ಬಾಲಿವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಎನ್‌ಸಿಬಿ ನಟಿ ರಾಕುಲ್ ಪ್ರೀತ್ ಸಿಂಗ್‌ನನ್ನು ವಿಚಾರಣೆ ನಡೆಸಿದೆ. ಈ ವಿಚಾರಣೆ ಸಂದರ್ಭ ನಟಿ ಟಾಪ್ ನಟರು, ನಿರ್ಮಾಪಕರು ಹಾಗೂ ಕರಣ್ ಜೋಹಾರ್ ಆಪ್ತನ ಹೆಸರು ಹೇಳಿದ್ದಾಗಿ ತಿಳಿದು ಬಂದಿದೆ.

ಎನ್‌ಸಿಬಿ ಜಾಮೀನುರಹಿತ ನೋಟಿಸ್ ಕಳುಹಿಸೋದಾಗಿ ಎಚ್ಚರಿಸಿದ ಮೇಲೆ ಕೊನೆಗೂ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ಸಂದರ್ಭ ಇನ್ನಷ್ಟು ಕುತೂಹಲಕಾರಿ ವಿಚಾರ ಬಿಚ್ಚಿಟ್ಟಿದ್ದಾರೆ ನಟಿ.

ನನ್ ಮನೇಲಿ ಸಿಕ್ಕಿದ ಡ್ರಗ್ಸ್ ನಂದಲ್ಲ, ರಿಯಾ ಕಳ್ಸಿದ್ದು ಎಂದ ರಾಕುಲ್..!

ಡ್ರಗ್ಸ್ ತೆಗೆದುಕೊಂಡಿರುವುದನ್ನು ನಿಷೇಧಿಸಿದ ನಟಿ, ಕ್ಷಿತಿಜ್ ರವಿ ಕೆಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಹೇಳಿದ್ದಾರೆ. ಕ್ಷಿತಿಜ್ ಎಂಬಾತ ಕೆಲವರಿಗೆ ಡ್ರಗ್ಸ್ ಒದಗಿಸುತ್ತಿದ್ದ. ತಾನು ಡ್ರಗ್ಸ್ ಬಳಸಿಲ್ಲ. ಆದರೆ ಕ್ಷಿತಿಕ್ ಮಾಡುತ್ತಿದ್ದ ಕೆಲಸಗಳ ಬಗ್ಗೆ ಗೊತ್ತು ಎಂದು ನಟಿ ಹೇಳಿದ್ದಾರೆ. ಇದೀಗ ಎನ್‌ಸಿಬಿ ಅಧಿಕಾರಿ ಕ್ಷಿತಿಜ್‌ನನ್ನು ಮಂಬೈನಲ್ಲಿ ವಿಚಾರಣೆ ನಡೆಸಲಿದ್ದಾರೆ.

ಕ್ಷಿತಿಜ್‌ನಿಂದ ಡ್ರಗ್ಸ್ ಪಡೆಯುತ್ತಿದ್ದ 4 ಸೆಲೆಬ್ರಟಿಗಳ ಹೆಸರನ್ನು ರಾಕುಲ್ ಹೇಳಿದ್ದಾರೆ ಎನ್ನಲಾಗಿದೆ. ಆಕೆಯನ್ನೂ ಆತನೊಂದಿಗೆ ಕೆಲಸ ಮಾಡಲು ಕೇಳಿದ್ದ ಎನ್ನಲಾಗಿದೆ. ರಾಕುಲ್ ಎನ್‌ಸಿಬಿ ಗೆಸ್ಟ್‌ ಹೌಸ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಕರಣ್ ಜೋಹಾರ್ ಆಪ್ತನ ಮನೆಯಲ್ಲಿ ನಡೆದ ರೈಡ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ.

'200% ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದ ಏಮ್ಸ್ ವೈದ್ಯರು'

ಕರಣ್‌ ಜೋಹಾರ್ ಬಲಗೈ ಕ್ಷಿತಿಜ್ ರವಿಇ ಪ್ರಸಾದ್‌ನ ವಸೋವಾದ ಮನೆಯಲ್ಲಿ ಎನ್‌ಸಿಬಿ ರೈಡ್ ಮಾಡಿದ್ದು, ಡ್ರಗ್ಸ್ ಪತ್ತೆ ಮಾಡಿದೆ. ಅಲ್ಲಿ ಮತ್ತೆಯಾದ ಗಾಂಜಾ ಮತ್ತು ವೀಡ್‌ನನ್ನು ಎನ್‌ಸಿಬಿ ವಶಪಡಿಸಿದೆ.

ಸೆಲೆಬ್ರಿಟಿಗಳ ವಾಟ್ಸಾಪ್ ಮೆಸೇಜ್‌ NCBಗೆ ಹೇಗೆ ಸಿಕ್ತು ? ಸೆಕ್ಯುರಿಟಿ ಬಗ್ಗೆ WhatsApp ಸ್ಪಷ್ಟನೆ ಇದು

ತನ್ನ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಕರಣ್ ಜೋಹಾರ್ ಪ್ರತಿಕ್ರಿಯಿಸಿದ್ದು, ಹೇಳಿಕೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. 2019ಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಬಳಸಿದ್ದನ್ನು ನಟ ನಿಷೇಧಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Karan Johar (@karanjohar) on Sep 25, 2020 at 10:27am PDT

ಈ ದುರುದ್ದೇಶದಿಂದ ಪ್ರಚಾರ ಮಾಡಲಾಗುತ್ತಿದೆ. ನಾನು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ಪ್ರಚೋದನೆಯೂ ಕೊಡಲ್ಲ, ಅದನ್ನು ಬಳಸಲು ಪ್ರೋತ್ಸಾಹಿಸುವುದಿಲ್ಲ ಎಂದಿದ್ದಾರೆ