Asianet Suvarna News Asianet Suvarna News

Rakshit Shetty; ಭಾರಿ ಮೊತ್ತಕ್ಕೆ 777 charlie OTT ರೈಟ್ಸ್ ಸೇಲ್

777 ಚಾರ್ಲಿ ನಿಮಾ ಬಿಡುಗಡೆಗೂ ಮೊದಲೇ ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್ ಸೇಲ್ ಆಗಿದೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಕಲರ್ಸ್ ಕನ್ನಡ ವಾಹಿನಿಗೆ ಮಾರಾಟವಾಗಿದೆ. 777 ಚಾರ್ಲಿ ವೂಟ್ ಸೆಲೆಕ್ಟ್ OTTಯಲ್ಲಿ ಬರ್ತಿದೆ

rakshith shetty starrer 777 charlie OTT rights sale for Voot select sgk
Author
Bengaluru, First Published Apr 26, 2022, 5:31 PM IST

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿಯನ್ನು(Rakshit Shetty) ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅಭಿಮಾನಿಗಳು ಕಾರತರರಾಗಿದ್ದಾರೆ. ರಕ್ಷಿತ್ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ಬಿಡುಗಡೆಗೆ ಸಿದ್ಧವಾಗಿದ್ದು ದೊಡ್ಡಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಚಾರ್ಲಿ ಇತ್ತೀಚಿಗಷ್ಟೆ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿತ್ತು.

ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಸಿನಿಮಾ ಬಿಡುಗಡೆಗೂ ಮೊದಲೇ ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್ ಸೇಲ್ ಆಗಿದೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಕಲರ್ಸ್ ಕನ್ನಡ ವಾಹಿನಿಗೆ ಮಾರಾಟವಾಗಿದೆ. ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಆದರೆ ಎಷ್ಟು ಮೊತ್ತ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. 777 ಚಾರ್ಲಿ ಯಾವ ಒಟಿಟಿ ಪ್ಲಾಟ್ ಫಾರ್ಮ್ ಬರ್ತಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು ಇದೀಗ ಅದಕ್ಕೂ ಉತ್ತರ ಸಿಕ್ಕಿದ್ದು 777 ಚಾರ್ಲಿ ವೂಟ್ ಸೆಲೆಕ್ಟ್ ನಲ್ಲಿ ಬರ್ತಿದೆ.

ಅಂದಹಾಗೆ ಬಹುನಿರೀಕ್ಷೆಯ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ವಿಳಂಬವಾಗಿತ್ತು. ಇದೀಗ ಸಿನಿಮಾ ಜೂನ್ 10ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಕನ್ನಡದ ಜೊತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ತೆರೆಗೆ ಬರುತ್ತಿದೆ.

ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಬಹಿರಂಗವಾಯ್ತು '777 ಚಾರ್ಲಿ' ರಿಲೀಸ್ ಡೇಟ್

777 ಚಾರ್ಲಿ ಸಿನಿಮಾ ವೂಟ್ ಒಟಿಟಿಗೆ ಸೇಲ್ ಆದ ಬಗ್ಗೆ ಬಹಿರಂಗ ಪಡಿಸಿ ರಕ್ಷಿತ್, 'ಅಂಗಡಿ ಬೀದಿಗಳನ್ನು ದಾಟಿ, ಕಸದ ತೊಟ್ಟಿಯಲ್ಲಿ ಕುಳಿತು, ಮಳೆಯಲ್ಲಿ ಒದ್ದೆಯಾಗಿ ಮೀನು, ಮಾರ್ಕೆಟ್ ದಾಟಿ ಇನ್ನೇನು ಚಿತ್ರಮಂದಿರಕ್ಕೆ ಬರಲಿದೆ. ಬೇರೆ ಬೇರೆ ಭಾಷೆಗಳಲ್ಲಿ ಜಗತ್ತಿನ ಬೇರೆ ಬೇರೆ ಊರಿಗಳಲ್ಲಿ ಒಂದೇ ಸಲಕ್ಕೆ ಚಿತ್ರಮಂದಿರಗಳಲ್ಲಿ ಚಾರ್ಲಿಯನ್ನು ನೋಡುವ ಬೊಗಳುವ ಸದ್ದನ್ನು ಕೇಳಿಸಿಕೊಳ್ಳುವ ದಿನ ತೀರ್ಮಾನವಾಗಿದೆ' ಎಂದಿದ್ದಾರೆ.

'ಇದರ ನಡುವೆ ಚಾರ್ಲಿಯ ಒಟಿಟಿ ಅಡ್ರೆಸ್ ಯಾವುದು ಎಂಬುದಕ್ಕೂ ಉತ್ತರ ಸಿಕ್ಕಿದೆ. ಅದು ವೂಟ್. ಟಿವಿಯನ್ನು ನೋಡಿ ಕುಣಿಯುವ ಚಾರ್ಲಿ ಯಾವ ಟಿವಿಯಲ್ಲಿ ಸಿಗುತ್ತಾಳೆ ಎಂಬ ಪ್ರಶ್ನೆ ಇದ್ದರೆ ಅದಕ್ಕೂ ಉತ್ತರ ತೀರ್ವಾನವಾಗಿದೆ. ಅದು ಕಲರ್ಸ್ ಕನ್ನಡ ಎಂದು ರಕ್ಷಿತ್ ಶೆಟ್ಟಿ ಮತ್ತು ತಂಡ ಶೇರ್ ಮಾಡಿದ್ದಾರೆ'.


Rakshit Shetty: 'ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ' ಎಂದು ರಕ್ಷಿತ್​ ಶೆಟ್ಟಿ ಹೇಳಿದ್ಯಾಕೆ?

 

ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಉಳಿದಂತೆ ದಾನೀಶ್ ಸೇಠ್, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಜೂನ್ 10ರಂದು 777 ಚಾರ್ಲಿಯನ್ನು ಕಣ್ತುಂಬಿ ಕೊಳ್ಳಲು ರಕ್ಷಿತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 

Follow Us:
Download App:
  • android
  • ios