Asianet Suvarna News Asianet Suvarna News

ಮತ್ತೊಂದು ಸಾಹಸಕ್ಕೆ ಸಿದ್ಧರಾದ 'ಮ್ಯಾನ್ ಆಫ್‌ ದಿ ಮ್ಯಾಚ್' ಸತ್ಯ ಪ್ರಕಾಶ್ !

ಸತ್ಯ ಪ್ರಕಾಶ್ ನಿರ್ದೇಶನದ 'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರದಲ್ಲಿ ನಟ ಅಥರ್ವ ಪ್ರಕಾಶ್  ನಟಿಸಿದ್ದರು. ಇದೀಗ ಸತ್ಯ ಪ್ರಕಾಶ್ ನಿರ್ಮಾಣ ಹಾಗೂ ನಿರ್ದೇಶನದ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಕೂಡ ಅದೇ ಅಥರ್ವ ಪ್ರಕಾಶ್ ನಟಿಸಲಿದ್ದಾರೆ.

Rama Rama Re fame D Satya Prakash acts in his upcoming movie srb
Author
First Published Oct 4, 2023, 7:51 PM IST | Last Updated Oct 4, 2023, 7:52 PM IST

ರಾಮಾ ರಾಮಾ ರೇ ನಿರ್ದೇಶಕ ಸತ್ಯ ಪ್ರಕಾಶ್ ರೈ ನಟನೆ ಮಾಡಲಿದ್ದಾರೆ. ಅವರದೇ ನಿರ್ಮಾಣ, ನಿರ್ದೇಶನದ ಮುಂಬರುವ ಚಿತ್ರದಲ್ಲಿ ಅವರು ನಟನೆ ಕೂಡ ಮಾಡಲಿದ್ದು, ಒಟ್ಟಿಗೇ 3 ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಇಷ್ಟು ದಿನ ನಿರ್ದೇಶಕ-ನಿರ್ಮಾಪಕ ಎನಿಸಿಕೊಂಡಿದ್ದ ಸತ್ಯ ಪ್ರಕಾಶ್ ಇದೀಗನಿರ್ದೇಶಕ-ನಿರ್ಮಾಪ-ನಟ ಎನಿಸಿಕೊಳ್ಳಲಿದ್ದಾರೆ. ಸತ್ಯ ಪ್ರಕಾಶ್ ಮುಂಬರಲಿರುವ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಟೀಸರ್ ಮೂಲಕ ಟೈಟಲ್ ಇಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಈ ಮೊದಲು ಒಂದಲ್ಲಾ ಎರಡಲ್ಲಾ ಸಿನಿಮಾ ಮಾಡಿದ್ದ ಸತ್ಯ ಪ್ರಕಾಶ್ ಬಳಿಕ 'ರಾಮಾ ರಾಮಾ ರೇ' ಚಿತ್ರವನ್ನು ತೆರೆಗೆ ತಂದಿದ್ದರು. ಬಳಿಕ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಮಾಡಿದ್ದರು. ಎಲ್ಲಾ ಸಿನಿಮಾಗಳೂ ಒಂದು ಲೆವೆಲ್‌ಗೆ ಸದ್ದು-ಸುದ್ದಿ ಮಾಡಿದ್ದವು. ಅದರಲ್ಲೂ ರಾಮಾ ರಾಮಾ ರೇ  ಅವರಿಗೆ ವಿಶೇಷ ಹಸೆರು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ವಾಸುಕಿ ವೈಭವ್ ತಂದೆ ಒಂದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

ಸತ್ಯ ಪ್ರಕಾಶ್ ನಿರ್ದೇಶನದ 'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರದಲ್ಲಿ ನಟ ಅಥರ್ವ ಪ್ರಕಾಶ್  ನಟಿಸಿದ್ದರು. ಇದೀಗ ಸತ್ಯ ಪ್ರಕಾಶ್ ನಿರ್ಮಾಣ ಹಾಗೂ ನಿರ್ದೇಶನದ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಕೂಡ ಅದೇ ಅಥರ್ವ ಪ್ರಕಾಶ್ ನಟಿಸಲಿದ್ದಾರೆ. ಮುಂಬರುವ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿದ್ದು, ಒಂದನ್ನು ಸತ್ಯ ಪ್ರಕಾಶ್ ಹಾಗೂ ಇನ್ನೊಂದನ್ನು ಅಥರ್ವ ಪ್ರಕಾಶ್ ಮಾಡಲಿದ್ದಾರೆ. ಅಲ್ಲಿಗೆ 'ಎರಡು ಪ್ರಕಾಶ್'ಗಳು ಒಂದೇ ಚಿತ್ರದ ನಾಯಕರಾಗುವ ಮೂಲಕ ಇದನ್ನು 'ಪ್ರಕಾಶಮಯ' ಚಿತ್ರವನ್ನಾಗಿಸಲು ಹೊರಟಿದ್ದಾರೆ ಎನ್ನಬಹುದು. 

ಶಸ್ತ್ರ ಚಿಕಿತ್ಸಕರ ಸಂಘದಿಂದ ಬರೋಬ್ಬರಿ 10 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಎಆರ್ ರೆಹಮಾನ್

ಒಟ್ಟಿನಲ್ಲಿ, ಚಿತ್ರದಲ್ಲಿ ಪಾತ್ರವನ್ನೂ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿಗೂ ಪಾತ್ರರಾಗಿರುವ ಸತ್ಯ ಪ್ರಕಾಶ್ ಈ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಹೊಸ ರೀತಿಯ ಚಿತ್ರ ಮಾಡುತ್ತ ತಮ್ಮದೇ ಒಂದು ದಾರಿಯಲ್ಲಿ ಸಾಗುತ್ತಿರುವ ಸತ್ಯ ಪ್ರಕಾಶ್‌ ಮುಂಬರುವ ಚಿತ್ರವೂ ಹೊಸತನದಿಂದ ಕೂಡಿರುತ್ತದೆ ಎಂಬುದು ಸಿನಿಪ್ರೇಕ್ಷಕರ ಆಶಯ. ನಿರೀಕ್ಷೆ ನಿಜವಾಗಬಹುದೇ? ಕಾದು ನೋಡೋಣ!

ಬಿಗ್ ಬಾಸ್ ಕನ್ನಡ -10 ಮನೆಗೆ 'ಸಿಂಗರ್' ಆಶಾ ಭಟ್ ಬಲಗಾಲಿಟ್ಟು ಬರಲಿದ್ದಾರಾ?

Latest Videos
Follow Us:
Download App:
  • android
  • ios