ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾದ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ತನ್ನ ಮನೆಯಲ್ಲಿ ಸಿಕ್ಕಿರೋ ಡ್ರಗ್ಸ್ ರಿಯಾ ಚಕ್ರವರ್ತಿಗೆ ಸೇರಿದ್ದು ಎಂದಿದ್ದಾರೆ. ತನ್ನ ಮನೆಯಲ್ಲಿ ಸಿಕ್ಕಿರುವ ಡ್ರಗ್ಸ್ ನಟಿ ರಿಯಾ ಚಕ್ರವರ್ತಿಗೆ ಸೇರಿದೆ ಎಂದು ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಎನ್‌ಸಿಬಿ ಮುಂದೆ ಒಪ್ಪಿಕೊಂಡಿದ್ದಾರೆ.

ಎನ್‌ಸಿಬಿ ವಿಚಾರಣೆಯ ಸಂದರ್ಭ ಈ ಬಗ್ಗೆ ಹೇಳಿದ ರಾಕುಲ್ ಪ್ರೀತ್ ಸಿಂಗ್, ರಿಯಾ ನನ್ನ ಮನೆಗೆ ಡ್ರಗ್ಸ್ ಕಳುಹಿಸುತ್ತಿದ್ದಳು. ನನ್ನ ಮನೆಯಲ್ಲಿ ಸಿಕ್ಕಿದ ಡ್ರಗ್ಸ್ ನನಗೆ ಸೇರಿದ್ದಲ್ಲ ಎಂದಿದ್ದಾರೆ.

'200% ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದ ಏಮ್ಸ್ ವೈದ್ಯರು'

ಗುರುವಾರ ರಾಕುಲ್ ಪ್ರೀತ್‌ ಸಿಂಗ್ ಮನೆಗೆ ರೈಡ್ ಮಾಡಿದ ಎನ್‌ಸಿಬಿ ಎರಡನೇ ಬಾರಿ ನೋಟಿಸ್ ನಿಡಿತ್ತು. ಗುರುವಾರ ಎನ್‌ಸಿಬಿ ಮುಂದೆ ಹಾಜರಾಗಲು ಸೂಚಿಸಿದ್ದರೂ ನಟಿ, ಗುರುವಾರ ಎನ್‌ಸಿಬಿ ಮುಂದೆ ಹಾಜರಾಗಿರಲಿಲ್ಲ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಎನ್‌ಸಿಬಿ ಅಧಿಕಾರಿ ಕೆಪಿಎಸ್ ಮಲ್ಹೋತ್ರಾ, ತನ್ನ ಕಾರಣಗಳನ್ನು ನೀಡಿ ರಾಕುಲ್ ಪ್ರೀತ್ ಸಿಂಗ್ ಏಜೆನ್ಸಿಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು. ಪ್ರತಿ ಬಾರಿ ಕಾರಣಗಳನ್ನು ನೀಡಿ ತಪ್ಪಿಸಿಕೊಂಡರೆ ಜಾಮೀನುರಹಿತ ವಾರೆಂಟ್ ನೀಡುವುದಾಗಿ ಎನ್‌ಸಿಬಿ ಎಚ್ಚರಿಸಿದೆ.

ಡ್ರಗ್ಸ್ ಘಾಟು; ದೀಪಿಕಾ, ಸಾರಾ, ಶ್ರದ್ಧಾ ಸೇರಿ ಮತ್ತೊಬ್ಬ ತಾರೆಗೆ NCB ಸಮನ್ಸ್!

ನಟಿಗೆ ನೋಟಿಸ್ ಕಳುಹಿಸಿ ಫೋನ್ ಸೇರಿ ಹಲವು ರೀತಿ ನಟಿಯನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ, ತನಗೆ ನೋಟಿಸ್ ಸಿಕ್ಕಿರುವುದನ್ನು ಒಪ್ಪಿಕೊಂಡು ಒಂದು ದಿನ ಬಿಟ್ಟು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು