ಬಿಗ್ ಬಾಸ್ ಕನ್ನಡ -10 ಮನೆಗೆ 'ಸಿಂಗರ್' ಆಶಾ ಭಟ್ ಬಲಗಾಲಿಟ್ಟು ಬರಲಿದ್ದಾರಾ?
ಬಿಗ್ ಬಾಸ್ ಸೀಸನ್ 10 ಸದ್ಯವೇ (08 ಅಕ್ಟೋಬರ್ 2023) ಶುರುವಾಗಲಿದೆ. ಬಿಗ್ ಬಾಸ್ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದು ಅವರಲ್ಲಿ ಸಿಂಗರ್ ಆಶಾ ಭಟ್ ಕೂಡ ಒಬ್ಬರಾಗಲಿದ್ದಾರೆ ಎನ್ನುವ ಗಾಸಿಪ್ ಸಾಕಷ್ಟು ಹಬ್ಬಿದೆ. ಆಶಾ ಭಟ್ ಹೆಸರು ಪೈನಲ್ ಆಗಿರುವ ಬಿಗ್ ಬಾಸ್ ಸೀಸನ್-10 ನ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಇದೆ ಎಂಬ ಮಾಹಿತಿ ಸಿಕ್ಕಿದೆ.
ಸಿಂಗರ್ ಆಶಾ ಭಟ್ ಮುಂಬರುವ (8 ಅಕ್ಟೋಬರ್ 2023) ಬಿಗ್ ಬಾಸ್ ಸೀಸನ್ 10ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆಶಾ ಭಟ್ ಜೀ ರಿಯಾಲಿಟಿ ಶೊ 'ಸರೆಗಮಪ' ಸೀಸನ್- 17 ರಲ್ಲಿ ಸೆಮಿಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದರು. ಆ ಬಳಿಕ ಅವರು ಸಾಕಷ್ಟು ತಮ್ಮದೇ ಆದ ಸ್ವಂತ 'ಅಲ್ಬಮ್' ಕೂಡ ಹೊರತಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವಾಗಲೂ ಆಕ್ಟಿವ್ ಆಗಿರುವ ಆಶಾ ಭಟ್, ಬರೋಬ್ಬರಿ ಒಂದು ಮಿಲಿಯನ್ (1 Million) ಫಾಲೋವರ್ಸ್ ಹೊಂದಿದ್ದಾರೆ.
ಇದೀಗ, ಬಿಗ್ ಬಾಸ್ ಸೀಸನ್ 10 ಸದ್ಯವೇ (08 ಅಕ್ಟೋಬರ್ 2023) ಶುರುವಾಗಲಿದೆ. ಬಿಗ್ ಬಾಸ್ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದು ಅವರಲ್ಲಿ ಸಿಂಗರ್
ಆಶಾ ಭಟ್ ಕೂಡ ಒಬ್ಬರಾಗಲಿದ್ದಾರೆ ಎನ್ನುವ ಗಾಸಿಪ್ ಸಾಕಷ್ಟು ಹಬ್ಬಿದೆ. ಆಶಾ ಭಟ್ ಹೆಸರು ಪೈನಲ್ ಆಗಿರುವ ಬಿಗ್ ಬಾಸ್ ಸೀಸನ್-10 ನ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಇದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಇದು ಅಧಿಕೃತ ಮಾಹಿತಿ ಅಲ್ಲ, ಆಗಲು ಸಾಧ್ಯವೂ ಇಲ್ಲ. ಆದರೂ ಆಶಾ ಭಟ್ ಬಲಗಾಲಿಟ್ಟು ಒಳಕ್ಕೆ ಬರಲಿದ್ದಾರೆ ಎಂದು ನ್ಯೂಸ್ ಸದ್ದು ಮಾಡುತ್ತಿದೆ.
ನಟ 'ಲವ್ ಗುರು' ತರುಣ್ ಚಂದ್ರ ಬಿಗ್ ಬಾಸ್ 10 ಮನೆಗೆ ಬರಲಿದ್ದಾರೆ; ಗಾಸಿಪ್ or ಕನ್ಪರ್ಮ್?
ಬಿಗ್ ಬಾಸ್ ಮೊದಲ ಸಂಚಿಕೆ ಸ್ಪರ್ಧಿಗಳ ಪರಿಚಯಕ್ಕೆ ಅಂತಲೇ ಮೀಸಲಾಗಿರುವಾಗ ಕಲರ್ಸ್ ಕನ್ನಡ ಅದಕ್ಕೂ ಮೊದಲು ಸ್ಪರ್ಧಿಗಳ ಮಾಹಿತಿ ನೀಡಿಲಾಗದು. ಹೀಗಾಗಿ, ಆಶಾ ಭಟ್ ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ಗೆ ಬರುವುದು ಹೌದೇ ಅಥವಾ ಅಲ್ಲವೇ ಎಂಬುದನ್ನು ಖಚಿತವಾಗಿ ಹೇಳಲು ಅಸಾಧ್ಯ. ಆದರೆ ಸಾಧ್ಯತೆಯನ್ನು ಹೇಗೆ ತಳ್ಳಿಹಾಕುವುದು? ಇದು ಗಾಸಿಪ್ ಇರಬಹುದು ಅಥವಾ ಸತ್ಯವೂ ಆಗಿರಬಹುದು. ಇನ್ನೇನು ಸ್ವಲ್ಪ ದಿನವಷ್ಟೇ ಬಿಗ್ ಬಾಸ್ ಪ್ರಸಾರಕ್ಕೆ ಬಾಕಿ ಇರುವುದು. ನೋಡೋಣ, ಯಾರು ಬರುತ್ತಾರೆ ಎಂದು!
ಅತ್ತಿಗೆ ಚಾರು ಕಾಲಿಗೆ ಬಿದ್ದ ಶ್ರುತಿ; ಸತ್ಯ ಗೊತ್ತಾದ ಬಳಿಕ ರಾಮಾಚಾರಿ ರಿಯಾಕ್ಷನ್ ಏನು?