ಎನ್‌ಸಿಬಿಗೆ ಸೆಲೆಬ್ರಿಟಿಗಳ ವಾಟ್ಸಾಪ್ ಚಾಟ್ ಹೇಗೆ ಸಿಕ್ತು..? ಇಂತಹದೊಂದು ಪ್ರಶ್ನೆ ಬಹಳ ದಿನದಿಂದ ಎಲ್ಲರ ಮನದಲ್ಲೂ ಕಾಡುತ್ತಿದೆ. ಇದೇ ನಡುವೆ ವಾಟ್ಸಾಪ್ ಭದ್ರತೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ವಾಟ್ಸಾಪ್ ಸ್ಪಷ್ಟನೆ ನೀಡಿದೆ.

ವಾಟ್ಸಾಪ್ ಮೆಸೇಜುಗಳು ಸುರಕ್ಷಿತವಾಗಿರುತ್ತವೆ. ಅವುಗಳನ್ನು ಮೂರನೇ ವ್ಯಕ್ತಿ ಕದಿಯಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಕಂಪನಿ ತಿಳಿಸಿದೆ. ಎನ್‌ಸಿಬಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌ ಅವರ 2017ರ ವಾಟ್ಸಾಪ್ ಚಾಟ್ ಆಧಾರಿಸಿ ವಿಚಾರಣೆಗೆ ನೋಟಿಸ್ ನೀಡಿದೆ ಎನ್ನಲಾಗಿದೆ. ಇದನ್ನು ಟ್ಯಾಲೆಂಟೆಡ್ ಏಜೆಂಟ್ ಜಯಾ ಶಾ ಅವರ ಮೊಬೈಲ್‌ ಮೂಲಕ ಪಡೆಯಲಾಗಿದೆ ಎನ್ನಲಾಗಿದೆ.

ದೀಪಿಕಾ ಪಡುಕೋಣೆ ಜೊತೆ ವಿಚಾರಣೆಗೆ ತಾನೂ ಬರುವುದಾಗಿ ರಣ್ವೀರ್ ಡಿಮ್ಯಾಂಡ್‌?

ಜಯ ಶಾ ಸುಶಾಂತ್ ಸಿಂಗ್ ರಜಪೂತ್‌ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಸುಶಾಂತ್ ಜೂನ್. 14ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಾಟ್ಸಾಪ್ ಸೆಕ್ಯರಿಟಿ ಗೈಡ್‌ಲೈನ್ಸ್‌ಗಳನ್ನು ಪಾಲಿಸುತ್ತಿದೆ. ಇವುಗಳನ್ನು ವಾಟ್ಸಾಪ್ ಬಳಕೆದಾರರೂ ಬಳಸುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಮೂರನೇ ವ್ಯಕ್ತಿ ನಿಮ್ಮ ವಾಟ್ಸಾಪ್ ಮಾಹಿತಿ ಕದಿಯುವುದನ್ನು ತಡೆಯಲು ಸ್ಟ್ರಾಂಗ್ ಪಾಸ್‌ವರ್ಡ್, ಬಯೋಮೆಟ್ರಿಕ್ ಐಡಿ ಬಳಸಿ ಎಂದು ಕಂಪನಿ ವಕ್ತಾರ ತಿಳಿಸಿದ್ದಾರೆ.

ದೀಪಿಕಾ - ಸಾರಾ : ಡ್ರಗ್‌ ಕೇಸ್‌ನಲ್ಲಿ ಹೆಸರು ಕೇಳಿಬರುತ್ತಿರುವ ಬಾಲಿವುಡ್‌ ಸ್ಟಾರ್‌ಗಳು!

ಫೋನ್ ಕ್ಲೋನಿಂಗ್‌ ಮೂಲಕ ವಾಟ್ಸಾಪ್ ಮಾಹಿತಿ ಕದಿಯಲಾಗುತ್ತದೆ ಎನ್ನಲಾಗುತ್ತದೆ. ಇಂತಹದೊಂದು ತಂತ್ರಜ್ಞಾನ 2005ರಿಂದಲೂ ಇದೆ. ಕ್ಲೋನ್ ಆಗಿರುವ ಫೋನ್‌ನಿಂದ ಹಳೆಯ ಬ್ಯಾಕ್‌ಅಪ್ ಮೆಸೇಜುಗಳನ್ನೂ ಪಡೆಯಬಹುದು. ಇವುಗಳು ಸಾಮಾನ್ಯವಾಗಿ ಗೂಗಲ್ ಡ್ರೈವ್ ಅಥವಾ ಐಕ್ಲೌಡ್‌ನಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ.

ಈ ತಂತ್ರಜ್ಞಾನದ ಮೂಲಕ ನಿರ್ದಿಷ್ಟ ಮೊಬೈಲಿನ ಮಾಹಿತಿ ನಕಲು ಮಾಡಲು ಸಾಧ್ಯವಾಗುತ್ತದೆ. ಸದ್ಯ ಇದನ್ನು ಬೇರೊಂದು ಎಪ್ಲಿಕೇಷನ್ ಮೂಲಕ ಮಾಡುತ್ತಾರೆ. ಈ ಮೂಲಕ ನಮಗೆ ಮಾಹಿತಿ ಬೇಕಾಗಿರೋ ಫೋನ್ ಟಚ್ ಮಾಡದೆಯೇ ಎಲ್ಲ ಮಾಹಿತಿ ಪಡೆಯಬಹುದಾಗಿದೆ. ಇದು ವೈಯಕ್ತಿಕವಾಗಿ ಕಾನೂನುಬದ್ಧವಲ್ಲ. ಆದರೆ ಅಧಿಕಾರಿಗಳು ಫೊರೆನ್ಸಿಕ್ ವಿಧಾನದ ಮೂಲಕ ಇದನ್ನು ಬಳಸುತ್ತಾರೆ.