ವೆಡ್ಡಿಂಗ್ ಆನಿವರ್ಸರಿ ದಿನ ಪತ್ನಿಗೆ 10 ಲಕ್ಷ ರೂ. ಬ್ಯಾಗ್ ಕೊಟ್ಟ ರಣಬೀರ್; ನೋಡಿ ಬುದ್ಧಿ ಕಲಿ ಎಂದ ಪಕ್ಕದ ಮನೆ ಆಂಟಿ
ಆಲಿಯಾ ಭಟ್‌ಗೆ ದುಬಾರಿ ಗಿಫ್ಟ್ ಕೊಟ್ಟ ರಣಬೀರ್ ಕಪೂರ್. ಪ್ಯಾಪರಾಜಿಗಳು ಸೆರೆ ಹಿಡಿದ ವಿಡಿಯೋದಲ್ಲಿ ಗಿಫ್ಟ್ ಸೆರೆ...
ಬಾಲಿವುಡ್ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ ಮತ್ತು ಬ್ಯೂಟಿ ಆಲಿಯಾ ಭಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಏಪ್ರಿಲ್ 14ಕಕ್ಕೆ ಒಂದು ವರ್ಷವಾಗುತ್ತದೆ.
ಬ್ರಹ್ಮಾಸ್ತ್ರ ಸಿನಿಮಾ ಚಿತ್ರೀಕರಣದ ವೇಳೆ ಫುಲ್ ಲವ್ ಡವ್‌ನಲ್ಲಿ ಬಿದ್ದ ಈ ಜೋಡಿ ಪ್ರೀತಿ ಅದ್ಧೂರಿಯಾಗಿ ನಿವಾಸದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಣಬೀರ್ ಕಪೂರ್ ಸಮಯ ಮಾಡಿಕೊಂಡು ತಕ್ಷಣ ಫ್ಲೈಟ್ ತೆಗೆದುಕೊಂಡು ಆಲಿಯಾ ಜೊತೆ ಸಮಯ ಕಳೆದಿದ್ದಾರೆ.
ಪತ್ನಿಯನ್ನು ಭೇಟಿ ಮಾಡುವ ಸಮಯದಲ್ಲಿ ರಣಬೀರ್ ಕಪೂರ್ ಕೈಯಲ್ಲಿ Channel ಬ್ರ್ಯಾಂಡ್‌ನ ಬ್ಯಾಗ್ ಹಿಡಿದುಕೊಂಡು ಹೋಗುತ್ತಾರೆ.
ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಲೆಕ್ಕಾಚಾರ ಹಾಕಿರುವ ಪ್ರಕಾರ ಈ ಬ್ರ್ಯಾಂಡ್‌ನ ಬ್ಯಾಗ್‌ಗಳ ಬೆಲೆ ಕನಿಷ್ಠ 10 ಲಕ್ಷ ಇರುತ್ತದೆ ಎನ್ನಲಾಗಿದೆ.
ಮಗಳು ರಾಹಾ ಕಪೂರ್ ಕಪೂರ್ ಜೊತೆ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಆಚರಣೆ ಅಗಿರುವ ಕಾರಣ ಎಲ್ಲಿ ಫೋಟೋ ಹಂಚಿಕೊಂಡಿಲ್ಲ.
ಪತ್ನಿಗೆ ಎಷ್ಟು ಪ್ರೀತಿಯಿಂದ ದುಬಾರಿ ಗಿಫ್ಟ್ ಕೊಡುತ್ತಿದ್ದಾರೆ ನೀವು ಇದ್ದೀರಾ ಹಾಗೆ ಹೀಗೆ ಎಂದು ಪಕ್ಕದ ಮನೆ ಆಂಟಿ ಅವರ ಗಂಡಂಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರಂತೆ. ಕಾಮೆಂಟ್‌ಗಳು ಹರಿದು ಬಂದಿದೆ.