‘ಸತ್ಯ ತಿಳಿಯದೇ ಪ್ರಚಾರ ಮಾಡಬೇಡಿ': ರಕ್ಷಿತಾ ಶೆಟ್ಟಿ ಏಕಾಏಕಿ ಹೀಗೆ ಹೇಳಲು ಕಾರಣವೇನು?
Rakshita Shetty Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಸತ್ಯ ತಿಳಿಯದೆ ಸುದ್ದಿ ಮಾಡುವ ಮಾಧ್ಯಮಗಳ ವೈಖರಿ ಹಾಗೂ ರಿಯಾಲಿಟಿ ಶೋಗಳ ಎಡಿಟಿಂಗ್ ಕುರಿತಾದ ಚರ್ಚೆಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.
ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ
ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿ, ತಮ್ಮ ಮುಗ್ಧತೆ ಹಾಗೂ ನೇರ ನಡೆ-ನುಡಿಯಿಂದ ಕನ್ನಡಿಗರ ಮನೆಮಾತಾಗಿರುವ ರಕ್ಷಿತಾ ಶೆಟ್ಟಿ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸತ್ಯ ತಿಳಿಯದೆ ಸುದ್ದಿಗಳು ಪ್ರಸಾರವಾಗುತ್ತಿರುವ ಬಗ್ಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ಗಿಲ್ಲಿ' ಸಿನಿಮಾಗೆ ಶುಭ ಹಾರೈಕೆ
'ಗಿಲ್ಲಿ' ಸಿನಿಮಾಗೆ ಶುಭ ಹಾರೈಕೆ
ಸಂದರ್ಶನವೊಂದರಲ್ಲಿ 'ಗಿಲ್ಲಿ' ಅವರಿಗೆ ಹೊಸ ಸಿನಿಮಾ ವಿಚಾರವಾಗಿ ವಿಶ್ ಮಾಡಿದ್ರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, "ಹೌದು, ಅವರಿಗೆ ಆಲ್ ದಿ ಬೆಸ್ಟ್. ಒಳ್ಳೆಯದಾಗಲಿ" ಎಂದು ಹಾರೈಸಿದರು.
ಬೇಸರ ಹೊರಹಾಕಿದ ರಕ್ಷಿತಾ ಶೆಟ್ಟಿ
ಬೇಸರ ಹೊರಹಾಕಿದ ರಕ್ಷಿತಾ ಶೆಟ್ಟಿ
ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಚಾರದ ಬಗ್ಗೆ ಪ್ರಶ್ನೆ ಎತ್ತಿದ ರಕ್ಷಿತಾ ಶೆಟ್ಟಿ, "ಯಾರಾದರೂ ಎಲ್ಲೋ ಒಂದು ಕಡೆ ಒಂದು ಹೇಳಿಕೆ (Statement) ಕೊಟ್ಟರೆ, ಅದನ್ನೇ ದೊಡ್ಡದಾಗಿ ಪಬ್ಲಿಸಿಟಿ ಮಾಡುತ್ತೀರಿ. ಆದರೆ ಇನ್ನೊಂದು ಕಡೆ ಇರುವ ಅಸಲಿ ಸತ್ಯ ಏನು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಸತ್ಯ ಏನೆಂದು ಗೊತ್ತಿಲ್ಲದಿದ್ದರೂ ಕೇವಲ ಪ್ರಚಾರಕ್ಕಾಗಿ ಸುದ್ದಿ ಮಾಡುತ್ತೀರಿ" ಎಂದು ಬೇಸರ ವ್ಯಕ್ತಪಡಿಸಿದರು.
'ಬಿಗ್ ಬಾಸ್' ಕುರಿತು ಸ್ಪಷ್ಟನೆ
'ಬಿಗ್ ಬಾಸ್' ಕುರಿತು ಸ್ಪಷ್ಟನೆ
ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಮಾತನಾಡಿದ ರಕ್ಷಿತಾ, ಈಗ ನಾನು ಹಸಿರು ಬಣ್ಣದ ಉಡುಪು (ಗ್ರೀನ್ ಡ್ರೆಸ್) ಹಾಕಿಕೊಂಡಿದ್ದೇನೆ, ಅದನ್ನು ಕೆಂಪು (ರೆಡ್) ಎಂದು ತೋರಿಸಲು ಸಾಧ್ಯವೇ? ಅಲ್ಲಿ ಏನಿದೆಯೋ ಅದನ್ನೇ ಅಲ್ವಾ ತೋರಿಸುವುದು? ಅಲ್ಲಿ ಹೇಗಿದೆಯೋ ಹಾಗೆಯೇ ಪ್ರಸಾರ ಮಾಡುತ್ತಾರೆ" ಎಂದು ಕಾರ್ಯಕ್ರಮದ ನೈಜತೆಯನ್ನು ಸಮರ್ಥಿಸಿಕೊಂಡರು.
ನೇರ ನುಡಿಯ ಮೂಲಕ ಸುದ್ದಿಯಲ್ಲಿದ್ದಾರೆ ರಕ್ಷಿತಾ
ನೇರ ನುಡಿಯ ಮೂಲಕ ಸುದ್ದಿಯಲ್ಲಿದ್ದಾರೆ ರಕ್ಷಿತಾ
ಬಹಳ ದಿನಗಳಿಂದ ಈ ವಿಚಾರಗಳು ನನ್ನ ಮನಸ್ಸಿನಲ್ಲಿದ್ದವು, ಇಂದು ಅದನ್ನು ಹೊರಹಾಕುತ್ತಿದ್ದೇನೆ ಎಂದು ರಕ್ಷಿತಾ ಹೇಳಿದಾಗ, "ಈಗ ನಿಮಗೆ ಮನಸ್ಸು ಹಗುರವಾಯಿತಾ?" ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ಕೊನೆಗೂ ತಮ್ಮ ಮನದ ಗೊಂದಲ ಮತ್ತು ನೋವನ್ನು ಹಂಚಿಕೊಂಡ ಸಮಾಧಾನ ವ್ಯಕ್ತಪಡಿಸಿದರು. ತಮ್ಮ ವ್ಲಾಗ್‌ಗಳ ಮೂಲಕ ಜನಪ್ರಿಯರಾಗಿದ್ದ ರಕ್ಷಿತಾ ಶೆಟ್ಟಿ, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಅದೇ ನೇರ ನುಡಿಯ ಮೂಲಕ ಸುದ್ದಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

