ಯಾ ಅಲ್ಹಾ... ಮಹಿಳೆಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸು... ಮೆಕ್ಕಾದಲ್ಲಿ ಬಿಕ್ಕಿಬಿಕ್ಕಿ ಅತ್ತ ರಾಖಿ ಸಾವಂತ್!
ನಟಿ ರಾಖಿ ಸಾವಂತ್ ಇಸ್ಲಾಂಗೆ ಮತಾಂತರಗೊಂಡ ಬಳಿಕ ಈಗ ಮೆಕ್ಕಾಗೆ ಹೋಗಿ ಉಮ್ರಾ ನೆರವೇರಿಸಿದ್ದಾರೆ. ತಮ್ಮ ಪತಿ ತಮಗೆ ಮೋಸ ಮಾಡಿದ್ದು ನ್ಯಾಯ ಕೊಡಿಸುವಂತೆ ಅಲ್ಹಾನಲ್ಲಿ ಬೇಡಿಕೊಂಡಿದ್ದಾರೆ.
ಯಾ ಅಲ್ಹಾ... ಇದೇನು ಮಾಡಿದೆ. ಆತ ನನ್ನ ಜೀವನ ಹಾಳು ಮಾಡಿದ. ಬಾಲಿವುಡ್ನಲ್ಲಿ (Bollywood) ಮಿಂಚಲು ನನ್ನನ್ನು ಬಳಸಿಕೊಂಡ. ಮಹಿಳೆಯೊಬ್ಬಳ ಜೀವನವನ್ನೇ ಬರ್ಬಾದ್ ಮಾಡಿದ. ನ್ಯಾಯ ಕೋರಿ ನಿನ್ನ ಬಳಿ ಬಂದಿದ್ದೇನೆ. ನನಗೆ ನ್ಯಾಯ ಕೊಡಿಸು. ನನ್ನ ಜೀವನ ಅವನಿಂದ ಹಾಳಾಗಿ ಹೋಯ್ತು... ಎಂದು ನಟಿ ರಾಖಿ ಸಾವಂತ್ ಮೆಕ್ಕಾದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅದರ ವಿಡಿಯೋ ಸಕತ್ ವೈರಲ್ ಆಗಿದೆ. ತಮ್ಮ ಮಾಜಿ ಪತಿ ಆದಿಲ್ ಖಾನ್ ದುರ್ರಾನಿ (Adil Khan Durrani) ತಮಗೆ ಮೋಸ ಮಾಡಿರುವುದಾಗಿ ಒಂದೇ ಸಮನೆ ಮೆಕ್ಕಾದಲ್ಲಿ ರೋಧಿಸಿದ್ದಾರೆ ರಾಖಿ ಸಾವಂತ್. ಕೆಲ ದಿನಗಳ ಹಿಂದೆ ಉಮ್ರಾ ನೆರವೇರಿಸಲು ( ಉಮ್ರಾ ಎಂದರೆ ಮುಸ್ಲಿಮರು ಮೆಕ್ಕಾದಲ್ಲಿರುವ ಮಸ್ಜಿದ್ ಅಲ್-ಹರಾಮ್‌ಗೆ ಮಾಡುವ ತೀರ್ಥಯಾತ್ರೆಯಾಗಿದೆ) ರಾಖಿ ಮೆಕ್ಕಾಗೆ ಹೋಗಿದ್ದು, ಅಲ್ಲಿಯ ಮಸ್ಜಿದ್-ಅಲ್-ಹರಾಮ್ ನಲ್ಲಿ ಉಮ್ರಾ ನೆರವೇರಿಸಿದ್ದಾರೆ. ಆಕೆಯ ಸ್ನೇಹಿತ ವಹಿದ್ ಅಲಿ ಖಾನ್ ಮತ್ತು ಅವರ ಪತ್ನಿ ಶೈಸ್ತಾ ಅಲಿ ಖಾನ್ ಜೊತೆಗೆ ರಾಖಿ ಮೆಕ್ಕಾಗೆ ಹೋಗಿದ್ದರು. ಹೋಗುವ ಮುನ್ನ ವಿಡಿಯೋ ಶೇರ್ ಮಾಡಿದ್ದ ರಾಖಿ, ಉಮ್ರಾಕ್ಕೆ ಹೊರಡುತ್ತಿದ್ದೇನೆ. ಅಲ್ಲಿಂದ ಕರೆ ಬಂದಿದೆ ಎಂದಿದ್ದರು. ನಂತರ ವಾಪಸಾಗಿರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಈಗ ಮೆಕ್ಕಾಕ್ಕೆ ಹೋಗಿ ಬಿಕ್ಕಿಬಿಕ್ಕಿ ಅತ್ತರೆ ನಾಟಕಕ್ಕಾದರೂ ಒಂದೆರಡು ಕಣ್ಣೀರು ಹಾಕಬಾರ್ದಾ ಅಂತಿದ್ದಾರೆ ಟ್ರೋಲಿಗರು. ಮೆಕ್ಕಾದಂಥ ಪವಿತ್ರ ಸ್ಥಾನವನ್ನು ಡ್ರಾಮಾ ಮಾಡಲು ಬಳಸಿಕೊಂಡಿರುವುದು ಸರಿಯಲ್ಲ ಎಂದು ಮತ್ತೊಂದಿಷ್ಟು ಮಂದಿ ಟೀಕಿಸುತ್ತಿದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್ (Rakhi Sawanth) ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್ ಖಾನ್ ನಡುವಿನ ಜಟಾಪಟಿ ಕಳೆದೊಂದು ವಾರದಿಂದ ತಾರಕಕ್ಕೇರಿತ್ತು. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾ ನಿತ್ಯವೂ ಪತ್ರಿಕಾಗೋಷ್ಠಿ ಮಾಡುತ್ತಿದ್ದರು. ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ. ಆದಿಲ್ ಖಾನ್ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ.
ಮೆಕ್ಕಾದಲ್ಲಿ ಉಮ್ರಾ ನೆರವೇರಿಸಿದ ರಾಖಿ: ಈಗ ನಂಗಾ ನಾಚ್ ಶುರುನಾ ಕೇಳ್ತಿದ್ದಾರೆ ಫ್ಯಾನ್ಸ್!
ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ. ಬಿಡುಗಡೆಯ ಬಳಿಕ ಮೂರ್ನಾಲ್ಕು ದಿನ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ.
ಮತ್ತೊಂದೆಡೆ, ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ತಮ್ಮ ಸಾರ್ವಜನಿಕ ಸಂಘರ್ಷ ಮತ್ತು ಪರಸ್ಪರರ ವಿರುದ್ಧ ಆರೋಪಗಳಿಗಾಗಿ ಮುಖ್ಯಾಂಶಗಳನ್ನು ಮಾಡಿದ್ದಾರೆ. 2022 ರಲ್ಲಿ ಇಬ್ಬರೂ ಮದುವೆಯಾಗುವ ಮೊದಲು ರಾಖಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಮತ್ತು ಫಾತಿಮಾ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ನಂತರ ಫೆಬ್ರವರಿ 7 ರಂದು ಆದಿಲ್ ಖಾನ್ ದುರಾನಿ ವಿರುದ್ಧ ವಂಚನೆ, ವಿವಾಹೇತರ ಸಂಬಂಧಗಳು ಮತ್ತು ಇತರ ವಿಷಯಗಳ ಆರೋಪ ಮಾಡಿ ಜೈಲು ಶಿಕ್ಷೆಗೆ ಕಾರಣರಾದರು. ಈಗ ಜಾಮೀನಿನ ಮೇಲೆ ಆದಿಲ್ ಹೊರಗಡೆ ಇದ್ದಾರೆ.
ನಿನ್ನಂಥವರಿಂದಲೇ ಮುಸ್ಲಿಮರು ಕುಖ್ಯಾತರಾಗ್ತಿರೋದು: ರಾಖಿಯಿಂದ ಆದಿಲ್ ಖಾನ್ ಹಿಗ್ಗಾಮುಗ್ಗಾ ತರಾಟೆ!