ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆ ರಾಮ್ ಚರಣ್ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ನಲ್ಲಿ ವೈರಲ್ ಆಗಿದೆ. ಸಲ್ಮಾನ್ ಖಾನ್ ನಟನೆಯ ಕಬಿ ಈದ್ ಕಭಿ ದಿವಾಲಿ ಸಿನಿಮಾದ ವಿಶೇಷ ಹಾಡಿನಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಲಿವುಡ್ ಸ್ಟಾರ್ ರಾಮ್ ಚರಣ್ (Ram Charan) ಸದ್ಯ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರ್ ಆರ್ ಆರ್ ಸಕ್ಸಸ್‌ನ ಖುಷಿಯಲ್ಲಿರುವ ರಾಮ್ ಚರಣ್ ಈ ಸಿನಿಮಾದ ದೊಡ್ಡ ಮಟ್ಟದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌದು, ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಇನ್ನು ಹೆಸರಿಡದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ನಡುವೆ ರಾಮ್ ಚರಣ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು, ತೆಲುಗು ಸ್ಟಾರ್ ಇದೀಗ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 

Add Asianetnews Kannada as a Preferred SourcegooglePreferred

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆ ರಾಮ್ ಚರಣ್ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ನಲ್ಲಿ ವೈರಲ್ ಆಗಿದೆ. ಸಲ್ಮಾನ್ ಖಾನ್ ಸದ್ಯ ಕಭಿ ಈದ್ ಕಭಿ ದಿವಾಲಿ (Kabhi Eid Kabhi Diwali) ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ವಿಶೇಷ ಹಾಡಿನಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಸದ್ಯ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ವೇಳೆ ರಾಮ್ ಚರಣ್ ಅವರನ್ನು ಭೇಟಿಯಾಗಿದ್ದಾರೆ. ಆಗ ತನ್ನ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮಾತಿಗೆ ನೋ ಎನ್ನದೆ ರಾಮ್ ಚರಣ್ ತಕ್ಷಣ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕಭಿ ಈದ್ ಕಭಿ ದಿವಾಲಿ ಸಿನಿಮಾದ ಈ ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ ಈಗಾಗಲೇ ಅದ್ದೂರಿ ಸೆಟ್ ನಿರ್ಮಾಣವಾಗುತ್ತಿದ್ದು ಬಹು ಕೋಟಿ ವೆಚ್ಚದಲ್ಲಿ ಈ ಹಾಡನ್ನು ಸೆರೆಹಿಡಿಯಲಾಗುತ್ತಿದೆ. ಈ ಹಾಡಿನಲ್ಲಿ ರಾಮ್ ಚರಣ್ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ವಿಶೇಷ ಎಂದರೆ ರಾಮ್ ಚರಣ್ ಜೊತೆ ತೆಲುಗಿನ ಮತ್ತೋರ್ವ ಸ್ಟಾರ್ ನಟ ವೆಂಕಟೇಶ್ ದಗ್ಗುಬಾಟಿ ಕೂಡ ಹೆಜ್ಜೆ ಹಾಕುತ್ತಿದ್ದಾರಂತೆ. ಹೈದರಬಾದ್‌ನಲ್ಲಿ ಒಂದು ವಾರಗಳ ಕಾಲ ಚಿತ್ರೀಕಣ ನಡೆಯಲಿದ್ದು ಬಳಿಕ ಮುಂಬೈಗೆ ಹಾರಲಿದೆ. 

ಚಿರಂಜೀವಿ ಮನೆಯಲ್ಲಿ ಕಮಲ್ ಹಾಸನ್ 'ವಿಕ್ರಮ್' ಸಕ್ಸಸ್ ಪಾರ್ಟಿ; ಸಲ್ಮಾನ್ ಸೇರಿ ಯಾರೆಲ್ಲಾ ಭಾಗಿಯಾಗಿದ್ದರು?

ಈ ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶೇಹನಾಜ್ ಗಿಲ್, ರಾಘವ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಸಿನಿಮಾ ಸಲ್ಮಾನ್ ಖಾನ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಡಿಸೆಂಬರ್ 30, 2022ರಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. 

Salman Khan ಅವರ ಮುಂದಿನ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಹತ್ತು ನಾಯಕಿರಂತೆ!

ಇನ್ನು ವಿಶೇಷ ಎಂದರೆ ಸಲ್ಮಾನ್ ಖಾನ್ ಕೆಲವು ದಿನಗಳ ಹಿಂದೆ ತೆಲುಗು ಸ್ಟಾರ್ ಚಿರಂಜೀವಿ ನಟನೆಯ ಸಿನಿಮಾದಲ್ಲಿ ನಟಿಸಿದ್ದಾರೆ. ಚಿರಂಜೀವಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೌತ್ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಚಿರಂಜೀವಿ, ಸಲ್ಮಾನ್ ಖಾನ್ ಜೊತೆ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಸಲ್ಮಾನ್ ಖಾನ್ ಸಿನಿಮಾದಲ್ಲಿ ಚಿರು ಪುತ್ರ ರಾಮ್ ಚರಣ್ ನಟಿಸುತ್ತಿರುವುದು ವಿಶೇಷ. ಅಲ್ಲದೇ ಇತ್ತೀಚಿಗಷ್ಟೆ ಚಿರಂಜೀವಿ ಹಮ್ಮಿಕೊಂಡಿದ್ದ ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲೂ ಭಾಗಿಯಾಗಿದ್ದರು. ಸೌತ್ ವರ್ಸಸ್ ಬಾಲಿವುಡ್ ಚರ್ಚೆಯ ನಡುವೆ ಸೌತ್ ಮತ್ತು ಬಾಲಿವುಡ್ ಕಲಾವಿದರು ಒಟ್ಟಿಗೆ ನಟಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಹೀಗೆ ಮುಂದುವರೆಯಲಿ ಎನ್ನುವುದು ಸಿನಿ ಅಭಿಮಾನಿಳ ಆಶಯ.