ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್​ ಈಗ ಪಾಕಿಸ್ತಾನಕ್ಕೆ ಹೋಗ್ತಾರಂತೆ. ನಟಿ ಹೇಳಿದ್ದೇನು ಕೇಳಿ.  

ಕಳೆದ ಹಲವು ದಿನಗಳಿಂದ ಡ್ರಾಮಾ ಕ್ವೀನ್​ ನಟಿ ರಾಖಿ ಸಾವಂತ್​ (Rakhi Sawant) ಬಹಳ ಸುದ್ದಿಯಲ್ಲಿರುವ ನಟಿ. ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ.

ಹೊಸ ಕಾರು ಖರೀದಿಸಿದ್ದೇನೆ. ಅದನ್ನು ತೋರಿಸುವೆ ಎಂದು ಪಾಪರಾಜಿಗಳನ್ನು ಕರೆದುಕೊಂಡು ಹೋದರು. ನಂತರ ಅವರಿಗೆ ಪ್ರಶ್ನೆ ಕೇಳಿದಾಗ, ತುಂಬಾ ತೊಂದ್ರೆ ಕೊಡಬೇಡಿ. ನಾನೂ ಪಾಕಿಸ್ತಾನಕ್ಕೆ ಹೋಗಿ ಬಿಡ್ತೇನೆ ಎಂದರು. ಸಾನಿಯಾ ಮಿರ್ಜಾ ಹೋಗಿಲ್ವಾ ಹಾಗೆ ನಾನೂ ಹೋಗ್ತೇನೆ ಎಂದರು. ಇಡೀ ವಿಶ್ವದಲ್ಲಿ ನನ್ನನ್ನು ಪ್ರೀತಿಸೋರು ತುಂಬಾ ಜನ ಇದ್ದಾರೆ. ನನಗೆ ಎಷ್ಟೆಲ್ಲಾ ಮಂದಿ ಗಿಫ್ಟ್​ ಕೊಡ್ತಾರೆ ಎನ್ನುತ್ತಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿವೆ. ಬಹುತೇಕ ಮಂದಿ ಈ ಕೆಲಸವನ್ನು ಮೊದಲು ಮಾಡು ಎಂದಿದ್ದಾರೆ. ಇನ್ನು ಕೆಲವರು ನಿನ್ನ ಬಳಗವನ್ನೂ ಕರೆದುಕೊಂಡು ಹೋಗು ಎಂದು ಹೇಳುತ್ತಿದ್ದಾರೆ. ನಿಮ್ಮ ನಾಟಕ ನೋಡಿ ಸಾಕಾಗಿ ಹೋಗಿದೆ. ಆದಷ್ಟು ಬೇಗ ಭಾರತ ಬಿಟ್ಟು ತೊಲಗಿ ಎಂದಿದ್ದಾರೆ. ಇನ್ನು ಕೆಲವರು ಪಾಕಿಸ್ತಾನದ ಸ್ಥಿತಿ ಹೇಗಿದೆ ಎನ್ನೋದು ಸ್ವಲ್ಪನಾದ್ರೂ ಗೊತ್ತಿದ್ಯಾ ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಅದಕ್ಕೆ ಪ್ರತಿಕ್ರಿಯಿಸಿ ಅವ್ರು ಹೋದರೆ ಹೋಗ್ಲಿ, ಅಲ್ಲಿಯ ಪರಿಸ್ಥಿತಿ ಬಗ್ಗೆ ಹೇಳಿ ಅವರನ್ನು ತಡಿಯಬೇಡಿ ಎಂದಿದ್ದಾರೆ.

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

 ಆದಿಲ್​ ಖಾನ್​ರನ್ನು ಮದ್ವೆಯಾಗಿ ರಾಖಿಯಿಂದ ಫಾತೀಮಾ ಆಗಿರುವುದಾಗಿ ಹೇಳಿಕೊಂಡಿದ್ದ ರಾಖಿ ಮೆಕ್ಕಾ-ಮದೀನಾಕ್ಕೆ ಹೋಗಿ ಉಮ್ರಾ ನೆರವೇರಿಸಿ ವಾಪಸಾಗಿದ್ದಾರೆ. ತಾವು ಪವಿತ್ರರಾಗಿದ್ದು, ಯಾರೂ ಪುರುಷರು ತಮ್ಮನ್ನು ಮುಟ್ಟಬಾರದು ಎಂದು ಹೇಳಿದ್ದಾರೆ. ಇವೆಲ್ಲವುಗಳ ನಡುವೆ ಈಕೆ ಒಬ್ಬ ಸೈಕೋಪಾತ್​, ಮಾನಸಿಕ ತೊಂದರೆಯಿಂದ ಬಳಲುತ್ತಿರುವುದಾಗಿ ಹಲವರು ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ, ಆದಿಲ್​ ಖಾನ್​ ಅವರು ರಾಖಿ ವಿರುದ್ಧ ಆರೋಪ ಮಾಡಿದ್ದು, ನಾನು ಈಕೆಗೆ ಆರನೇ ಗಂಡಸಾಗಿ ಪ್ರವೇಶ ಮಾಡಿದೆ. ನನ್ನನ್ನೂ ಬಿಟ್ಟು ಏಳನೆಯವನ ಹುಡುಕಾಟದಲ್ಲಿ ಇದ್ದಾಳೆ. ಅವಳಿಗೆ ಬೇಕಿರುವುದು ಗಂಡಸರಲ್ಲ, ಬದಲಿಗೆ ಅವರ ಹಣ ಎಂದಿದ್ದಾರೆ. ರಾಖಿ ತನ್ನ ವಿರುದ್ಧ ಎದುರಾದವರಿಗೆ ಸುಪಾರಿ ಕೊಟ್ಟು ಕೊಲ್ಲಿಸಲೂ ಹೇಸುವವಳಲ್ಲ. ಅವಳು ನನ್ನನ್ನೂ ಕೊಲ್ಲಲು ಬಯಸಿದ್ದಳು, ಇದರ ಪುರಾವೆ ಕೂಡ ಕೊಡಬಲ್ಲೆ. ಆಕೆಯ ಮಾಜಿ ಪತಿ ರಿತೇಶ್​ ಅವರನ್ನೂ ಕೊಲ್ಲಲು ಮಾಡಿದ್ದಳು ಎಂದಿದ್ದರು. 


ರಾಖಿ ಸಾವಂತ್‌ ಅವರ ಪತಿ ಆದಿಲ್‌ ಖಾನ್‌ ದುರ್‍ರಾನಿ ಅವರು ಮೈಸೂರಿನವರು. ರಾಖಿ ಪತಿಯಿಂದ ದೂರವಾಗುವ ಪಣತೊಟ್ಟರೂ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿರುವ ಅತ್ತೆ ಮನೆಗೆ ಬಂದಿದ್ದರು. ಹಾಗೇ ಬಂದಿದ್ದರೆ ಅವರು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅವರು ಬಂದಿದ್ದು ಜೆಸಿಬಿಯಲ್ಲಿ! ಜೆಸಿಬಿಯಲ್ಲಿ ಬಾಜಾ ಬಜಂತ್ರಿಯವರ ಜೊತೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು ರಾಖಿ ಸಾವಂತ್‌. ಈ ಧೈರ್ಯ ಮಾಡಲು ರಾಖಿಗೆ ಮಾತ್ರ ಸಾಧ್ಯ ಎನ್ನುವ ಶೀರ್ಷಿಕೆಯಿಂದ ಈ ವಿಡಿಯೋ ವೈರಲ್‌ ಆಗಿತ್ತು. 

LEO ಟ್ರೇಲರ್​ ನೋಡಿ ಸೀಟು ಪೀಸ್​ ಪೀಸ್​ ಮಾಡಿದ ಫ್ಯಾನ್ಸ್​: ಚಿತ್ರ ನೋಡಿದ್ಮೇಲೆ ದೇವ್ರೆ ಗತಿ!

View post on Instagram