Asianet Suvarna News Asianet Suvarna News

ಮತ್ತೆ ಮದುವೆಯಾದ ರಾಖಿ ಸಾಮಂತ್; ಮೈಸೂರು ಮೂಲದ ಆದಿಲ್ ಜೊತೆ ರಿಜಿಸ್ಟರ್ ಮ್ಯಾರೇಜ್

ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮೈಸೂರು ಮೂಲದ ಬಾಯ್ ಫ್ರೆಂಡ್ ಆದಿಲ್ ಜೊತೆ ಹಸೆಮಣೆ ಏರಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Rakhi Sawant secretly gets married to Adil Khan Durrani and photos of the couple from the court wedding viral sgk
Author
First Published Jan 11, 2023, 4:10 PM IST

ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಖಿ ಸಾಮಂತ್ ಮತ್ತೆ ಮದುವೆಯಾಗಿದ್ದಾರೆ. ಮೈಸೂರು ಮೂಲದ ಬಾಯ್ ಫ್ರೆಂಡ್ ಆದಿಲ್ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆಯಾಗಿದ್ದಾರೆ. ಈ ಬಗ್ಗೆ ರಾಖಿ ಅಥವಾ ಆದಿಲ್ ಕಡೆಯಿಂದ ಅಧಿಕೃತಗೊಳಿಸದಿದ್ದರೂ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರ ಪೋಟೋಗಳನ್ನು ನೋಡಿದರೆ ಇಬ್ಬರೂ ಕೋರ್ಟ್‌ನಲ್ಲಿ ಮದುವೆಯಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಆದರೆ ಈ ಸುದ್ದಿಯನ್ನು ಆದಿಲ್ ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. 

ರಾಖಿ ಸಾವಂತ್  ಮತ್ತು ಉದ್ಯಮಿ ಆದಿಲ್ ದುರಾನಿ ಅನೇಕ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಯಾವಾಗಲು ಒಟ್ಟಿಗೆ  ಕಾಣಿಸಿಕೊಳ್ಳುತ್ತಿದ್ದರು. ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದಿಲ್ ತನ್ನ ಬಾಯ್ ಫ್ರೆಂಡ್ ಎಂದು ಅನೇಕ ಬಾರಿ ಹೇಳಿದ್ದರು. ಆದರೆ ಮದುವೆಯಾದ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಇಬ್ಬರೂ ಜನವರಿ 11ರಂದು ನ್ಯಾಯಾಲಯದಲ್ಲಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇದೀಗ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೈರಲ್ ಆಗಿರುವ ಫೋಟೋಗಳಲ್ಲಿ ರಾಖಿ ಸಾವಂತ್ ಮತ್ತು ಆದಿಲ್ ದುರಾನಿ ಇಬ್ಬರೂ ಕೊರಳಿಗೆ ಮಾಲೆ ಹಾಕಿಕೊಂಡಿದ್ದಾರೆ. ಬಳಿಕ ಮದುವೆ ಪ್ರಮಾಣ ಪತ್ರಕ್ಕೆ ಸಹಿ ಮಾಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಪ್ರಮಾಣ ಪತ್ರ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ರಾಖಿ ಸಾವಂತ್ ಸೆಲ್ವರ್ ಧರಿಸಿದ್ರೆ ಆದಿಲ್ ಖಾನ್ ಡೆನಿಮ್ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದಾರೆ. ಇಬ್ಬರೂ ಮಾಲೆ ಹಾಕಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

ಮದುವೆ ಸುದ್ದಿ ನಿರಾಕರಿಸಿದ ಆದಿಲ್ 

ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಲೀಕ್ ಆದ ಬಳಿಕ ಆದಿಲ್ ಮದುವೆ ವಿಚಾರವನ್ನು ನಿರಾಕರಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಆದಿಲ್, ರಾಖಿ ಸಾವಂತ್ ಅವರನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. 

ಅಮ್ಮನಿಗೆ ಕ್ಯಾನ್ಸರ್, ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಪ್ರಾರ್ಥಿಸಿ; ಕಣ್ಣೀರಿಟ್ಟ ರಾಖಿ ಸಾವಂತ್

ರಾಖಿ ಸವಂತ್ ತಾಯಿ ಆಸ್ಪತ್ರೆಯಲ್ಲಿ 

ರಾಖಿ ಸಾವಂತ್ ತಾಯಿ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿ ಜಯ್ ಸಾವಂತ್ ಅವರ ವಿಡಿಯೋವನ್ನು ರಾಖಿ ಸಾವಂತ್ ಇತ್ತೀಚಿಗಷ್ಟೆ ಶೇರ್ ಮಾಡಿದ್ದರು. ಅಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಹೇಳಿದ್ದರು. ತಾಯಿಯ ಅನಾರೋಗ್ಯದ ಬೆನ್ನಲ್ಲೇ ಮದುವೆ ಸುದ್ದಿ ವೈರಲ್ ಆಗಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ರಾಖಿ ಸಾವಂತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

Rakhi Sawant surgery: ಹೊಟ್ಟೆ ಗಂಟು ತೆಗೆಸಿಕೊಳ್ಳಲು 4 ಗಂಟೆ ಆಪರೇ‍ಷನ್ ಮಾಡಿಸಿಕೊಂಡ ರಾಖಿ!

ರಾಖಿಗೆ 2ನೇ ಮದುವೆ

ಅಂದಹಾಗೆ ರಾಖಿ ಸಾವಂತ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಮೊದಲು ರಿತೇಶ್ ಎನ್ನುವವರ ಜೊತೆ ರಾಖಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾಗಿ ಕೆಲವೇ ಸಮಯಕ್ಕೆ ರಿತೇಶ್‌ರಿಂದ ದೂರ ಆಗಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಆದಿಲ್ ಜೊತೆ ಪ್ರೀತಿಯಲ್ಲಿದ್ದರು. ಇದೀಗ ಮದುವೆಯಾಗಿದ್ದಾರೆ. 

Follow Us:
Download App:
  • android
  • ios