ಸ್ಯಾಂಡಲ್್ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ (777 Charlie) ಸಿನಿಮಾದ ಟ್ರೇಲರ್‌ (Trailer) ಬಿಡುಗಡೆಯಾಗಿದೆ. ಟ್ರೈಲರ್ ಗ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ 777 ಚಾರ್ಲಿ ಟ್ರೈಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್‌ ರಿಲೀಸ್‌ ಆಗಿದೆ.

ಸ್ಯಾಂಡಲ್್ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ (777 Charlie) ಸಿನಿಮಾದ ಟ್ರೇಲರ್‌ (Trailer) ಬಿಡುಗಡೆಯಾಗಿದೆ. ಮೇ 16ರಂದು ಟ್ರೈಲರ್ ಬಿಡುಗಡೆ ಮಾಡುವುದಾಗಿ ರಕ್ಷಿತ್ ಆಂಡ್ ಟೀಂ ಬಹಿರಂಗ ಪಡಿಸಿದ್ದರು. ಅದರಂತೆ ಇಂದು ಟ್ರೈಲರ್ ಬಿಡುಗಡೆಯಾಗಿದ್ದು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ 777 ಚಾರ್ಲಿ ಟ್ರೈಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೇಲರ್‌ ರಿಲೀಸ್‌ ಆಗಿದೆ.

777 ಚಾರ್ಲಿ ಚಿತ್ರದ ಟ್ರೈಲರ್ ಅನ್ನು ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ರಿಲೀಸ್ ಮಾಡಿದ್ದಾರೆ. ತೆಲುಗಿನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾದ ಟ್ರೈಲರ್ ಅನ್ನು ನಟಿ ಸಾಯಿ ಪಲ್ಲವಿ, ವೆಂಕಟೇಶ್ ದಗ್ಗುಬಾಟಿ ಮತ್ತು ಲಕ್ಷ್ಮೀ ಮಂಚು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಇನ್ನು ಮಲಯಾಳಂ ಭಾಷೆಯ ಟ್ರೈಲರ್ ಅನ್ನು ಖ್ಯಾತ ನಟರಾದ ನಿವಿನ್ ಪೌಲಿ, ಆಸಿಫ್ ಅಲಿ, ಟೊವಿನೋ ಥಾಮಸ್, ಆಂಟನಿ ವರ್ಗೀನ್ ಮತ್ತು ಅರ್ಜುನ್ ರಿಲೀಸ್ ಮಾಡಿದ್ದಾರೆ. 777 ಚಾರ್ಲಿ ಟ್ರೈಲರ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇನ್ನು ತಮಿಳು ಟ್ರೈಲರ್ ಅನ್ನು ತಮಿಳಿನ ಖ್ಯಾತ ನಟ ಧನುಷ್ ಬಿಡುಗಡೆ ಮಾಡಿದ್ದಾರೆ.

ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಸಿನಿಮಾ ಇದಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ಕೂಡ ಭಾವನಾತ್ಮಕವಾಗಿದ್ದು ನೋಡುಗರ ಕಣ್ಣಂಚಲ್ಲಿ ನೀರು ತರುವಂತೆ ಮಾಡಿದೆ. ಧರ್ಮ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿಗರೇಟ್, ಕುಡಿತ, ಕೆಲಸ ಅಂತಿದ್ದ ಧರ್ಮನ ಜೀವನಕ್ಕೆ ಚಾರ್ಲಿ ಎಂಟ್ರಿ ಕೊಟ್ಟ ಬಳಿಕ ಏನೆಲ್ಲ ಆಗುತ್ತದೆ, ಧರ್ಮ ಹೇಗೆ ಬದಲಾಗುತ್ತಾನೆ ಎನ್ನುವುದು ಸಿನಿಮಾದಲ್ಲಿ ತೋರಿಸಲಾಗಿದೆ. ಚಾರ್ಲಿ ಟ್ರೈಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಶ್ವಾನ ಪ್ರಿಯರಿಗೆ ಈ ಸಿನಿಮಾ ಕಂಡಿತ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಟಿ ರಮ್ಯಾರನ್ನ ಇದುವರೆಗೂ ಭೇಟಿ ಮಾಡಿಲ್ಲ; ಗಾಸಿಪ್‌ ಬಗ್ಗೆ ರಕ್ಷಿತ್ ಶೆಟ್ಟಿ ಕ್ಲಾರಿಟಿ!

777 ಚಾರ್ಲಿ’ ಸಿನಿಮಾದ ಹಿಂದಿ ವಿತರಣೆ ಹಕ್ಕು ಖ್ಯಾತ ವಿತರಣಾ ಸಂಸ್ಥೆ ಯುಎಫ್‌ಓ ಪಾಲಾಗಿದೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ವಿತರಣೆಯ ಹೊಣೆ ಹೊತ್ತರೆ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಮಲಯಾಳಂನಲ್ಲಿ ನಟ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಿನಿಮಾದ ಮೊದಲ ವಿಮರ್ಶೆ

ಈಗಾಗಲೇ 777 ಚಾರ್ಲಿ ಸಿನಿಮಾ ನೋಡಿ ತೆಲುಗು ಸ್ಟಾರ್ ರಾಣಾದಗ್ಗುಬಾಟಿ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಮೊದಲ ವಿಮರ್ಶೆ ಕೂಡ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ರಾಣಾ. '777 ಚಾರ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಅದ್ಭತವಾದ ಟ್ರೀಟ್ ಆಗಿದೆ. ಸಂಪೂರ್ಣ ರಿಫ್ರೆಶಿಂಗ್ಸಿನಿಮಾ' ಎಂದಿದ್ದರು.

777 ಚಾರ್ಲಿ ನೋಡಿದರೆ ನಾಯಿಗಳ ಮೇಲೆ ಪ್ರೀತಿ ಹೆಚ್ಚಾಗಲಿದೆ: ರಕ್ಷಿತ್ ಶೆಟ್ಟಿ

ಜೂನ್ 10ಕ್ಕೆ ರಿಲೀಸ್

ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಉಳಿದಂತೆ ದಾನೀಶ್ ಸೇಠ್, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.