ರಾಖಿ ಸಾವಂತ್ ಜೊತೆ ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿ ಮೈಸೂರು ಮೂಲದ ಆದಿಲ್ ಖಾನ್ ದುರಾನಿ. ಆದಿಲ್ ಮುಂಬೈನಲ್ಲಿ ನೆಲೆಸಿದ್ದಾರೆ. ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ರಾಖ್ ಸಾವಂತ್ ಹೇಳಿದ್ದಾರೆ. ಈಗಾಗಲೇ ರಾಖಿ ಸಾವಂತ್, ಆದಿಲ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಆದಿಲ್ ಮತ್ತು ರಾಖ್ ಸಾವಂತ್ ಪ್ರೀತಿ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಿವಾದಾತ್ಮಕ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್(Rakhi Sawant) ಮತ್ತೆ ಪ್ರೀತಿ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅಂದಹಾಗೆ ಪ್ರೀತಿ, ಬ್ರೇಕಪ್ ರಾಖಿ ಸಾವಂತ್ ಅವರಿಗೆ ಹೊಸದೇನಲ್ಲ. ಈಗಾಗಲೇ ಪ್ರೀತಿಯಲ್ಲಿ ಬಿದ್ದು ಮದುವೆ ಕೂಡ ಆಗಿದ್ದರು. ಆದರೆ ಪತಿಯಿಂದ ದೂರ ಆಗಿರುವ ರಾಖಿ ಇದೀಗ ಮತ್ತೋರ್ವ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿರುವ ರಾಖಿ ಸಾವಂತ್ ಬಿಗ್ ಬಾಸ್ ಸೀಸನ್ 15ರಲ್ಲಿ(Bigg Boss) ಎಲ್ಲರಿಗೂ ಇಷ್ಟವಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ರಾಖಿ ಇದೀಗ ಹೊಸ ಬಾಯ್ ಫ್ರೆಂಡ್ ಬಗ್ಗೆ ರಿವೀಲ್ ಮಾಡಿದ್ದಾರೆ.

ಅಂದಹಾಗೆ ರಾಖಿ ಸಾವಂತ್ ಜೊತೆ ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿ ಮೈಸೂರು ಮೂಲದ ಆದಿಲ್ ಖಾನ್ ದುರಾನಿ. ಆದಿಲ್ ಮುಂಬೈನಲ್ಲಿ ನೆಲೆಸಿದ್ದಾರೆ. ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ರಾಖ್ ಸಾವಂತ್ ಹೇಳಿದ್ದಾರೆ. ಈಗಾಗಲೇ ರಾಖಿ ಸಾವಂತ್, ಆದಿಲ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಆದಿಲ್ ಮತ್ತು ರಾಖ್ ಸಾವಂತ್ ಪ್ರೀತಿ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದಿಲ್ ಜೊತೆ ನಟಿ ರಾಖಿ ಸಾವಂತ್ ಫೋಟೋ ಶೇರ್ ಮಾಡಿ ಸ್ವೀಟ್ ಹಾರ್ಟ್, ನನ್ನ ಜೀವನ ಎಂದು ಬರೆದುಕೊಂಡಿದ್ದರು. ಈ ಮೂಲಕ ರಾಖಿ ತಾನು ಸಿಂಗಲ್ ಅಲ್ಲ ಸಂಬಂಧದಲ್ಲಿ ಇದ್ದೀನಿ ಎಂದು ಬಹಿರಂಗ ಪಡಿಸಿದ್ದಾರೆ.

ಕ್ಯಾಮರಾಗಳ ಮುಂದೆಯೇ ಅದಿಲ್ ಜೊತೆ ಮಾತನಾಡುತ್ತಾ ಆತನನ್ನು ಮುದ್ದು ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇನ್ನು ಮೈಸೂರಿನ ಆದಿಲ್, ರಾಖಿ ಸಾವಂತ್ ಬಗ್ಗೆ ಮಾತನಾಡಿ, 'ರಾಖಿ ಸಾವಂತ್ ತುಂಬಾ ಒಳ್ಳೆಯ ವ್ಯಕ್ತಿ ಮತ್ತು ಸರಳ ಜೀವಿ' ಎಂದು ಹೊಗಳಿದ್ದರು.

ಬುಡಕಟ್ಟು ಜನಾಂಗಕ್ಕೆ ಅವಮಾನ; ರಾಖಿ ಸಾವಂತ್ ವಿರುದ್ಧ ಎಫ್ ಐ ಆರ್

ಆದಿಲ್ ಖಾನ್ ತನ್ನ ಗೆಳತಿ ರಾಖಿ ಸಾವಂತ್‌ಗೆ ಬಿಎಂಡ್ಲ್ಯೂ ಕಾರನ್ನು ಗಿಫ್ಟ್ ಮಾಡಿ ಪ್ರಪೋಸ್ ಮಾಡಿದ್ದಾರೆ ಎಂದು ರಾಖಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ರಾಖಿ, 'ನನಗೆ ಕಾರನ್ನು ಗಿಫ್ಟ್ ಮಾಡಿದ ನನ್ನ ಆತ್ಮೀಯ ಸ್ನೇಹಿತ ಆದಿಲ್‌ಗೆ ಧನ್ಯವಾದಗಳು. ಇಂತ ದೊಡ್ಡ ಸರ್ಪ್ರೈಸ್ ಗೆ ಧನ್ಯವಾದಗಳು' ಎಂದು ಹೇಳಿದ್ದರು.

ಅಲ್ಲದೇ ಆದಿಲ್ ಬಗ್ಗೆ ರಾಖಿ ಸಾವಂತ್ ಈವೆಂಟ್ ಒಂದರಲ್ಲಿ ಹಾಡಿ ಹೊಗಳಿದ್ದರು. ಮದುವೆ ಮುರಿದು ಬಿದ್ದ ಬಳಿಕ ಖಿನ್ನತೆಯಿಂದ ಹೊರಬರಲು ಆದಿಲ್ ಸಹಾಯ ಮಾಡಿದರು ಎಂದು ಹೇಳಿದ್ದರು. ಅಲ್ಲದೆ ತನ್ನ ತಂಗಿ ಜೊತೆ ಸೇರಿ ನನ್ನನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಲು ಬಿ ಎಂ ಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದರು.

RRR Success Partyಯಲ್ಲಿ ಆಮೀರ್ ಖಾನ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರೆಟಿಗಳು

ಈ ವರ್ಷದ ಫೆಬ್ರವರಿಯಲ್ಲಿ ರಾಖಿ ಸಾವಂತ್ ತನ್ನ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. 'ಆತ್ಮೀಯ ಅಭಿಮಾನಿಗಳು ಮತ್ತು ಹಿತೈಶಿಗಳೇ, ನಾನು ಮತ್ತು ರಿತೇಶ್ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಬಹಳಷ್ಟು ಸಂಭವಿಸಿದೆ. ನಾವಿಬ್ಬರು ನಮ್ಮ ಜೀವನನ್ನು ಪ್ರತ್ಯೇಕವಾಗಿ ಆನಂದಿಸುತ್ತೇವೆ' ಎಂದು ಪೋಸ್ಟ್ ಶೇರ್ ಮಾಡುವ ಮೂಲ ವಿಚ್ಛೇದನದ ವಿಚಾರವನ್ನು ಅಧಿಕೃತಗೊಳಿಸಿದ್ದರು.