ಮನೆಬಾಗಿಲಲ್ಲಿ ಅಲಿಯಾ ಬಿಚ್ಚಿಟ್ಟ ಚಪ್ಪಲಿ ಎತ್ತಿಟ್ಟ ರಣಬೀರ್: ಅಭಿಮಾನಿಗಳ ಹೃದಯಗೆದ್ದ ವಿಡಿಯೋ ವೈರಲ್

ಮನೆಬಾಗಿಲಲ್ಲಿ ಅಲಿಯಾ ಬಿಚ್ಚಿಟ್ಟ ಚಪ್ಪಲಿಯನ್ನು ಪತಿ ರಣಬೀರ್ ಕಪೂರ್ ಎತ್ತಿಟ್ಟ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳ ಹೃದಯಗೆದ್ದಿದೆ. 

Ranbir Kapoor gesture for Alia Bhatt at Aditya Chopra house wins fans hearts sgk

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೋಡಿ ಬಾಲಿವುಡ್‌ನ ಪವರ್‌ಫುಲ್ ಜೋಡಿಗಳಲ್ಲಿ ಒಂದು. ಒಂದಲ್ಲೊಂದು ವಿಚಾರಕ್ಕೆ ರಣಬೀರ್-ಆಲಿಯಾ ಜೋಡಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಲಿಯಾ ಚಪ್ಪಲಿಯನ್ನು ಎತ್ತಿಡುವ ಮೂಲಕ ರಣಬೀರ್ ಅಭಿಮಾನಿಗಳ ಹೃಯ ಗೆದ್ದಿದ್ದಾರೆ. ಇತ್ತೀಚೆಗಷ್ಟೆ ಖ್ಯಾತ ಸಿನಿಮಾ ನಿರ್ಮಾಪಕ ಯಶ್ ಚೋಪ್ರಾ ಅವರ ಪತ್ನಿ, ನಿರ್ಮಾಪಕಿ-ಗಾಯಕಿ ಪಮೇಲಾ ಚೋಪ್ರಾ ನಿಧನರಾದರು. ಬಾಲಿವುಡ್‌ನ ಬಹುತೇಕ ಗಣ್ಯರು ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದರು. ಬಾಲಿವುಡ್ ಸೆಲೆಬ್ರಿಟಿಗಳು ಚೋಪ್ರಾ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು. ರಣಬೀರ್ ಕಪೂರ್-ಆಲಿಯಾ, ಮತ್ತು ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ, ಕತ್ರಿನಾ-ವಿಕ್ಕಿ ಕೌಶಲ್, ಅಜಯ್ ದೇವಗನ್-ಕಾಜೋಲ್ ಮತ್ತು ಕರೀನಾ ಕಪೂರ್-ಸೈಫ್ ಅಲಿ ಖಾನ್ ಸೇರಿದಂತೆ ಬಹುತೇಕ ಗಣ್ಯರು ಭೇಟಿ ಮಾಡಿ ಅಂತಿಮ ದರ್ಶನ ಪಡೆದರು. 

ಚೋಪ್ರಾ ಮನೆಗೆ ಭೇಟಿ ನೀಡಿದ ರಣಬೀರ್ ಮತ್ತು ಅಲಿಯಾ ಜೋಡಿಯ ವಿಡಿಯೋ ವೈರಲ್ ಆಗಿದೆ. ಮುಂದಿನ ಸಾಗಿದ ಆಲಿಯಾ ಚಪ್ಪಲಿಯನ್ನು ಮನೆಯ ಬಾಗಿಲಿನಲ್ಲೇ ಬಿಟ್ಟು ಒಳಗೆ ಎಂಟ್ರಿ ಕೊಟ್ಟರು. ಹಿಂದೆ ಬಂದ ರಣಬೀರ್ ಕಪೂರ್ ಪತ್ನಿ ಅಲಿಯಾ ಚಪ್ಪಲಿಯನ್ನು ಎತ್ತಿ ಒಳಗೆ ಇಟ್ಟರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳನ್ನು ರಣಬೀರ್ ಕಪೂರ್ ಅವರನ್ನು ಕೊಂಡಾಡುತ್ತಿದ್ದಾರೆ.  ಎಂಥ ನಡತೆ ಎಂದು ಹೊಗಳುತ್ತಿದ್ದಾರೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ವೆಡ್ಡಿಂಗ್ ಆನಿವರ್ಸರಿ ದಿನ ಪತ್ನಿಗೆ 10 ಲಕ್ಷ ರೂ. ಬ್ಯಾಗ್‌ ಕೊಟ್ಟ ರಣಬೀರ್; ನೋಡಿ ಬುದ್ಧಿ ಕಲಿ ಎಂದ ಪಕ್ಕದ ಮನೆ ಆಂಟಿ

ಇತ್ತೀಚೆಗಷ್ಟೆ ಅಲಿಯಾ ಮತ್ತು ರಣಬೀರ್ ದಂಪತಿ ಒಂದು ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಇಬ್ಬರೂ ವಿದೇಶದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಆಲಿಯಾ ಭಟ್‌ಗೆ ಪತಿ ರಣಬೀರ್ ದುಬಾರಿ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ. ಸುಮಾರು 10 ಲಕ್ಷ ಬೆಲಬಾಳುವ ಬ್ಟಾಗ್ ನೀಡಿದ್ದಾರೆ ಎನ್ನಲಾಗಿದೆ.


ಮೊದಲ ವಿವಾಹ ವಾರ್ಷಿಕೋತ್ಸವ: ರಣಬೀರ್‌ ಜೊತೆಯ ಅಪರೂಪದ ಫೋಟೋ ಹಂಚಿಕೊಂಡ ಆಲಿಯಾ!

ಅಲಿಯಾ ಮತ್ತು ರಣಬೀರ್ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಮಗಳಿಗೆ ರಾಹಾ ಎಂದು ನಾಮಕರಣ ಮಾಡಿದ್ದಾರೆ. ಮದುವೆಯಾಗಿ ಒಂದು ವರ್ಷದೊಳಗೆ ಆಲಿಯಾ ಮಗಳಿಗೆ ಜನ್ಮ ನೀಡಿ ಸಿನಿಮಾ ಕೆಲದಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಆಲಿಯಾ ಕರಣ್ ಜೋಹರ್ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ಸದ್ಯ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದು ಸಂದೀಪ್ ರೆಡ್ಡಿ ವಾಂಗಾ ಆಕ್ಷನ್ ಹೇಳುತ್ತಿದ್ದಾರೆ. 

Latest Videos
Follow Us:
Download App:
  • android
  • ios