Asianet Suvarna News Asianet Suvarna News

ರಮ್ಯಾ ಕೃಷ್ಣನ್​ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ನಟಿ ಹೇಳಿದ್ದೇನು? ಪಕ್ಷ ಯಾವುದು?

ರಮ್ಯಾ ಕೃಷ್ಣನ್​ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ನಟಿ ಹೇಳಿದ್ದೇನು?
 

Ramya Krishnan is going to join politics which party suc
Author
First Published Aug 30, 2023, 3:21 PM IST

1990ರಿಂದ ಹಿಡಿದು 2-3 ದಶಕ ಸಿನಿರಂಗವನ್ನು ಆಳಿದ ನಟಿ ರಮ್ಯಾ ಕೃಷ್ಣನ್ (Ramya Krishan)​. ಈಗ ವಯಸ್ಸು 52 ಆದರೂ ಆ ತೇಜಸ್ಸಿಗೆ ಏನೂ ಕೊರತೆಯಿಲ್ಲ. 2003ರಲ್ಲಿ ಬಿಡುಗಡೆಗೊಂಡಿದ್ದ ಉಪೇಂದ್ರ ಅವರ ರಕ್ತ ಕಣ್ಣೀರು ಚಿತ್ರದಲ್ಲಿ ಬಾ ಬಾರೋ ರಸಿಕ ಹಾಡಿಗೆ ನರ್ತಿಸಿ ಯುವಕರ ಹೃದಯದಲ್ಲಿ ಕಿಚ್ಚು ಹೊತ್ತಿಸಿದ ನಟಿ ಈಕೆ. ಬ್ಲ್ಯಾಕ್​ ಆ್ಯಂಡ್​ ಚಿತ್ರದಿಂದ ಹಿಡಿದು ಇತ್ತೀಚಿನ ಚಿತ್ರಗಳವರೆಗೂ ನಾಯಕಿಯಾಗಿ ನಟಿಸುತ್ತಲೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ನಟರು ವಯಸ್ಸು 60 ಮೀರಿದರೂ ನಟರಾಗಿಯೇ ಇರುವುದು ಸಾಮಾನ್ಯವಾಗಿದೆ. ಆದರೆ ನಟಿಯರ ವಿಷಯ ಹಾಗಲ್ಲ, ಅವರು ಎಷ್ಟೇ ಫಿಟ್​ ಆ್ಯಂಡ್​ ಫೈನ್​ ಆಗಿದ್ದರೂ ಒಂದು ಹಂತಕ್ಕೆ ಬಂದಾಗ ಪೋಷಕ ಪಾತ್ರದಲ್ಲಿಯೇ ಕಾಣಿಸಿಕೊಳ್ಳಬೇಕು. ನಾಯಕನ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡವರೂ ಸ್ವಲ್ಪ ವರ್ಷ ಬಿಟ್ಟು ಅದೇ ನಾಯಕನಿಗೆ ತಾಯಿಯಾಗಿಯೂ ನಟಿಸಿರುವ ಉದಾಹರಣೆಗಳಿವೆ. 

ಆದರೆ ಇವರಿಗಿಂತ  ರಮ್ಯಾ ಕೊಂಚ ಭಿನ್ನವಾಗಿದ್ದಾರೆ. ವಯಸ್ಸು 40 ದಾಟಿದರೂ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ನಾಲ್ಕು ಫಿಲ್ಮ್​ಫೇರ್​ (Film Fare) ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ  ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಇವರು ಫೇಮಸ್​. ಮೋಡಿ ಮಾಡುವ ಅಭಿನಯ, ನೃತ್ಯದ ಮೂಲಕ ಎಲ್ಲರ ಹೃದಯ ಗೆದ್ದಿರುವ ನಟಿ   ಭರತನಾಟ್ಯ,ಕೂಚಿಪೂಡಿಯಂಥ ಶಾಸ್ತ್ರೀಯ ನೃತ್ಯಗಳಲ್ಲಿಯೂ ಎತ್ತಿದ ಕೈ.  ‘ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ (ದೇವಸೇನಾ) ಪಾತ್ರದಲ್ಲಿ ನಟಿಸಿದ್ದ ‘ಬಾಹುಬಲಿ’ ತಾಯಿ ರಮ್ಯಾ ಕೃಷ್ಣನ್ ಈ ಚಿತ್ರದಲ್ಲಿ ರಮ್ಯಾ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಲ್ಲದೆ, ಚಿತ್ರದಲ್ಲಿನ ಅವರ ಸಂಭಾಷಣೆಗಳಿಗೆ ಅಭಿಮಾನಿಗಳು ಶಿಳ್ಳೆಯ ಮೇಲೆ ಶಿಳ್ಳೆ ಹೊಡೆದಿದ್ದರು.

ಬಾಯ್​ಫ್ರೆಂಡ್​​ ಜೊತೆ ತಿರುಪತಿಗೆ ಹೋದ ಜಾಹ್ನವಿ ಕಪೂರ್​ ಬೆರಳಲ್ಲಿ ವಜ್ರದ ಉಂಗುರ! ಆಗಿದ್ದೇನು?

ಇವೆಲ್ಲಾ ಹಳೆ ಸುದ್ದಿಗಳಾದವು ಇದೀಗ ಹೊಸ ಸುದ್ದಿ ಏನಪ್ಪಾ ಎಂದರೆ, ರಮ್ಯಾ ಕೃಷ್ಣನ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎನ್ನುವುದು. ಕೆಲವು ಚಿತ್ರ ತಾರೆಯರು ಒಂದು ಹಂತ ತಲುಪಿದ ಮೇಲೆ ರಾಜಕೀಯ ಪ್ರವೇಶ ಮಾಡುವುದು ಮಾಮೂಲು. ಕೆಲವರಿಗೆ ಅದೃಷ್ಟ ಒಲಿದರೆ, ರಾಜಕೀಯಲ್ಲಿ ಹಲವು ತಾರೆಯರಿಗೆ ಅದೃಷ್ಟ ಖುಲಾಯಿಸುವುದು ಕಷ್ಟವೇ. ಅದೇನೇ ಇದ್ದರೂ ಈಗ ರಮ್ಯಾ ಕೃಷ್ಣನ್​ ಅವರ ವಿಷಯ ಬಹಳ ಸುಳಿದಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ವೈಸಿಪಿ ನಾಯಕಿ ಹಾಗೂ ಸಚಿವೆ ರೋಜಾ (Roja) ಅವರನ್ನು ರಮ್ಯಾಕೃಷ್ಣ ಈಚೆಗೆ ಭೇಟಿ ಮಾಡಿದ್ದರು.   ರೋಜಾ ಅವರ ಮನೆಗೂ ಹೋಗಿದ್ದರು. ಇದರಿಂದ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
 
ಇದಕ್ಕೆ ಸ್ಪಷ್ಟೀಕರಣ ನೀಡಿರುವ ರಮ್ಯಾ ಕೃಷ್ಣ, ಸದ್ಯ ಅಂಥದ್ದೇನೂ ವಿಷಯವಿಲ್ಲ ಎಂದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ರೋಜಾ ಅವರ ಸಹಾಯವನ್ನು ತೆಗೆದುಕೊಂಡಿದ್ದೆ ಮತ್ತು ರೋಜಾ ಅವರನ್ನು ನೋಡಿ ಬಹಳ ದಿನಗಳಾಗಿದ್ದರಿಂದ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಒಂದು ವೇಳೆ  ರಾಜಕೀಯ ಸೇರುವ ಯೋಚನೆ ಇದ್ದರೆ ನಿಮಗೇ ಮೊದಲು ತಿಳಿಸುತ್ತೇನೆ,  ಯಾವ ಪಕ್ಷ ಎಂದೂ ಆಗಲೇ ಹೇಳುತ್ತೇನೆ ಎನ್ನುವ ಮೂಲಕ ಸದ್ಯ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.

ಯಾ ಅಲ್ಹಾ... ಮಹಿಳೆಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸು... ಮೆಕ್ಕಾದಲ್ಲಿ ಬಿಕ್ಕಿಬಿಕ್ಕಿ ಅತ್ತ ರಾಖಿ ಸಾವಂತ್​!
 

Follow Us:
Download App:
  • android
  • ios