ವಿವಾದಾತ್ಮಕ ನಟಿ ರಾಖಿ ಸಾವಂತ್(Rakhi Sawant) ಮತ್ತೆ ಸುದ್ದಿಯಲ್ಲಿದ್ದಾರೆ. ಒಂದಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುತ್ತಲೇ ಇರುವ ರಾಖಿ ಸಾವಂತ್ ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಶ್ಲೀಲ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ರಾಖಿ ಸಾವಂತ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ವಿವಾದಾತ್ಮಕ ನಟಿ ರಾಖಿ ಸಾವಂತ್(Rakhi Sawant) ಮತ್ತೆ ಸುದ್ದಿಯಲ್ಲಿದ್ದಾರೆ. ಒಂದಲ್ಲೊಂದು ವಿಚಾರಗಳ ಮೂಲಕ ಸದ್ದು ಮಾಡುತ್ತಲೇ ಇರುವ ರಾಖಿ ಸಾವಂತ್ ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಶ್ಲೀಲ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ರಾಖಿ ಸಾವಂತ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ(FIR registered against Rakhi Sawant). ಅಂದಹಾಗೆ ರಾಖಿ ಸಾವಂತ್ ವಿಚಿತ್ರವಾಗಿ ಕಾಣಿಸಿಕೊಳ್ಳುವುದು ಇದೇನು ಮೊದಲಲ್ಲ. ಆಗಾಗ ಇಂತ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ವಿಚಿತ್ರವಾಗಿ ಕಾಣಿಸಿಕೊಂಡಿದ್ದಲ್ಲದೆ ಬುಡಕಟ್ಟು ಜನಾಂಗದವಳು ಎಂದು ಹೇಳಿ ವಿವಾದ ಮೈ ಮೇಲೆ ಎಳೆದು ಕೊಂಡಿದ್ದಾರೆ.
ರಾಖಿ ಸಾವಂತ್ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಶ್ಲೀಲ ಬಟ್ಟೆ ಧರಿಸಿ ಬುಡಕಟ್ಟು ಜನಾಂಗದ ಹೆಸರು ಹೇಳುವ ಮೂಲಕ ಬುಡಕಟ್ಟು ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೆ ರಾಖಿ ಸಾವಂತ್ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇಲ್ಲವಾದರೆ ರಾಖಿ ಸಾವಂತ್ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
Rakhi Sawanth Life: ಹೀರೋಯಿನ್ ಆಗಲು ಮನೆ ಬಿಟ್ಟು ಬಂದು, ಐಟಂ ಗರ್ಲ್ ಆದ ನಟಿ!
ಕೇಂದ್ರೀಯ ಸರ್ನಾ ಸಮಿತಿ ಪ್ರಕಾರ ನಟಿ ಬುಡಕಟ್ಟು ಜನಾಂಗದವರನ್ನು ಅವಮಾನ ಮಾಡಿದ್ದಾರೆ. ಇದರ ಪರಿಣಾಮ ಎದುರಿಸಬೇಕು. ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಅಂದಹಾಗೆ ವಿಡಿಯೋದಲ್ಲಿ ರಾಖಿ ಸಾವಂತ್, 'ನನ್ನ ಲುಕ್ ನೋಡಿದ್ದೀರಾ. ಇದು ಸಂಪೂರ್ಣ ಟ್ರೈಬಲ್ ಲುಕ್. ಆದಿವಾಸಿ ಲುಕ್' ಎಂದು ಹೇಳಿದ್ದಾರೆ.
RRR Success Partyಯಲ್ಲಿ ಆಮೀರ್ ಖಾನ್ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ರಾಖಿ ಸಾವಂತ್ ನನಗೆ ಏನು ಅನಿಸುತ್ತೊ ಅದನ್ನ ಸಂಕೋಚವಿಲ್ಲದೆ ಹೇಳುತ್ತೇನೆ ಎಂದು ಹೇಳಿದ್ದರು. ನನ್ನ ಮನಸ್ಸಿಗೆ ಅಧವಾ ನನ್ನ ಹೃದಯಕ್ಕೆ ಏನ್ ಬರುತ್ತದೊ ಅದನ್ನು ನಾನು ನೇರವಾಗಿ ಹೇಳುತ್ತೇನೆ. ನನ್ನ ಹೃದಯ ಮತ್ತು ನನ್ನ ಬಾಯಲ್ಲಿ ಫಿಲ್ಟರ್ ಇಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಶೇರ್ ಮಾಡಿದ ಬಳಿಕ ವಿವಾದ ಜೋರಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದಾರೆ.
