Asianet Suvarna News Asianet Suvarna News

LEO ಟ್ರೇಲರ್​ ನೋಡಿ ಸೀಟು ಪೀಸ್​ ಪೀಸ್​ ಮಾಡಿದ ಫ್ಯಾನ್ಸ್​: ಚಿತ್ರ ನೋಡಿದ್ಮೇಲೆ ದೇವ್ರೆ ಗತಿ!

ದಳಪತಿ ವಿಜಯ್​ ಅವರ ಬಹು ನಿರೀಕ್ಷಿತ ಲಿಯೋ ಚಿತ್ರದ ಟ್ರೇಲರ್​ ನೋಡಿ ಫ್ಯಾನ್ಸ್​ ಚಿತ್ರಮಂದಿರದ ಸೀಟುಗಳನ್ನು ಪೀಸ್​ ಪೀಸ್​ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 

Thalapathy Vijay fans broke all the seats in the cinema hall Leo suc
Author
First Published Oct 7, 2023, 5:37 PM IST

ಚಿತ್ರತಾರೆಯರ ಅಭಿಮಾನಿಗಳು ಎಂದರೆ ಅದು ಸುಮ್ಮನೇ ಅಲ್ಲ. ಇಂದು ಎಷ್ಟೋ ಮಂದಿ ಚಿತ್ರ ತಾರೆಯರನ್ನೇ ತಮ್ಮ ರೋಲ್​ ಮಾಡೆಲ್​ಗಳನ್ನಾಗಿ ಮಾಡಿಕೊಳ್ಳುವುದು ಇದೆ. ಅವರ ಲೈಫ್​ಸ್ಟೈಲ್​ಗಳನ್ನೇ ಅನುಸರಿಸುವುದು, ಅವರ ಡ್ರೆಸ್​, ಹೇರ್​ಸ್ಟೈಲ್​ ಸೇರಿದಂತೆ ತಮ್ಮ ನೆಚ್ಚಿನ ಸಿನಿಮಾ ನಟ ಏನು ಮಾಡುತ್ತಾರೋ ಅದನ್ನೇ ಮಾಡುವುದು ಹಲವರಿಗೆ ಇಷ್ಟ. ಸಿನಿಮಾ ತಾರೆಯರನ್ನೇ ದೇವರು ಎಂದುಕೊಂಡವರೂ ಕಡಿಮೆಯೇನಿಲ್ಲ. ಇಂದು ನಾಯಕನೇ ಲಾಂಗು, ಕತ್ತಿ, ಮಚ್ಚು ಹಿಡಿದು ರಕ್ತ ಹರಿಸುವ  ಚಿತ್ರಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅದನ್ನೇ ಅನುಸರಿಸಿ ಅಪರಾಧ ಕೃತ್ಯಗಳನ್ನೂ ಮಾಡುವವರಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಇಂಥ ಚಿತ್ರ ನೋಡಿ ಹಾಗೆ ಮಾಡಿದೆ ಎನ್ನುವ ದೊಡ್ಡ ವರ್ಗವೇ ಇದೆ. ಇನ್ನು ಹಲವು ಬಾರಿ ತಮ್ಮ ನೆಚ್ಚಿನ ತಾರೆಯನ್ನು ನೋಡುವುದಕ್ಕಾಗಿ, ಅವರ ಗಮನ ಸೆಳೆಯುವುದಕ್ಕಾಗಿ ರಕ್ತದಿಂದ ಅವರಿಗೆ ಪತ್ರ ಬರೆಯುವುದು, ಕೈಗಳನ್ನು ಕೊಯ್ದುಕೊಂಡು ಆ ನಾಯಕನನ್ನು ನೋಡಬೇಕು ಎನ್ನುವುದು ಇಲ್ಲವೇ ಚಿತ್ರನಟರ ಮನೆಯ ಕಾಂಪೌಂಡ್​ ಹಾರಿ ಸಿಕ್ಕಿಬೀಳುವುದು... ಇಂಥ ಕೃತ್ಯಗಳೂ ನಡೆಯುತ್ತಲೇ ಇರುತ್ತವೆ. ಯಾರ ಮೇಲಾದರೂ ಅಭಿಮಾನ ಇದ್ದರೆ ಚೆಂದ, ಆದರೆ ಅದು ಅಂಧಾಭಿಮಾನ, ಅತಿರೇಕದ ಅಭಿಮಾನ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಿಟ್ಟಿದೆ.

ಅಂಥದ್ದೇ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಸೌತ್ ಸೂಪರ್ ಸ್ಟಾರ್ ವಿಜಯ್ ದಳಪತಿ ಅಭಿನಯದ ಲಿಯೋ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಂಚಲನ ಮೂಡಿಸಿದೆ. ವಿಜಯ್​ ದಳಪತಿ ಅವರಿಗೆ ಎಲ್ಲರಿಗೂ ತಿಳಿದಿರುವಂತೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ದೇಶಾದ್ಯಂತ ಇವರನ್ನು ಆರಾಧಿಸುವ ದೊಡ್ಡ ವರ್ಗವೇ ಇದೆ. ಇವರ ಬಹು ನಿರೀಕ್ಷಿತ ಲಿಯೋ ಸಿನಿಮಾಕ್ಕೆ  ಅಭಿಮಾನಿಗಳು  ಕಾತರದಿಂದ ಕಾಯುತ್ತಿದ್ದಾರೆ. ಅದರ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗಿದೆ. ಲಿಯೋ ಚಿತ್ರದ ಟ್ರೇಲರ್ ಬಿಡುಗಡೆಯಾದ ತಕ್ಷಣ, ಅಭಿಮಾನಿಗಳು ಹುಚ್ಚುಚ್ಚಾಗಿ ಪ್ರತಿಕ್ರಿಯಿಸಿದ್ದಾರೆ.   ಥಿಯೇಟರ್‌ಗಳಲ್ಲಿ ಲಿಯೋ ಟ್ರೇಲರ್ ಅನ್ನು ಪ್ರದರ್ಶಿಸಲಾಗಿತ್ತು.  ಇದನ್ನು ನೋಡಿದ ನಂತರ ಅಭಿಮಾನಿಗಳು ಚೆನ್ನೈನ ಸಿನಿಮಾ ಹಾಲ್‌ನಲ್ಲಿ ಎಲ್ಲಾ ಸೀಟುಗಳನ್ನು ಮುರಿದು ಅಂತಹ ಗದ್ದಲವನ್ನು ಸೃಷ್ಟಿಸಿದ್ದಾರೆ.

ಶೇಕ್​ಹ್ಯಾಂಡ್​ ಮಾಡುತ್ತಾ ವೃದ್ಧನಿಂದ ಲೈಂಗಿಕ ಕಿರುಕುಳ: ಶಾಕಿಂಗ್​ ಹೇಳಿಕೆ ರಿವೀಲ್​ ಮಾಡಿದ ನಟಿ ಈಶಾ ಚೋಪ್ರಾ

ಅಷ್ಟಕ್ಕೂ ಈ ಗದ್ದಲ ಸೃಷ್ಟಿಮಾಡಿದ್ದು ಟ್ರೇಲರ್​ ಚೆನ್ನಾಗಿಲ್ಲ ಎಂದೇನಲ್ಲ. ಬದಲಿಗೆ ತಮ್ಮ ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್​ಗೆ ಅಷ್ಟು ಖುಷಿಯಾಗಿದೆಯಂತೆ. ಅದಕ್ಕಾಗಿ ಹುಚ್ಚಾಪಟ್ಟೆಯಾಗಿ ಕುಣಿದು ಕುಪ್ಪಳಿಸಿ ಕೈಗೆ ಸಿಕ್ಕ ಸೀಟುಗಳನ್ನು ಚೂರು ಚೂರು ಮಾಡಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. ಈ ಚಿತ್ರಮಂದಿರದ ಹೆಸರು ರೋಶನಿ ಸಿಲ್ವರ್ ಸ್ಕ್ರೀನ್. ಟ್ರೇಡ್ ಅನಾಲಿಸ್ಟ್ ಮನೋಬಾಲಾ ವಿಜಯಬಾಲನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಿನಿಮಾ ಹಾಲ್‌ನ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಚಿತ್ರಮಂದಿರದ ಸೀಟುಗಳು ಮುರಿದು ಬಿದ್ದಿರುವುದು ಕಂಡು ಬಂದಿದೆ. ಈ ವಿಡಿಯೋದಲ್ಲಿ  ಜನರ ಗುಂಪು ಕೂಡ ಕಾಣುತ್ತಿದೆ. ಲಿಯೋ ಟ್ರೇಲರ್ ನೋಡಿದ ಪ್ರೇಕ್ಷಕರು ತಮ್ಮ ಉತ್ಸಾಹವನ್ನು ತೋರಿಸಲು ಚಿತ್ರಮಂದಿರದ ಆಸ್ತಿಯನ್ನು ಹಾನಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಲಿಯೋವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ.  

ಚಿತ್ರದ ಟ್ರೇಲರ್ ಬಗ್ಗೆ ಹೇಳುವುದಾದರೆ, ಚಿತ್ರವು  ಮತ್ತೊಮ್ಮೆ ದಕ್ಷಿಣದ ಸಿನಿಮಾ ಕ್ಷೇತ್ರದಲ್ಲಿ ಮೋಡಿ ಮಾಡುವಂತೆ ಕಾಣುತ್ತಿದೆ. ಸೂಪರ್‌ಸ್ಟಾರ್ ವಿಜಯ್ ದಳಪತಿ ಅವರು,  ಸರಣಿ ಕೊಲೆಗಾರ, ದರೋಡೆಕೋರರಿಂದ ತುಂಬಿದ ಟ್ರಕ್  ವಿರುದ್ಧ ಹೋರಾಡುತ್ತಿರುವುದು ಟ್ರೇಲರ್​ನಲ್ಲಿ ನೋಡಬಹುದು.  ಟ್ರೇಲರ್ ಕಾಶ್ಮೀರ ಕಣಿವೆಯ ವೈಮಾನಿಕ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಹಿನ್ನಲೆಯಲ್ಲಿ ನಾವು ಸರಣಿ ಕೊಲೆಗಾರನ ಕಥೆಯನ್ನು ನಿರೂಪಿಸುವ ಧ್ವನಿಯನ್ನು ಕೇಳಬಹುದು, ಅವನು ಪ್ರಸಿದ್ಧ ನೃತ್ಯ ಸಂಯೋಜಕ ಸ್ಯಾಂಡಿ ಮಾಸ್ಟರ್, ರಸ್ತೆಯ ಮಧ್ಯದಲ್ಲಿ ನಿಂತು ಮನಬಂದಂತೆ ಶೂಟ್ ಮಾಡುವ ಕ್ರೂರ ವ್ಯಕ್ತಿ. ಇದರ ನಂತರ, ನಾವು ಸಂಜಯ್ ದತ್ ಮತ್ತು ಅರ್ಜುನ್ ಅವರ ಹೆರಾಲ್ಡ್ ದಾಸ್ ಅವರ ಒಂದು ನೋಟವನ್ನು ಪಡೆಯುತ್ತೇವೆ. ಇಲ್ಲಿ   ವಿಜಯ್ ಅವರು  ಸಿಂಹದಂತೆ ನಡೆದು ಸರಣಿ ಹಂತಕನ ಮೇಲೆ ಗುಂಡು ಹಾರಿಸುತ್ತಾರೆ.  ಅಕ್ಟೋಬರ್ 19 ರಂದು ಥಿಯೇಟರ್‌ಗಳಲ್ಲಿ  ಇದು ಬಿಡುಗಡೆಯಾಗಲಿದೆ. 

ಆಫ್ಘನ್ ಪ್ರಜೆ ಅಮಿತಾಭ್​ ಪುರುಷತ್ವದ ಸಂಕೇತ, ವಿರಾಟ್​ ಕೊಹ್ಲಿ ಸಲಿಂಗಕಾಮಿ ಎಂದ ತಾಲಿಬಾನ್​!

Follow Us:
Download App:
  • android
  • ios