Ramayana Trailer: ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಟ್ರೇಲರ್ ಪಾಕಿಸ್ತಾನದಲ್ಲಿಯೂ ಮೆಚ್ಚುಗೆ ಪಡೆಯುತ್ತಿದೆ. ಟ್ರೇಲರ್ ನೋಡಿದ ನಂತರ, ಪಾಕಿಸ್ತಾನದ ಜನರು ಸಹ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ಅಲ್ಲಿನ ಜನರ ರಿಯಾಕ್ಷನ್ ಹೇಗಿತ್ತು ನೋಡಿ.
ಪಾಕಿಸ್ತಾನದಲ್ಲೂ ಅಬ್ಬರಿಸಿದ ‘ರಾಮಾಯಣ’ ಟ್ರೈಲರ್
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' ಚಿತ್ರದ ಟ್ರೇಲರ್ ಜುಲೈ 30 ರಂದು ಬಿಡುಗಡೆಯಾಗಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿತು. ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನದಲ್ಲಿಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ‘ರಾಮಾಯಣ’ ಟ್ರೈಲರ್ ಬಗ್ಗೆ ಪಾಕಿಸ್ತಾನದ ಜನರು ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ.
ದೃಶ್ಯ ವೈಭವನ್ನು ಮೆಚ್ಚಿಕೊಂಡ ಪಾಕಿಸ್ತಾನ
ಪಾಕಿಸ್ತಾನದ ಹಲವಾರು ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಸಿನಿ ವಿಮರ್ಶಕರು ಟ್ರೈಲರ್‌ಗೆ ಪ್ರತಿಕ್ರಿಯಿಸಿ, ವಿಶೇಷವಾಗಿ ಚಿತ್ರದ ಅದ್ದೂರಿ ದೃಶ್ಯ ವೈಭವ (VFX), ಹಿನ್ನೆಲೆ ಸಂಗೀತ ಮತ್ತು ರಣಬೀರ್ ಕಪೂರ್, ಯಶ್ ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ಸಿನೆಮಾದ ಮತ್ತೊಂದು ದೊಡ್ಡ ಮೈಲುಗಲ್ಲಾಗಲಿದೆ. ಚಿತ್ರದ ಬಜೆಟ್ ಪರದೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಟ್ರೇಲರ್‌ನಲ್ಲಿ ಬೃಹತ್ ಬಜೆಟ್ ಸ್ಪಷ್ಟವಾಗಿದೆ. ಹಾಲಿವುಡ್ ಸಹಯೋಗದೊಂದಿಗೆ ರಚಿಸಲಾದ ವಿಶುವಲ್ ಎಫೆಕ್ಟ್ ನಿಜಕ್ಕೂ ಪ್ರಶಂಸನೀಯ. ಒಬ್ಬ ಪಾಕಿಸ್ತಾನಿಯಾಗಿ, ಈ ಟ್ರೇಲರ್ ನೋಡಿದ ನಂತರ ನಾನು ಸಿನಿಮಾ ನೋಡಲು ತುಂಬಾ ಉತ್ಸುಕನಾಗಿದ್ದೇನೆ. ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಹೆಚ್ಚಿನ ಪಾಕಿಸ್ತಾನದ ಸಿನಿ ವಿಮರ್ಶಕರು ವಿಶೇಷವಾಗಿ 'ರಾವಣ' ಪಾತ್ರದಲ್ಲಿ ನಟಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಸಾಹಸ ಸನ್ನಿವೇಶಗಳು, ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಚಿತ್ರದ ತಾರಾಬಳಗ, ಕಥೆ ಹೇಳುವ ಶೈಲಿ ಮತ್ತು ಸಂಗೀತವು ಚಿತ್ರವನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ ಎಂದು ವಿಮರ್ಶಕರು ತಿಳಿಸಿದ್ದಾರೆ.
ಸಿನಿಮಾ ರಿಲೀಸ್ ಯಾವಾಗ?
ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಮಾತಾ ಸೀತೆಯಾಗಿ, ಯಶ್ ರಾವಣನಾಗಿ, ರವಿ ದುಬೆ ಲಕ್ಷ್ಮಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರು ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ. ಈ ವರ್ಷದ ದೀಪಾವಳಿಯ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ.


