RRR Success Partyಯಲ್ಲಿ ಆಮೀರ್ ಖಾನ್ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು
ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಅವರ ಸೂಪರ್ ಹಿಟ್ ಚಿತ್ರ RRR ಬುಧವಾರ 1000 ಕೋಟಿ ಕ್ಲಬ್ ಸೇರಿದೆ. ಈ ಸಂದರ್ಭದಲ್ಲಿ, ನಿರ್ಮಾಪಕರು ಚಿತ್ರದ ಸಕ್ಸಸ್ ಪಾರ್ಟಿ (RRR Success Party) ನಡೆಸಿದರು, ಇದರಲ್ಲಿ ಅನೇಕ ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ರಾಖಿ ಸಾವಂತ್ (Rakhi Sawanth) ತುಂಬಾ ಬೋಲ್ಡ್ ರೆಡ್ ಡ್ರೆಸ್ಸಿನಲ್ಲಿ ಪಾರ್ಟಿಗೆ ಆಗಮಿಸಿದ್ದರು. ರಾಖಿ ಸಾವಂತ್, ಆಮೀರ್ ಖಾನ್ ಮತ್ತು ಇತರ ಸೆಲೆಬ್ರಿಟಿಗಳೊಂದಿಗೆ ಪೋಸ್ ನೀಡಿದ್ದಾರೆ. ಆಮೀರ್ ಖಾನ್, ಕರಣ್ ಜೋಹರ್, ತುಷಾರ್ ಕಪೂರ್, ಜಾವೇದ್ ಅಖ್ತರ್, ಸತೀಶ್ ಕೌಶಿಕ್, ಅಶುತೋಷ್ ಗೋವಾರಿಕರ್ ಸೇರಿದಂತೆ ಅನೇಕ ಗಣ್ಯರು ಯಶಸ್ಸಿನ ಪಾರ್ಟಿಯಲ್ಲಿ ಕಾಣಿಸಿಕೊಂಡರು.
RRR ನ ಯಶಸ್ಸಿನ ಪಾರ್ಟಿಯಲ್ಲಿ ರಾಖಿ ಸಾವಂತ್ (Rakhi Sawanth) ಕೆಂಪು ಬಣ್ಣದ ಡ್ರೆಸ್‌ನಲ್ಲಿ ಪೋಸ್ ನೀಡುತ್ತಿದ್ದಾರೆ, ಈ ಸಮಯದಲ್ಲಿ ರಾಖಿ ತನ್ನ ರಿವಾಲ್ವರ್ ಟ್ಯಾಟೂವನ್ನು ತೋರಿಸಲು ಮರೆಯಲಿಲ್ಲ.
ಪಾರ್ಟಿಗೆ ಆಗಮಿಸಿದ ಅಮೀರ್ ಖಾನ್ (Aamir Khan) ಜೊತೆ ರಾಖಿ ಸಾವಂತ್ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಅಮೀರ್ ಖಾನ್ ಮೆಹಂದಿ ಬಣ್ಣದ ಪ್ಯಾಂಟ್ ಜೊತೆ ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದರು.
ಪಾರ್ಟಿಯಲ್ಲಿ ರಾಖಿ ಸಾವಂತ್ ಕೂದಲಿನ ಮೇಲೆ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಅವಳು ಗೋಲ್ಡನ್ ಕಲರ್‌ನಿಂದ ಹೆಣೆಯಲ್ಪಟ್ಟ ಕೇಶ ವಿನ್ಯಾಸ (Hair Style) ಮಾಡಿಕೊಂಡಿದ್ದರು. ಇದರೊಂದಿಗೆ ಮ್ಯಾಚಿಂಗ್ ಜ್ಯುವೆಲ್ಲರಿಗಳಲ್ಲಿ ರಾಖಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಕಾಶ್ಮೀರ ಫೈಲ್ಸ್ (Kashmir Files) ನಟ ದರ್ಶನ್ ಸಿಂಗ್ (Darshan Singh) ಕೂಡ RRR ನ ಸಕ್ಸಸ್ ಪಾರ್ಟಿಯಲ್ಲಿದ್ದರು. ಈ ವೇಳೆ ರಾಖಿ ಸಾವಂತ್ ಅವರು ದರ್ಶನ್ ಸಿಂಗ್ ಮತ್ತು ನಿರ್ಮಾಪಕ ಜಯಂತಿಲಾಲ್ ಗಡಾ ಅವರೊಂದಿಗೆ ಪೋಸ್ ನೀಡಿದರು.
ಪಾರ್ಟಿ ವೇಳೆ ಹುಮಾ ಖುರೇಷಿ, ತುಷಾರ್ ಕಪೂರ್ ಹೀಗೆ ಕಾಣಿಸಿಕೊಂಡರು. ಆದರೆ, ಈ ಸಕ್ಸಸ್ ಪಾರ್ಟಿಯಲ್ಲಿ ಅಜಯ್ ದೇವಗನ್ (Ajay Devgan) ಮತ್ತು ಆಲಿಯಾ ಭಟ್ (Alia Bhatt) ಕಾಣಿಸಿಕೊಂಡಿರಲಿಲ್ಲ.
ಚಲನಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಅವರು ಪಾರ್ಟಿಯ ಸಮಯದಲ್ಲಿ ರಾಮಚರಣ್ ತೇಜಾ (Ramcharan Teja) ಮತ್ತು ಜೂನಿಯರ್ ಎನ್‌ಟಿಆರ್ (Jr NTR) ಅವರೊಂದಿಗೆ ಪೋಸ್ ನೀಡುತ್ತಿದ್ದಾರೆ. ಈ ಪಾರ್ಟಿಯಲ್ಲಿ ರಾಜಮೌಳಿ ಪತ್ನಿ ಕೂಡ ಹಾಜರಿದ್ದರು.
ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರನ್ನು ಭೇಟಿ ಮಾಡಿದ ಅಮೀರ್ ಖಾನ್. 500 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಇದುವರೆಗೆ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ
RRR ನ ಸಕ್ಸಸ್ ಪಾರ್ಟಿಯಲ್ಲಿ ತುಷಾರ್ ಕಪೂರ್ ಜೊತೆ ತನುಶ್ರೀ ದತ್ತಾ. ತನುಶ್ರೀ ದತ್ತಾ ಬಹಳ ದಿನಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅದೇ ಸಮಯದಲ್ಲಿ, ತುಷಾರ್ ಅಪರೂಪವಾಗಿ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
RRR ನ ಸಕ್ಸಸ್ ಪಾರ್ಟಿಯಲ್ಲಿ ಸತೀಶ್ ಕೌಶಿಕ್, ಜಾವೇದ್ ಅಖ್ತರ್ ಮತ್ತು ಅಶುತೋಷ್ ಗೋವಾರಿಕರ್. ಅಶುತೋಷ್ ಗೋವಾರಿಕರ್ ಅವರು ಲಗಾನ್ (Lagaan) ನಂತಹ ಸೂಪರ್ ಹಿಟ್ ಸಿನಿಮಾ ಮಾಡಿದ್ದಾರೆ.
ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜಾ ಪಾರ್ಟಿಯ ಸಮಯದಲ್ಲಿ ಒಟ್ಟಿಗೆ ಪೋಸ್ ನೀಡಿದ್ದಾರೆ. ಈ ವೇಳೆ ಬಾಲಿವುಡ್ ಹಿರಿಯ ನಟ ಜಿತೇಂದ್ರ (Jitendra) ಕೂಡ ಕಾಣಿಸಿಕೊಂಡರು.
ಕರಣ್ ಜೋಹರ್ ಎಸ್ ಎಸ್ ರಾಜಮೌಳಿ ಜೊತೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದೆಡೆ ಹುಮಾ ಖುರೇಷಿ ಕೆಂಪು ಬಣ್ಣದ ಡ್ರೆಸ್‌ನಲ್ಲಿ. ಹುಮಾ ಮತ್ತು ರಾಖಿ ಸಾವಂತ್ ಇಬ್ಬರೂ ಕೆಂಪು ಡ್ರೆಸ್‌ನಲ್ಲಿ ಬಂದಿದ್ದಾರೆ.