸ ವಿಷಯವಲ್ಲ. 10 ರೂಪಾಯಿ ಪ್ರಾಡಕ್ಟ್​ಗಳಿಂದ ಹಿಡಿದು ಸಾವಿರ, ಲಕ್ಷ ರೂಪಾಯಿ ಪ್ರಾಡಕ್ಟ್​ಗಳಿಗೂ ಚಿತ್ರ ತಾರೆಯರು ಇಲ್ಲವೇ ಕ್ರಿಕೆಟಿಗರೇ ಬೇಕು. ಇಂಥವರನ್ನು ಹಾಕಿಕೊಂಡು ಮಾಡುವ ಜಾಹೀರಾತುಗಳ ಪೈಕಿ ಹಲವು ವಿಷಪೂರಿತವಾಗಿರುವುದಾಗಿ ಇದಾಗಲೇ ಸಾಬೀತಾಗಿದೆ. ಕ್ರಿಕೆಟ್​ ತಾರೆಯರು, ಸ್ಟಾರ್​ ನಟರನ್ನು ರಾಯಭಾರಿಯನ್ನಾಗಿಸಿಕೊಂಡು ಮಾರಾಟ ಮಾಡುವ ಪಾನೀಯಗಳ ಬಗ್ಗೆ ಇದಾಗಲೇ ಎಲ್ಲರಿಗೂ ತಿಳಿದದ್ದೇ. ಇವುಗಳಲ್ಲಿ ವಿಷದ ಅಂಶ ಎಷ್ಟಿದೆ ಎನ್ನುವುದೂ ಸಾಬೀತಾದರೂ ಅವರನ್ನು ನಂಬುವ ಅಭಿಮಾನಿಗಳನ್ನು ಮರಳು ಮಾಡಲು, ಕೋಟಿಕೋಟಿ ಹಣ ಪಡೆದು ಕ್ರಿಕೆಟಿಗರು, ಚಿತ್ರನಟರು ಅದರಲ್ಲಿ ನಟಿಸುತ್ತಾರೆ. ನಿಜ ಜೀವನದಲ್ಲಿ ಅವರು ಆ ಪಾನೀಯ ಅಥವಾ ಪದಾರ್ಥಗಳ ಸೇವನೆ ಮಾಡುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಬೇರೆಯವರಿಗೆ ವಿಷಯವನ್ನು ಮಾತ್ರ ಧಾರಾಳವಾಗಿ ಉಣಿಸುತ್ತಿದ್ದಾರೆ. ಇಂಥವರನ್ನೇ ತಮ್ಮ ಆದರ್ಶ, ದೇವರು ಎಂದೆಲ್ಲಾ ಅಂದುಕೊಳ್ಳುವ ಅಭಿಮಾನಿಗಳು ಅವರನ್ನು ಅನುಸರಿಸುತ್ತಿರುವುದು ಮಾತ್ರ ಎಂದಿಗೂ ನಡೆದೇ ಇದೆ. 

ಇದೀಗ ಅದೇ ರೀತಿಯ ಜಾಹೀರಾತು ಪಾನ್​ ಮಸಾಲಾದ್ದು. ಇದರಲ್ಲಿ ಬಾಲಿವುಡ್​ ಕಿಂಗ್​ ಎಂದೇ ಖ್ಯಾತಿ ಪಡೆದಿರುವ ಶಾರುಖ್​ ಖಾನ್​ ಸೇರಿದಂತೆ ಮಾಡಿದ ಚಿತ್ರಗಳೆಲ್ಲಾ ಫ್ಲಾಪ್​  ಆಗುತ್ತಿರುವ ಅಕ್ಷಯ್​ ಕುಮಾರ್​ ಮತ್ತು ಅಜಯ್ ದೇವಗನ್​ ಕಾಣಿಸಿಕೊಂಡಿದ್ದಾರೆ. ಈ ಮೂವರ ಜೋಡಿ ವಿಮಲ್ ಪಾನ್​ ಮಸಾಲಾ ಜಾಹೀರಾತು ಮಾಡುತ್ತಾ ಬಂದಿದ್ದು ಬಹಳ ವರ್ಷಗಳೇ ಕಳೆದಿವೆ. ಇವರಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು.  ಯಾವಾಗಲೂ ಫಿಟ್​ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ವಿಮಲ್​ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್​ ಹೇಳಿದ್ದರು. 2022ರ ಏಪ್ರಿಲ್​ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್​ಮೆಂಟ್​ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ. ಬ್ರ್ಯಾಂಡ್​ನವರು ಒಪ್ಪಂದದ ಅವಧಿ ಮುಗಿಯುವವರೆಗೂ ಆ ಜಾಹೀರಾತನ್ನು ಟೆಲಿಕಾಸ್ಟ್ ಮಾಡಬಹುದು. ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರುತ್ತೇನೆ’ ಎಂದಿದ್ದರು ಅಕ್ಷಯ್ ಕುಮಾರ್. 

ನಟ ಶಾರುಖ್​ ಖಾನ್​ಗೆ ಕೊಲೆ ಬೆದರಿಕೆ! ವೈ ಪ್ಲಸ್ ಭದ್ರತೆ ನೀಡಿದ ಸರ್ಕಾರ

ಆದರೆ ಈಗ ಅವರಿಗೆ ತಾವು ಕ್ಷಮೆ ಕೋರಿದ್ದು ಮರ್ತೇ ಹೋಗಿದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ಈ ಮೂವರು ಮತ್ತೆ ಅದೇ ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.  ಅಜಯ್ ದೇವಗನ್ ಹಾಗೂ ಶಾರುಖ್ ಖಾನ್  ಕಾರಿನಲ್ಲಿ ಕುಳಿತಿರುತ್ತಾರೆ. ಅಕ್ಷಯ್ ಮನೆಯಲ್ಲಿ ಕುಳಿತು ಹೆಡ್​ಫೋನ್ ಹಾಕಿ ಹಾಡು ಕೇಳುತ್ತಾ ಇರುತ್ತಾರೆ. ಶಾರುಖ್ ಕರೆದಿದ್ದು ಅಕ್ಷಯ್​ಗೇ ಕೇಳುವುದೇ ಇಲ್ಲ. ಆಗ ಬೌಲ್ ಮೂಲಕ ಕಿಟಕಿ ಗಾಜಿಗೆ ಹೊಡೆಯುತ್ತಾರೆ ಶಾರುಖ್. ಆಗಲೂ ಅಕ್ಷಯ್​ಗೆ ಗೊತ್ತಾಗುವುದಿಲ್ಲ. ಪಕ್ಕದಲ್ಲೇ ಇರುವ ಅಜಯ್ ವಿಮಲ್ ಪಾನ್ ಮಸಾಲ ಸೇವನೆ ಮಾಡುತ್ತಾರೆ. ಈ ಗುಟ್ಕಾದಲ್ಲಿರುವ ಕೇಸರಿಯ ಪರಿಮಳ ಅಕ್ಷಯ್ ಕುಮಾರ್​ ಮೂಗಿಗೆ ಬಡಿದು ಅವರು ಕೆಳಗೆ ಇಳಿದು ಬರುವ ರೀತಿಯಲ್ಲಿ ಜಾಹೀರಾತನ್ನು ತೋರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ನಾಯಿ ಬಾಲ ಯಾವತ್ತಿಗೂ ಡೊಂಕೆ, ಹಣದ ಮುಂದೆ ಇವರಿಗೆ ಏನೂ ಕಾಣುವುದಿಲ್ಲ. ಇಂಥವರು ನಮ್ಮ ಆದರ್ಶ ಎಂದು ಜರಿಯುತ್ತಿದ್ದಾರೆ. 

 ಇದು ಹೊಸ ಜಾಹೀರಾತು ಎನ್ನಲಾಗುತ್ತಿದ್ದರೂ ಕೆಲವರು ಇದು ಹಳೆಯ ಜಾಹೀರಾತೇ ಇರಬಹುದು ಎಂದೂ ಅನ್ನುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕ ಅಕ್ಷಯ್​ ಕುಮಾರ್​ ತಮ್ಮ ಮಾತನ್ನು ತಪ್ಪುವವರಲ್ಲ ಎಂದು ಹೇಳಿರುವ ಅವರು, ಹಳೆಯ ಜಾಹೀರಾತು ಮತ್ತೆ ವೈರಲ್​ ಆಗುತ್ತಿದೆ ಎನ್ನುತ್ತಿದ್ದಾರೆ. 

ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?

 

Follow Us:
Download App:
  • android
  • ios