ಸುಶಾಂತ್ ಸಿಂಗ್ ಸಾವಿನ ತನಿಖೆ ಸಿಬಿಐಗೆ ಹೋಗಿ ಈಗ ಎಲ್ಲರ ಗಮನ ಎನ್‌ಸಿಬಿ ತನಿಖೆ ಮೇಲಿದೆ. ಡ್ರಗ್ಸ್ ಆಂಗಲ್‌ನಲ್ಲಿ ತನಿಖೆ ಮುಂದುವರಿಸಿ ಇದೀಗ ಈ ದಿಕ್ಕಿನಲ್ಲಿ ಮಾತ್ರ ಸಾಗಿದೆ ತನಿಖೆ.

ಬಾಲಿವುಡ್ ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿನ ತನಿಖೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನಟನ ಪೋಷಕರು ಸತ್ಯ ಹೊರ ತರೋಕೆ ನಿಮಗೆಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ್ದಾರೆ.

ಸೆಲೆಬ್ರಿಟಿಗಳ ವಾಟ್ಸಾಪ್ ಮೆಸೇಜ್‌ NCBಗೆ ಹೇಗೆ ಸಿಕ್ತು ? ಸೆಕ್ಯುರಿಟಿ ಬಗ್ಗೆ WhatsApp ಸ್ಪಷ್ಟನೆ ಇದು

ಈ ಬಗ್ಗೆ ಟ್ವೀಟ್ ಮಾಡಿದ ನಟನ ಸಹೋದರಿ ಶ್ವೇತಾ ಸಿಂಗ್ ಕೃತಿ, ಕುಟುಂಬ ಇಷ್ಟು ದಿನ ತಾಳ್ಮೆಯಿಂದ ಕಾದಿದೆ. ಸತ್ಯ ಹೊರ ಬರೋಕೆ ಇನ್ನೆಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ್ದಾರೆ.

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಪೋಟೋಸ್ ಬಗ್ಗೆ ಪ್ರತಿಕ್ರಿಯಿಸಿದ ಏಮ್ಸ್ ವೈದ್ಯರು ಇದು 200% ಕೊಲೆ ಎಂದಿದ್ದಾರೆ ಎಂದು ಸುಶಾಂತ್ ಕುಟುಂಬ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದರು.

ಡ್ರಗ್ಗಿಗಳಿರಲಿ, ಸುಶಾಂತ್ ಸಿಂಗ್‌ರನ್ನು ಕೊಂದಿದ್ದು ಯಾರೆಂದು ಹೇಳಿ: ಶೇಖರ್ ಸುಮನ್

ತನಿಖೆ ವಿಳಂಬ ಮಾಡಿ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಬಹಳ ಹಿಂದೆಯೇ ಏಮ್ಸ್ ವೈದ್ಯರು ನಾನು ಕಳಿಸಿದ ಫೋಟೋಸ್ ನೋಡಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಹೇಳಿದ್ದರು ಎಂದು ವಿಕಾಸ್ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಏಮ್ಸ್ ವೈದ್ಯರು ದೇಹದ ಮೇಲಿನ ಗುರುತು ನೋಡಿ ಕೊಲೆ ಎನ್ನಲು ಸಾಧ್ಯವಿಲ್ಲ  ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದಿದ್ದ ನಟನ ಸಾವು, ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬ ಆರೋಪಿಸಿತ್ತು.

ಹಾಟ್ ನಟಿ ಪೂನಂ ಮುಖಕ್ಕೆ ಪಂಚ್ ಕೊಟ್ಟ ಪತಿ

ರಾಜ್ಯಸಭಾ ಎಂಪಿ ಸುಬ್ರಮಣಿಯನ್ ಸ್ವಾಮಿ ಸುಶಾಂತ್ ಸಾವಿನಲ್ಲಿ ಸಿಬಿಐ ತನಿಖೆ ಡಿಮ್ಯಾಂಡ್ ಮಾಡಿದ ಮೊದಲ ವ್ಯಕ್ತಿ. ಸಿಬಿಐ ಈ ಕೊಲೆ, ಹಣ, ಡ್ರಗ್ಸ್ ಎಂದು ಬಹಳಷ್ಟು ದಿಕ್ಕಿನಲ್ಲಿ ಕೇಸು ದಾಖಲಿಸುತ್ತಿದೆ. ಇದು ಕೊಲೆ ಎಂದು ಸಿಬಿಐ ಕೇಸು ದಾಖಲಿಸಿಕೊಳ್ಳಬೇಕು ಎಂದು ಅವರು ಹೇಳಿದ್ದರು.