ನಟಿ ರಾಖಿ ಸಾವಂತ್(Rakhi Sawant) ಒಂದಲ್ಲೊಂದು ವಿಚಾರದದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಮೈಸೂರು ಮೂಲದ ಬಾಯ್‌ಫ್ರೆಂಡ್ ವಿಚಾರವಾಗಿ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್ ಇದೀಗ ಮಾಜಿ ಪತಿಯ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ನಟಿ ರಾಖಿ ಸಾವಂತ್(Rakhi Sawant) ಒಂದಲ್ಲೊಂದು ವಿಚಾರದದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಮೈಸೂರು ಮೂಲದ ಬಾಯ್‌ಫ್ರೆಂಡ್ ವಿಚಾರವಾಗಿ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್ ಇದೀಗ ಮಾಜಿ ಪತಿಯ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಮಾಜಿ ಪತಿಯಿಂದ ದೂರ ಆದ ಬಳಿಕ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈ ನಡುವೆ ರಾಖಿ ಮಾಜಿ ಪತಿ ರಿತೇಶ್ ತನ್ನ ಸಾಮಾಜಿಕ ಜಾಲತಾಣ ಖಾತೆಯನ್ನು ಹ್ಯಾಕ್ ಮಾಡಿ ತನ್ನನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಮುಂಬೈನ ಓಶಿವಾರ್ ಸ್ಟೇಷನ್‌ನಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ರಾಖಿ ಸಾವಂತ್ ತನ್ನ ಮಾಜಿ ಪತಿ ಸಾಮಾಜಿಕ ಜಾಲತಾಣ ಹ್ಯಾಕ್ ಮಾಡಿದ್ದಾರೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಖಿ ಸಾವಂತ್, ರಿತೇಶ್ ತನ್ನ ಹೊಸ ಬಾಯ್ ಫ್ರೆಂಡ್ ಆದಿಲ್ ಖಾನ್ ಬಗ್ಗೆ ಅಸೂಯೆ ಹೊಂದಿದ್ದಾರೆ. ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದಿದ್ದಾರೆ. ರಿತೇಶ್ ಜೊತೆ ಇದ್ದಾಗ ಸೋಶಿಯಲ್ ಮೀಡಿಯಾವನ್ನು ಅವರೇ ಹ್ಯಾಂಡಲ್ ಮಾಡುತ್ತಿದ್ದರು. ಬೇರೆ ಆದ ಬಳಿಕ ಪಾಸ್‌ವರ್ಡ್ ಬದಲಾಯಿಸಿಲ್ಲ ಎಂದು ರಾಖಿ ಹೇಳಿದ್ದಾರೆ.
'ನನ್ನ ಮಾಜಿ ಪತಿ ರಿತೇಶ್ ತುಂಬಾ ತೊಂದರೆ ಕೊಡುತ್ತಿದ್ದಾನೆ, ಹಾಗಾಗಿ ಪೊಲೀಸ್ ಸ್ಟೇಷನ್ ಗೆ ಬಂದಿದ್ದೀನಿ. ಅವನು ನನ್ನ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾನೆ. ನನ್ನ ಎಲ್ಲಾ ಖಾತೆಯಲ್ಲೂ ಅವನ ಹೆಸರು ಮತ್ತು ನಂಬರ್ ಹಾಕಿದ್ದಾನೆ. ಅವನು ತನ್ನ ಸೋಶಿಯಲ್ ಮೀಡಿಯಾ ಖಾತೆಯನ್ನು ನಿಭಾಯಿಸುತ್ತಿದ್ದನು. ಆದರೆ ಬೇರೆಯಾದ ಬಳಿಕ ಪಾಸ್‌ವರ್ಡ್ ಬದಲಾಯಿಸಿಲ್ಲ. ಅವನು ನನ್ನ ಮೇಲೆ ಯಾವುದೇ ಸೇಡು ತೀರಿಸಿಕೊಳ್ಳುವುದಿಲ್ಲ ಅಂತ ಅಂದುಕೊಂಡಿದ್ದೆ. ಆದರೆ ಅವನು ಸೇಡು ತೀರಿಸಿಕೊಳ್ಳುತ್ತಿದ್ದಾನೆ, ನನ್ನನ್ನು ನಾಶ ಪಡಿಸುವುದಾಗಿ ಹೇಳಿದ್ದಾರೆ. ನಾವು ಇನ್ಸ್ಟಾಗ್ರಾಮ್ ಖಾತೆಯಿಂದ ಹಣ ಸಂಪಾದಿಸುತ್ತೇವೆ. ಆದರೆ ಅದನ್ನು ಹ್ಯಾಕ್ ಮಾಡಿದ್ದಾರೆ' ಎಂದು ಹೇಳಿದ್ದಾರೆ.
BMW ಬಳಿಕ ಮನೆ ಗಿಫ್ಟ್; ರಾಖಿ ಸಾವಂತ್‌ಗೆ ಭರ್ಜರಿ ಉಡುಗೊರೆ ಕೊಟ್ಟ ಮೈಸೂರಿನ ಬಾಯ್ ಫ್ರೆಂಡ್
ಇನ್ನು ಈ ಬಗ್ಗೆ ರಾಖಿ ಸಾವಂತ್ ಬಾಯ್ ಫ್ರೆಂಡ್ ಆದಿಲ್ ಮಾಡನಾಡಿ, 'ಎಲ್ಲಾ ಪಾಸ್‌ವರ್ಡ್‌ನ ಒಟಿಟಿ ಆತನಿಗೆ ಹೋಗುತ್ತಿದೆ. ರಾಖಿ ಸಾವಂತ್ ತನ್ನ ಗೂಗಲ್ ಪೇ ಮತ್ತು ಫೋನ್ ಪೇ ಕೂಡ ಬಳಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದರು. ನಂತರ ಮಾತು ಮುಂದುವರೆಸಿದ ರಾಖಿ ಸಾವಂತ್, 'ನನ್ನ ಖಾತೆ ಹ್ಯಾಕ್ ಮಾಡಿ ಅದರಲ್ಲಿ ಕಲರ್ಸ್ ವಾಹಿನಿ ಬಗ್ಗೆ ಅಸಹ್ಯ ಬರಹ ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಅದು ನಾನು ಬರೆದಿದ್ದು ಅಂತ ಅಂದುಕೊಳ್ಳಲಿ ಎಂದು ಅವನು ಯೋಚಿಸಿದ್ದಾನೆ. ನನ್ನನ್ನು ವಾಹಿನಿಯಿಂದ ಬ್ಯಾನ್ ಮಾಡಬೇಕು ಮತ್ತು ಸಲ್ಮಾನ್ ಖಾನ್ ಭಾಯ್ ಜೊತೆಗಿನ ಸಂಬಂಧ ಹಾಳುಮಾಡಬೇಕೆನ್ನುವುದು ಆತನ ಉದ್ದೇಶವಾಗಿದೆ' ಎಂದ ರಾಖಿ ಸಾವಂತ್ ಹೇಳಿದ್ದಾರೆ.
ಮೈಸೂರಿನ ಆದಿಲ್ ಪ್ರೀತಿಯಲ್ಲಿ ರಾಖಿ ಸಾವಂತ್; ನಟಿಯ ಬಾಯ್‌ಫ್ರೆಂಡ್ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
ರಾಖಿ ಸಾವಂತ್ ಸದ್ಯ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಪ್ರೀತಿ ಯಲ್ಲಿದ್ದಾರೆ. ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದ ರಾಖಿ, ಆದಿಲ್ ಬಿಎಂಡ್ಲ್ಯೂ ಕಾರನ್ನು ಗಿಫ್ಟ್ ಮಾಡಿ ಪ್ರಪೋಸ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದರು. 'ನನಗೆ ಕಾರನ್ನು ಗಿಫ್ಟ್ ಮಾಡಿದ ನನ್ನ ಆತ್ಮೀಯ ಸ್ನೇಹಿತ ಆದಿಲ್‌ಗೆ ಧನ್ಯವಾದಗಳು. ಇಂತ ದೊಡ್ಡ ಸರ್ಪ್ರೈಸ್ ಗೆ ಧನ್ಯವಾದಗಳು' ಎಂದು ಹೇಳಿದ್ದರು. ಕಾರು ಗಿಫ್ಟ್ ಮಾಡಿದ ಬಳಿಕ ಆದಿಲ್ ಮತ್ತೊಂದು ದುಬಾರಿ ಉಡುಗೊರೆ ನೀಡಿದ್ದರು. ಮನೆ ಗಿಫ್ಟ್ ಮಾಡಿದ್ದರು ರಾಖಿ ಬಹಿರಂಗ ಪಡಿಸಿದ್ದರು. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.
