ಅಮ್ಮನಿಗೆ ಕ್ಯಾನ್ಸರ್, ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಪ್ರಾರ್ಥಿಸಿ; ಕಣ್ಣೀರಿಟ್ಟ ರಾಖಿ ಸಾವಂತ್

ರಾಖಿ ಸಾವಂತ್ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ತಾಯಿಗಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ. 

Rakhi Sawant breaks down as her mother is hospitalised due to brain tumour sgk

ವಿವಾದಗಳ ಮೂಲಕವೇ ಸದಾ ಸದ್ದು ಮಾಡುತ್ತಿದ್ದ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಇತ್ತೀಚಿಗೆ ಹೆಚ್ಚು ಕ್ಯಾಮರಾಗೆ ಕಾಣ್ಣಿಗೆ ಸೆರೆಯಾಗಿಲ್ಲ. ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದು ಕಣ್ಣೀರಾಕಿದ್ದಾರೆ. ತನ್ನ ತಾಯಿ ಜಯ ಸಾವಂತ್ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ಬಹಿರಂಗ ಪಡಿಸಿ ಭಾವುಕರಾಗಿದ್ದಾರೆ. ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇದೆ ಎಂದು ಹೇಳಿದ್ದಾರೆ.  ತಾಯಿ ಆಸ್ಪತ್ರೆಯಲ್ಲಿದ್ದಾರೆ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ.  

ರಾಖಿ ಸಾವಂತ್ ಇತ್ತೀಚಿಗೆ ಮರಾಠಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಹಿಂದಿ ಬಿಗ್ ಬಾಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ರಾಖಿ ಮರಾಠಿ ಬಿಗ್ ಬಾಸ್ ಮೂಲಕವೂ ಪ್ರೇಕ್ಷಕರನ್ನು ರಂಜಿಸಿದ್ದರು. ತಾಯಿಯ ಆರೋಗ್ಯ ಸರಿ ಇಲ್ಲದೇ ಆಸ್ಪತ್ರೆ ಸೇರಿದ್ದಾರೆ ಎನ್ನುವ ಕಾರಣಕ್ಕೆ ರಾಖಿ ಸಾವಂತ್ ಬಿಗ್ ಮನೆಯಿಂದ ಹೊರ ಬಂದಿದ್ದಾರೆ.  

ವಿಡಿಯೋದಲ್ಲಿ ರಾಖಿ ಸಾವಂತ್, 'ತಾಯಿ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸರಿಯಲ್ಲ, ಆಕೆಗಾಗಿ ಪ್ರಾರ್ಥಿಸಿ' ಎಂದು ಹೇಳಿದ್ದಾರೆ. ರಾಖಿ ಸಾವಂತ್ ವಿಡಿಯೋದಲ್ಲಿ ಬಾಯ್ ಫ್ರೆಂಡ್ ಆದಿಲ್ ಖಾನ್ ದುರಾನಿ ಮತ್ತು ಆಕೆಯ ಸಹೋದರ ರಾಕೇಶ್ ಕೂಡ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ರಾಖ್, 'ಎಲ್ಲರಿಗೂ ನಮಸ್ಕಾರ, ನಾನು ನಿನ್ನೆ ರಾತ್ರಿ ಬಿಗ್ ಬಾಸ್ ಮರಾಠಿ ಸೀಸನ್ 4 ರಿಂದ ಹೊರಬಂದೆ. ನನ್ನ ತಾಯಿಗೆ ಆರೋಗ್ಯ ಸರಿ ಇಲ್ಲ. ಅವರು ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ' ಎಂದು ಕೇಳಿಕೊಂಡಿದ್ದಾರೆ. 

Rakhi Sawant surgery: ಹೊಟ್ಟೆ ಗಂಟು ತೆಗೆಸಿಕೊಳ್ಳಲು 4 ಗಂಟೆ ಆಪರೇ‍ಷನ್ ಮಾಡಿಸಿಕೊಂಡ ರಾಖಿ!

'ಅಮ್ಮ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ. ಅವರಿಗೆ ಕ್ಯಾನ್ಸರ್‌ನೊಂದಿಗೆ ಬ್ರೈನ್ ಟ್ಯೂಮರ್ ಇದೆ ಎಂದು ನಮಗೆ ಗೊತ್ತಾಯಿತು. ತಾನು ಬಿಗ್ ಬಾಸ್ ಮರಾಠಿ ಮನೆಯಲ್ಲಿದ್ದಾಗ ಯಾರೂ ತನ್ನ ತಾಯಿಯ ಆರೋಗ್ಯದ ಬಗ್ಗೆ ಹೇಳಲಿಲ್ಲ. ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ರಾಖಿ ಹೇಳಿಕೊಂಡಿದ್ದಾರೆ. 

ಅದೇ ವಿಡಿಯೋದಲ್ಲಿ ರಾಖಿ ತನ್ನ ತಾಯಿಯ ಆರೋಗ್ಯದ ಬಗ್ಗೆ ವೈದ್ಯರ ಬಳಿ ಕೇಳಿದ್ದಾರೆ. 'ಅವರ ಎಡಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ. ಸ್ಯಾಂಪಲ್ ಅನ್ನು ಹೊರತೆಗೆದು ಲ್ಯಾಬ್‌ಗೆ ಕಳುಹಿಸಲಾಗಿದೆ, ಶುಕ್ರವಾರ ರಿಸಲ್ಟ್ ಗೊತ್ತಾಗಲಿದೆ. ನಂತರವೇ ನಮಗೆ ಗೊತ್ತಾಗಲಿದೆ. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ಇದೀಗ ಆಪರೇಷನ್ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಹೇಳಿದ್ದಾರೆ. ರಾಕಿ ಸಾವಂತ್ ತಾಯಿ  ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಮೈಸೂರು ಹುಡುಗನ್ನ ಮದ್ವೆ ಆಗ್ಬೇಕಂತೆ ರಾಖಿ ಸಾವಂತ್‌

ಬಿಗ್ ಬಾಸ್ ಮರಾಠಿಯಿಂದ ಹೊರಬಂದ ನಂತರ ರಾಖಿ ಸಾವಂತ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರು ಅಕ್ಷಯ್ ಕೇಳ್ಕರ್, ಅಪೂರ್ವ ನೆಮ್ಲೇಕರ್, ಕಿರಣ್ ಮಾನೆ ಮತ್ತು ಅಮೃತಾ ಧೋಂಗಡೆ ಅವರೊಂದಿಗೆ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಅಕ್ಷಯ್ ಕೇಳ್ಕರ್ ಅವರು ಬಿಗ್ ಬಾಸ್ ಸೀಸನ್ 4 ಮರಾಠಿ ವಿಜೇತರಾಗಿದ್ದರು. 

Latest Videos
Follow Us:
Download App:
  • android
  • ios