Asianet Suvarna News Asianet Suvarna News

ಶಸ್ತ್ರ ಚಿಕಿತ್ಸಕರ ಸಂಘದಿಂದ ಬರೋಬ್ಬರಿ 10 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಎಆರ್ ರೆಹಮಾನ್

ರೆಹಮಾನ್ 'ಶಸ್ತ್ರ ಚಿಕಿತ್ಸಕರ ಸಂಘ'ಕ್ಕೆ ಈ ಸಂಬಂಧ ಸೂಕ್ತ ದಾಖಲೆ ಒದಗಿಸಿ ಎಂದು ಕೇಳಿಕೊಂಡಿದ್ದಾರೆ. ತಪ್ಪಿದಲ್ಲಿ, ಲೀಗಲ್ ರೀತಿಯಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧದ ಆರೋಪಕ್ಕೆ ಸೂಕ್ತ ದಾಖಲೆಗಳು ಇದ್ದು, ಅಗತ್ಯ ಬಿದ್ದಲ್ಲಿ ಅವುಗಳನ್ನು ಹಾಜರಿ ಪಡಿಸಲಾಗುವುದು' ಎಂದಿದ್ದಾರೆ ಎಆರ್ ರೆಹಮಾನ್.

Composer AR Rahman filed a defamation suit against the surgeons association srb
Author
First Published Oct 4, 2023, 3:02 PM IST

ಸಂಗೀತ ನಿರ್ದೇಶಕ ಎಆರ್ ರೆಹಮಾನ್, ಇದೀಗ 'ಸರ್ಜಂಟ್ ಅಸೋಸಿಯೇಶನ್ (Surgeons’ Association) ವಿರುದ್ಧ ಬರೋಬ್ಬರಿ 10 ಕೋಟಿ ರೂ. ಪರಿಹಾರ ಆಗ್ರಹಿಸಿ ಕೇಸ್ ಬುಕ್ ಮಾಡಿದ್ದಾರೆ.  ಈ ಮೊದಲು 'ಎಆರ್ ರೆಹಮಾನ್' ಶಸ್ತ್ರ ಚಿಕಿತ್ಸಕರ ಸಂಘ'ದ ಆಯೋಜನೆಯ ಈವೆಂಟ್ ಒಂದನ್ನು ಒಪ್ಪಿಕೊಂಡಿದ್ದು, ಅದಕ್ಕೆ ಸಂಬಂಧಿಸಿ ಹಣವನ್ನು ಕೂಡ ಪಡೆದಿದ್ದಾರೆ ಎಂದು ಆಪಾದಿಸಲಾಗಿತ್ತು. ಆದರೆ ಇದನ್ನು ಸಂಗೀತ ನಿರ್ದೇಶಕ ಅಲ್ಲಗಳೆದಿದ್ದರು. ಇದಕ್ಕೆ ಸಂಬಂಧಿಸಿ ಸೂಕ್ತ ದಾಖಲೆಗಳನ್ನು ಹೊಂದಿರುವ ಸಂಗೀತ ನಿರ್ದೇಶಕ, ಈ ಬಗ್ಗೆ ಇದೀಗ ಕೇಸ್ ದಾಖಲಿಸಿ ಸುದ್ದಿಯಾಗಿದ್ದಾರೆ.

ಇದೀಗ, ಈ ಸಂಬಂಧ, ರೆಹಮಾನ್ 'ಶಸ್ತ್ರ ಚಿಕಿತ್ಸಕರ ಸಂಘ'ಕ್ಕೆ ಈ ಸಂಬಂಧ ಸೂಕ್ತ ದಾಖಲೆ ಒದಗಿಸಿ ಎಂದು ಕೇಳಿಕೊಂಡಿದ್ದಾರೆ. ತಪ್ಪಿದಲ್ಲಿ, ಲೀಗಲ್ ರೀತಿಯಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧದ ಆರೋಪಕ್ಕೆ ಸೂಕ್ತ ದಾಖಲೆಗಳು ಇದ್ದು, ಅಗತ್ಯ ಬಿದ್ದಲ್ಲಿ ಅವುಗಳನ್ನು ಹಾಜರಿ ಪಡಿಸಲಾಗುವುದು' ಎಂದಿದ್ದಾರೆ ಎಆರ್ ರೆಹಮಾನ್.

ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ ಶ್ರೀದೇವಿ, ಜಾನ್ವಿ ಕಪೂರ್‌ ಹುಟ್ಟಿನ ಬಗ್ಗೆ ಮೌನ ಮುರಿದ ಬೋನಿ ಕಪೂರ್‌

 'ಸರ್ಜಂಟ್ ಅಸೋಸಿಯೇಶನ್' ವಿರುದ್ಧ ತಮ್ಮ ಮಾನಹಾನಿಗೆ ಸಂಬಂಧಪಟ್ಟು ಕೇಸ್ ಹಾಕಿರುವ ರೆಹಮಾನ್, ಪರಿಹಾರಕ್ಕೂ ಮೊದಲು ಬೇಷರತ್ತು ಕ್ಷಮೆ ಯಾಚನೆ ಮಾಡಬೇಕೆಂದು ಸಹ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ಎಆರ್ ರೆಹಮಾನ್ ಇತ್ತೀಚೆಗೆ ಒಂದಾದ ಮೇಲೆ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಇದಕ್ಕೂ ಸ್ವಲ್ಪ ಮೊದಲು 'ಚೆನ್ನೈ ಕಾರ್ಯಕ್ರಮ'ವೊಂದಕ್ಕೆ ಸಂಬಂಧಿಸಿ ಸಂಗೀತ ಮಾಂತ್ರಿಕ ರೆಹಮಾನ್ ವಿವಾದಕ್ಕೆ ಸಿಲುಕಿದ್ದರು. ಮುಂದೇನಾಗಲಿದೆ ಎಂದು ಕಾದು ನೋಡಬೇಕಷ್ಟೇ!

ಹಾಟ್ ಡ್ರೆಸ್ಸಲ್ಲಿ ಶ್ವೇತಾ ಪ್ರಸಾದ್, ಸೇಮ್ ಸಮಂತಾ ತರಾನೇ ಕಾಣ್ತೀರಾ ಎಂದ ನೆಟ್ಟಿಗರು!

Follow Us:
Download App:
  • android
  • ios