Asianet Suvarna News Asianet Suvarna News

ಯಶ್​ ಫ್ಯಾನ್ಸ್​ಗೆ ಕೊನೆಗೂ ಸಿಕ್ತು ಮತ್ತೊಂದು ಗುಡ್​ನ್ಯೂಸ್​: ರಾವಣನ ಆರ್ಭಟದಲ್ಲಿ ಮಿಂಚಲಿದ್ದಾರೆ ನಟ?

ರಾಮಾಯಣ ಚಿತ್ರದ ಬಿಗ್​ ಅಪ್​ಡೇಟ್​ ಒಂದು ಹೊರಕ್ಕೆ ಬಂದಿದ್ದು, ಈ ಚಿತ್ರದಲ್ಲಿ ನಟ ಯಶ್​ ಅವರು ರಾವಣನಾಗಿ ನಟಿಸುತ್ತಿರುವುದು ಬಹುತೇಕ ಖಚಿತವಾಗಿದೆ. 
 

Ranbir Kapoor Sai Pallavi stars Ramayana Yashs Raavan will have big role in  part 2 suc
Author
First Published Dec 14, 2023, 1:04 PM IST

ರಾಮಾಯಣವನ್ನು ಆಧರಿಸಿ ಇದಾಗಲೇ ಕೆಲವು ಚಿತ್ರಗಳು ಬಂದಿದ್ದು, ಇದೀಗ ಮತ್ತೊಂದು ರಾಮಾಯಣ ಚಿತ್ರದ  ಶೂಟಿಂಗ್​ ನಡೆಯುತ್ತಿದೆ. ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿರುವ ರಾಮಾಯಣ ಚಿತ್ರದ ಬಿಗ್​ ಅಪ್ಡೇಟ್​ ಒಂದು ಹೊರಬಿದ್ದಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. ಈ ಚಿತ್ರದ ಬಿಡುಗಡೆ  ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್​ ಅವರು ನಟಿಸುತ್ತಿದ್ದಾರೆ ಎನ್ನುವ ಸುದ್ದಿ. ಇವರು ನಟಿಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ರಾಮಾಯಣದಲ್ಲಿ ರಾವಣನಾಗಿ ತೆರೆ ಮೇಲೆ ಯಶ್​ ಬರುತ್ತಿರುವುದು ಬಹುತೇಕ ಖಚಿತವಾಗಿದೆ.

ಹೌದು. ಈ ಚಿತ್ರದ ಕುರಿತು ನಿರ್ದೇಶಕ ನಿತೇಶ್​ ತಿವಾರಿ ಇದುವರೆಗೂ ಸೀಕ್ರೇಟ್​ ಮೆಂಟೇನ್​ ಮಾಡುತ್ತಲೇ ಬಂದಿದ್ದಾರೆ. ಚಿತ್ರದ ಶೂಟಿಂಗ್​ ಬಗ್ಗೆಯೂ ಅವರು ಯಾವುದೇ ಮಾಹಿತಿ ಕೊಡಲಿಲ್ಲ.  ಆದರೆ ರಾಮನಾಗಿ ಕಾಣಿಸಿಕೊಳ್ಳುತ್ತಿರುವ  ರಣ್‌ಬೀರ್ ಕಪೂರ್ ಫ್ಯಾನ್​ ಅಕ್ಷಯ್ ಚತುರ್ವೇದಿ ಎನ್ನುವವರು ಮಾಡಿರುವ ಟ್ವೀಟ್​ನಿಂದ ಇದು ಈಗ ಮತ್ತೆ ಸದ್ದು ಮಾಡುತ್ತಿದೆ.  'ರಾಮಾಯಣ' 2024ರ ಬೇಸಿಗೆಯಲ್ಲಿ ಶುರುವಾಗಲಿದೆ ಎಂದು ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ವೇಳೆ ನಿಂತಿದ್ದ ಸಂದರ್ಭದಲ್ಲಿ  ರಣ್‌ಬೀರ್ ಕಪೂರ್ ಜೊತೆ ಮಾತನಾಡುತ್ತಿದ್ದೆ. ಆ ಸಮಯದಲ್ಲಿ ಈ ವಿಷಯ ತಿಳಿದಿದೆ.   ರಾಮಾಯಣ 2024 ಬೇಸಿಗೆಯಿಂದ ಶುರುವಾಗುತ್ತೆ ಎಂದು ಅವರೇ ಹೇಳಿದರು ಎಂದು ಅಕ್ಷಯ್​ ಅವರು ಬರೆದುಕೊಂಡಿದ್ದಾರೆ. 

ರಣಬೀರ್​ ಜೊತೆ ಬೆತ್ತಲಾದಾಗ ಉದ್ವೇಗಗೊಂಡೆ, ಕೈ ಉಜ್ಜಿಕೊಳ್ತಿದ್ದನ್ನು ಅಪ್ಪ ಗಮನಿಸಿ ಹೀಗೆ ಕೇಳಿದ್ರು...

ಅಷ್ಟಕ್ಕೂ, ಯಶ್​  ಅವರು, ತಮ್ಮ ಹೊಸ ಸಿನಿಮಾದ ಘೋಷಣೆಯನ್ನು  ಇತ್ತೀಚೆಗಷ್ಟೆ ಮಾಡಿದ್ದಾರೆ. ತಾವು  ‘ಕಾಕ್ಸಿಕ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದರು. ಇದರ ನಡುವೆಯೇ, ರಾಮಾಯಣದ ಶೂಟಿಂಗ್​ನಲ್ಲಿಯೂ ಭಾಗಿಯಾಗುತ್ತಾರೆ ಎನ್ನಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿನಿಮಾದ ಚಿತ್ರೀಕರಣ ಮಾಡಲು ನಿರ್ದೇಶಕರು ತಯಾರಾಗಿದ್ದು, ಸಿನಿಮಾದ ಚಿತ್ರೀಕರಣಕ್ಕೆ ಮುನ್ನ ತಂತ್ರಜ್ಞಾನದ ಬಗ್ಗೆ ನಟರಿಗೆ ತರಬೇತಿ ನೀಡುವ ಕಾರ್ಯ ಪ್ರಸ್ತುತ ಚಾಲ್ತಿಯಲ್ಲಿದೆ.    ಸಿನಿಮಾಕ್ಕಾಗಿ ನಟರ ಲುಕ್ ಟೆಸ್ಟ್, 3ಡಿ ಪರೀಕ್ಷೆ ಮಾಡಲಾಗಿದ್ದು,  ಈ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಮೊದಲ ಭಾಗದಲ್ಲಿ ಯಶ್​ರ ಪಾತ್ರ ಕಡಿಮೆ ಕಾಣಿಸಿಕೊಳ್ಳಲಿದೆ. ಎರಡನೇ ಭಾಗದಲ್ಲಿ ಯಶ್​ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇದೆ ಎಂಬ ಸುದ್ದಿ ಇದೆ. 

ಇದಾಗಲೇ, ರಾಮನಾಗಿ ಮಿಂಚಲಿರುವ ರಣಬೀರ್​ ಕಪೂರ್​ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದಾರೆ ಎಂದು ಈ ಹಿಂದೆಯೇ ತಿಳಿಸಿದ್ದರು.  ಇವರು  ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ ಕಂಗನಾ ರಣಾವತ್​ ಕೂಡ ರಣಬೀರ್​ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಇದೀಗ ರಣಬೀರ್​ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದರು. ಇದರ ನಡುವೆಯೇ ಅವರ ಅನಿಮಲ್​ ಸಿನಿಮಾ ಸಾಕಷ್ಟು ಹಲ್​ಚಲ್​ ಸೃಷ್ಟಿಸುತ್ತಿದೆ.  

Entertainment 2023: ಈ ವರ್ಷ ಗೂಗಲ್​ನಲ್ಲಿ ಹುಡುಕಾಟ ನಡೆಸಿದ ಟಾಪ್​-10 ಚಿತ್ರಗಳ ಡಿಟೇಲ್ಸ್​ ಇಲ್ಲಿದೆ...
 

Follow Us:
Download App:
  • android
  • ios