ಆದಿಲ್ ತನ್ನ ಪ್ರೀಯಸಿ ರಾಖಿ ಸಾವಂತ್‌ಗೆ ಬಿಎಂಡ್ಲ್ಯೂ ಕಾರನ್ನು ಗಿಫ್ಟ್ ಮಾಡಿ ಪ್ರಪೋಸ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದರು. ಇದೀಗ ಆದಿಲ್ ಮತ್ತೊಂದು ದುಬಾರಿ ಉಡುಗೊರೆ ನೀಡಿದ್ದಾರೆ. ಆದಿಲ್ ಪ್ರೇಯಸಿ ರಾಖಿ ಸಾವಂತ್‌ಗೆ ಮನೆ ಗಿಫ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದಿಲ್ ನನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.
ವಿವಾದಾತ್ಮಕ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್(Rakhi Sawant) ಇದೀಗ ಪ್ರೀತಿ, ಬಾಯ್ ಫ್ರೆಂಡ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅಂದಹಾಗೆ ಪ್ರೀತಿ, ಬ್ರೇಕಪ್ ರಾಖಿ ಸಾವಂತ್ ಅವರಿಗೆ ಹೊಸದೇನಲ್ಲ. ಈಗಾಗಲೇ ಪ್ರೀತಿಯಲ್ಲಿ ಬಿದ್ದು ಮದುವೆ ಕೂಡ ಆಗಿದ್ದರು. ಆದರೆ ಪತಿಯಿಂದ ದೂರ ಆಗಿರುವ ರಾಖಿ ಇದೀಗ ಮತ್ತೋರ್ವ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ರಾಖಿ ಇತ್ತೀಚಿಗಷ್ಟೆ ಹೊಸ ಬಾಯ್ ಫ್ರೆಂಡ್ ಬಗ್ಗೆ ರಿವೀಲ್ ಮಾಡಿದ್ದರು.
ಅಂದಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಜೊತೆ ಪ್ರೀತಿಯಲ್ಲಿದ್ದಾರೆ. ಇಬ್ಬರ ಡೇಟಿಂಗ್ ವಿಚಾರಗಳು ಸದಾ ಸುದ್ದಿಯಾಗುತ್ತಿದೆ. ಮೈಸೂರು ಮೂಲದ ಆದಿಲ್ ಮುಂಬೈನಲ್ಲಿ ನೆಲೆಸಿದ್ದಾರೆ. ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ರಾಖ್ ಸಾವಂತ್ ಈಗಾಗಲೇ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಮೂಲಕ ರಾಖಿ ತಾನು ಸಿಂಗಲ್ ಅಲ್ಲ ಸಂಬಂಧದಲ್ಲಿ ಇದ್ದೀನಿ ಎಂದು ಬಹಿರಂಗ ಪಡಿಸಿದ್ದಾರೆ.
ಆದಿಲ್ ತನ್ನ ಪ್ರೀಯಸಿ ರಾಖಿ ಸಾವಂತ್‌ಗೆ ಬಿಎಂಡ್ಲ್ಯೂ ಕಾರನ್ನು ಗಿಫ್ಟ್ ಮಾಡಿ ಪ್ರಪೋಸ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ರಾಖಿ, 'ನನಗೆ ಕಾರನ್ನು ಗಿಫ್ಟ್ ಮಾಡಿದ ನನ್ನ ಆತ್ಮೀಯ ಸ್ನೇಹಿತ ಆದಿಲ್‌ಗೆ ಧನ್ಯವಾದಗಳು. ಇಂತ ದೊಡ್ಡ ಸರ್ಪ್ರೈಸ್ ಗೆ ಧನ್ಯವಾದಗಳು' ಎಂದು ಹೇಳಿದ್ದರು. ಇದೀಗ ಆದಿಲ್ ಮತ್ತೊಂದು ದುಬಾರಿ ಉಡುಗೊರೆ ನೀಡಿದ್ದಾರೆ.
ಮೈಸೂರಿನ ಆದಿಲ್ ಪ್ರೀತಿಯಲ್ಲಿ ರಾಖಿ ಸಾವಂತ್; ನಟಿಯ ಬಾಯ್‌ಫ್ರೆಂಡ್ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
ಆದಿಲ್ ಪ್ರೇಯಸಿ ರಾಖಿ ಸಾವಂತ್‌ಗೆ ಮನೆ ಗಿಫ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದಿಲ್ ನನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ಈ ಮೊದಲು ನನಗೆ ಬಿಎಂಡ್ಲ್ಯೂ ಉಡುಗೊರೆ ನೀಡಿದ್ದರು. ಅವನ ಪ್ರೀತಿಯೇ ನನ್ನ ಸಂಪತ್ತು. ಅವನ ಪ್ರೀತಿ ನಿಜ. ಅವನು ನಿಷ್ಠಾವಂತ ಎಂದು ಹಾಡಿ ಹೊಗಳಿದ್ದಾರೆ.
ಇನ್ನು ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್ ಬಗ್ಗೆ ಮಾತನಾಡಿ, ಹೆಚ್ಚು ಏನು ಹೇಳುವುದಿಲ್ಲ. ಕಡಿಮೆ ಗ್ಲಾಮರಸ್ ಮತ್ತು ಹೆಚ್ಚು ಕವರ್ ಆಗಿರುವ ಡ್ರೆಸ್ ಹಾಕಬೇಕು ಎಂದು ಭಾವಿಸಬೇಕು ಎಂದು ಹೇಳುತ್ತೀನಿ ಎಂದು ಹೇಳಿದ್ದಾರೆ. ರಾಖಿ ಸಾವಂತ್‌ಗಿಂತ 6 ವರ್ಷದ ಚಿಕ್ಕವರಾದ ಆದಿಲ್ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.
ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು; ಚೇತನಾ ಸಾವಿಗೆ ಕಾರಣ ವೈದ್ಯನ ವಿರುದ್ಧ ರಾಖಿ ಗರಂ
ಈ ಮೊದಲು ಸಹ ರಾಖಿ ಸಾವಂತ್ ಆದಿಲ್ ಅವರನ್ನು ಹಾಡಿಹೊಗಳಿದ್ದರು. ರಾಖಿ ಸಾವಂತ್ ಈವೆಂಟ್ ಒಂದರಲ್ಲಿ ಮಾತನಾಡಿ, ಮದುವೆ ಮುರಿದು ಬಿದ್ದ ಬಳಿಕ ಖಿನ್ನತೆಯಿಂದ ಹೊರಬರಲು ಆದಿಲ್ ಸಹಾಯ ಮಾಡಿದರು ಎಂದು ಹೇಳಿದ್ದರು. ಅಲ್ಲದೆ ತನ್ನ ತಂಗಿ ಜೊತೆ ಸೇರಿ ನನ್ನನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಲು ಬಿ ಎಂ ಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದರು ಎಂದಿದ್ದರು.
