Asianet Suvarna News Asianet Suvarna News

ರಣಬೀರ್​ ಜೊತೆ ಬೆತ್ತಲಾದಾಗ ಉದ್ವೇಗಗೊಂಡೆ, ಕೈ ಉಜ್ಜಿಕೊಳ್ತಿದ್ದನ್ನು ಅಪ್ಪ ಗಮನಿಸಿ ಹೀಗೆ ಕೇಳಿದ್ರು...

ಅನಿಮಲ್​ ಚಿತ್ರದಲ್ಲಿ ಬೆತ್ತಲೆ ದೃಶ್ಯವನ್ನು ನೋಡಿದ ತಮ್ಮ ತಂದೆ ಕರೆ ಮಾಡಿ ಈ ಬಗ್ಗೆ ಕೇಳಿದ್ರು ಎಂದು ಹೇಳಿದ ನಟಿ ತೃಪ್ತಿ ಡಿಮ್ರಿ. ಅವರು ಹೇಳಿದ್ದೇನು? 
 

Triptii Dimri On The Viral Clip Of Her Staring Animal At Ranbir Kapoor says dad called her suc
Author
First Published Dec 12, 2023, 11:39 AM IST

ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ. ಡಿಸೆಂಬರ್​ 1ರಂದು ಬಿಡುಗಡೆಯಾದ ಈ ಚಿತ್ರ 12ನೇ ದಿನಕ್ಕೆ ಕಾಲಿಟ್ಟಿದೆ. ಇದಾಗಲೇ ಚಿತ್ರ 718 ಕೋಟಿ ರೂಪಾಯಿಗಳನ್ನು ವಿಶ್ವಾದ್ಯಂತ ಬಾಚಿಕೊಂಡಿದೆ. ಹಲವು ಸೂಪರ್​ಹಿಟ್​, ಬ್ಲಾಕ್​ಬಸ್ಟರ್​ ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿ ಮುನ್ನುಗ್ಗುತ್ತಿದೆ. ಮಿತಿ ಮೀರಿದ ಅಶ್ಲೀಲತೆ, ಹಿಂಸಾಚಾರ, ಕೌಟುಂಬಿಕ ದೌರ್ಜನ್ಯ, ರಕ್ತಪಾತ ಇವುಗಳನ್ನು ಎಂಜಾಯ್​ ಮಾಡುತ್ತಿರುವ ಪ್ರೇಕ್ಷಕರು ದಿನದಿಂದ ದಿನಕ್ಕೆ ಈ ಚಿತ್ರದತ್ತ ವಾಲುತ್ತಿದ್ದಾರೆ. ಚಿತ್ರದ ಹಲವಾರು ಹಿಂಸಾತ್ಮಕ, ಅಶ್ಲೀಲ ದೃಶ್ಯಗಳಿಗೆ ಸೆನ್ಸಾರ್​ ಮಂಡಳಿ ಕತ್ತರಿ ಹಾಕಿ ಅಡಲ್ಟ್​ ಸರ್ಟಿಫಿಕೇಟ್​ ನೀಡಿದ್ದು ಸುತ್ತಿಯಾಗುತ್ತಿದ್ದಂತೆಯೇ ಜನರು ಈ ಚಿತ್ರ ನೋಡಲು ಮತ್ತಷ್ಟು ಉತ್ಸುಕರಾಗುತ್ತಿದ್ದಾರೆ. 

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ದಂಪತಿಯಾಗಿ ಕಾಣಿಸಿಕೊಂಡಿದ್ದರೆ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಹಾಡೊಂದರ ಟ್ರೇಲರ್​ ರಿಲೀಸ್​ ಆದಾಗ ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯದಿಂದ ಭಾರಿ ಸುದ್ದಿಯಾಗಿತ್ತು. ಆದರೆ ಈಕೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಮತ್ತು ರಣಬೀರ್​ ಕಪೂರ್​ ಅವರ ಸಂಪೂರ್ಣ ಬೆತ್ತಲೆ ದೃಶ್ಯದ ಸುದ್ದಿಯಾಗುತ್ತಿದ್ದಂತೆಯೇ ರಶ್ಮಿಕಾ ಸೈಡ್​ಗೆ ಹೋಗಿದ್ದಾರೆ, ಎಲ್ಲೆಲ್ಲೂ ತೃಪ್ತಿಯದ್ದೇ ಮಾತು. ರಾತ್ರೋರಾತ್ರಿ ಈಕೆ ರಶ್ಮಿಕಾ ಮಂದಣ್ಣನವರ ನ್ಯಾಷನಲ್​ ಕ್ರಷ್​ ಪಟ್ಟವನ್ನೂ ಕಿತ್ತುಕೊಂಡಿದ್ದಾರೆ. ಈಕೆಯ ಇನ್​ಸ್ಟಾಗ್ರಾಮ್​ ಖಾತೆಯ ಫಾಲೋವರ್ಸ್​​ ಸಂಖ್ಯೆ ದಿಢೀರನೆ ಐದಾರು ಪಟ್ಟು ಹೆಚ್ಚಾಗಿದೆ.

ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

ತೃಪ್ತಿ ಡಿಮ್ರಿ ಸಂಪೂರ್ಣ ಬೆತ್ತಲೆ ದೃಶ್ಯ ಮಾಡಿದ್ದನ್ನು ನೋಡಿ ಹಲವರು ಸೋಷಿಯಲ್​ ಮೀಡಿಯಾದಲ್ಲಿ ಕಿಡಿ ಕಾರುತ್ತಲಿದ್ದಾರೆ. ಅಸಭ್ಯದ ಪರಮಾವಧಿ ಎಂದೆಲ್ಲಾ ಹೇಳುತ್ತಿದ್ದಾರೆ. ಅದೇ ವೇಳೆ ಮಗಳು ಇಂಥ ದೃಶ್ಯದಲ್ಲಿ ಕಾಣಿಸಿಕೊಂಡಾಗ ಅಪ್ಪ-ಅಮ್ಮ ಸುಮ್ಮನಿರುತ್ತಾರಾ ಎಂದು ಹಲವು ಮಂದಿಗೆ ಅನ್ನಿಸುವುದು ಉಂಟು. ಆದರೆ ಬಹುಶಃ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಇವೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ ಎನ್ನುವ ಮಾತೂ ಇದೆ. ಆದರೆ ಇದೇ ಪ್ರಶ್ನೆ ತೃಪ್ತಿ ಅವರಿಗೂ ಎದುರಾಗಿದೆ. ಅಪ್ಪ-ಅಮ್ಮನಿಗೆ ಏನು ಹೇಳಿದರು ಎಂದು ತೃಪ್ತಿಗೆ ಪ್ರಶ್ನಿಸಲಾಗಿದೆ. ಆಗ, ನಟಿ, ಬೆತ್ತಲೆ ದೃಶ್ಯವನ್ನು ನೋಡಿ ಅಪ್ಪ ಕಾಲ್​ ಮಾಡಿ ತುಂಬಾ ನರ್ವಸ್​ ಆದ ಹಾಗೆ ಕಾಣಿಸುತ್ತಿದೆ ಎಂದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಹೌದು. ನಿನಗೆ ಹೇಗೆ ಗೊತ್ತಾಯ್ತು ಎಂದು ಕೇಳಿದೆ. ಆಗ ಅವರು, ಆ ಬೆತ್ತಲೆ ವಿಡಿಯೋದಲ್ಲಿ ಕೈಗಳನ್ನು ನಿರಂತರವಾಗಿ ಉಜ್ಜಿಕೊಳ್ಳುತ್ತಿದ್ದಿ. ಸಾಮಾನ್ಯವಾಗಿ ನಿನಗೆ ಟೆನ್ಷನ್​ ಆದಾಗ ಹೀಗೆ ಮಾಡುತ್ತಿ ಎನ್ನುವುದು ಗೊತ್ತು. ಅದಕ್ಕೇ ಆ ದೃಶ್ಯವನ್ನು ಮಾಡುವಾಗ ನೀನು ಟೆನ್ಷನ್​ ಆಗಿದ್ದಿ ಎನ್ನುವುದು ತಿಳಿಯಿತು ಎಂದಿದ್ದಾರೆ.

ಅದೇ ವೇಳೆ ರಣಬೀರ್​ ಕಪೂರ್​ ಅಂಥ ನಟನ ಎದುರು ಯಾರಾದರೂ ಉದ್ವೇಗಗೊಳ್ಳುವುದು ಸಹಜ. ಅದೇ ರೀತಿ ನನಗೂ ಆಯಿತು. ದೃಶ್ಯ ಮಾಡುವಾಗ ಟೆನ್ಷನ್​ ಆಗಿತ್ತು. ಇದೇ ಕಾರಣಕ್ಕೆ ಕೈ ಉಜ್ಜಿಕೊಳ್ಳುತ್ತಿದ್ದೆ. ಅದನ್ನೇ ಅಪ್ಪ ಕೇಳಿದರು ಎಂದು ಹೇಳಿದ್ದಾರೆ. ಅದೇ ವೇಳೆ, ತಾವು ಟೆನ್ಷನ್​ ಆಗಿರುವುದಕ್ಕೆ ಇನ್ನೊಂದು ಕಾರಣ ನೀಡಿದ ನಟಿ, ಐದು ವರ್ಷಗಳ ನಂತರ ಇದು ತನ್ನ ಮೊದಲ ಬಿಡುಗಡೆಯಾದ ಸಿನಿಮಾ. ಈ ಕಾರಣದಿಂದ ನಾನು ಆತಂಕಕ್ಕೊಳಗಾಗಿದ್ದೆ.  ರಣಬೀರ್‌ನಂತಹ ಸೂಪರ್‌ಸ್ಟಾರ್‌ನೊಂದಿಗೆ ನಿಂತಾಗ ಜನರು ಭಯಭೀತರಾಗುತ್ತಾರೆ.  ರಣಬೀರ್ ಯಾರೊಂದಿಗಾದರೂ ಸಂಭಾಷಿಸುತ್ತಿರುವಾಗ, ಎದುರು ಇರುವವರು ತಮಗೆ ಅರಿವಿಲ್ಲದೇ ಅವರನ್ನು ನೋಡುವುದು ಸಹಜ ಎಂದಿದ್ದಾರೆ.

'ಅನಿಮಲ್'ನಲ್ಲಿ ರಶ್ಮಿಕಾ ನೋಡಿ ಡೀಪ್​ಫೇಕ್​ನವ್ರು ಬೆಚ್ಚಿ ಬಿದ್ರಂತೆ! ಕ್ಷಮಿಸಿ ಎಂದ ಅಮಿತಾಭ್- ಕಾಲೆಳೆದ ಫ್ಯಾನ್ಸ್​!

Follow Us:
Download App:
  • android
  • ios