Asianet Suvarna News Asianet Suvarna News

Dunki: ಶಾರುಖ್ 'ಡಂಕಿ' ಚಿತ್ರದ ಒಟಿಟಿ ರೈಟ್ಸ್‌ಗೆ ಭಾರಿ ಬೇಡಿಕೆ: ಶೂಟಿಂಗ್ ಮುಗಿಯೋ ಮೊದಲೇ ದೊಡ್ಡ ಮೊತ್ತಕ್ಕೆ ಸೇಲ್

ಶಾರುಖ್ ಖಾನ್ ಮತ್ತು ರಾಜ್ ಕುಮಾರ್ ಹಿರಾನಿ ಕಾಂಬಿನೇಷನ್‌ನಲ್ಲಿ ಬರ್ತಿರುವ ಡಂಕಿ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಒಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. 

Rajkumar Hirani and Shah Rukh Khan's Dunki film digital rights sold for RS 155 crore sgk
Author
First Published Jul 9, 2023, 11:04 AM IST | Last Updated Jul 9, 2023, 11:04 AM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪಠಾಣ್ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಮುಂದಿನ ಸಿನಿಮಾಗಳ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಶಾರುಖ್​ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರು ಕಾಯುತ್ತಿದ್ದಾರೆ. ಆದರೆ ಶಾರುಖ್ ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಶಾರುಖ್ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ‘ಡಂಕಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಡಂಕಿ ಸಿನಿಮಾದ ಬಗ್ಗೆ ದೊಡ್ಡ ಸುದ್ದಿ ವೈರಲ್  ಆಗಿದೆ. 

ಡಂಕಿ ಸಿನಿಮಾದ ಶೂಟಿಂಗ್ ಇನ್ನೂ ಮುಕ್ತಾಯವಾಗಿಲ್ಲ. ಆಗಲೇ ಸಿನಿಮಾದ ಒಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು ಡಂಕಿ ಸಿನಿಮಾದ ಒಟಿಟಿ ಹಕ್ಕುಗಳಿಗೆ ಭಾರಿ ಬೇಡಿಕೆ ಇದ್ದು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ ಚಿತ್ರದ ಒಟಿಟಿ ಹಕ್ಕು ಬರೋಬ್ಬರಿ 155 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ. 

ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಹೆಚ್ಚಿದೆ. ಉತ್ತಮ ಸಿನಿಮಾಗಳನ್ನು, ಸ್ಟಾರ್ ಕಲಾವಿದರ ಸಿನಿಮಾಗಳನ್ನು ಖರೀದಿಸಿ ಪ್ರೇಕ್ಷಕರಿಗೆ ನೀಡಲು ‘ಜಿಯೋ ಸಿನಿಮಾ’ ಸಂಸ್ಥೆ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಶಾರುಖ್​ ಖಾನ್​ ನಟನೆಯ ‘ಡಂಕಿ’ ಚಿತ್ರದ ಒಟಿಟಿ ಹಕ್ಕುಗಳು ಈ ಸಂಸ್ಥೆಯ ಪಾಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. 155 ಕೋಟಿ ರೂಪಾಯಿ ನೀಡಿ ಒಟಿಟಿ ಪ್ರಸಾರ ಹಕ್ಕುಗಳನ್ನು ಖರೀದಿಸಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸದ್ಯಕ್ಕೆ ಇದು ಅಂತೆ-ಕಂತೆಗಳ ಹಂತದಲ್ಲೇ ಇದೆ.

ಕತ್ರಿನಾ ಕೈಫ್ ಜೊತೆ ಬಲವಂತದ ಕಿಸ್ ಅನುಭವ ಹೇಳಿಕೊಂಡ ನಟ ಶಾರುಖ್ ಖಾನ್​​!

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ವಿಶೇಷ ಆಸಕ್ತಿ. ಕ್ಲಾಸ್​ ಸಿನಿಮಾಗಳನ್ನು ಮಾಡಿ ದೊಡ್ಡ ಖ್ಯಾತಿ ಗಳಿಸಿದ ನಿರ್ದೇಶಕ ರಾಜ್ ಕುಮಾರ್ ಹಿರಾನಿ. ‘ಮುನ್ನಾಭಾಯ್​ ಎಂಬಿಬಿಎಸ್​​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಆರ್ಯನ್​ ಡ್ರಗ್ಸ್​ ಕೇಸ್​ಗೆ ಟ್ವಿಸ್ಟ್​: 25 ಕೋಟಿ ಲಂಚ ಕೇಸಲ್ಲಿ ಸಿಲುಕಿದ ಶಾರುಖ್​ಗೆ ಬಂಧನದ ಭೀತಿ?

ಅಂದಹಾಗೆ ಡಂಕಿ ಸಿನಿಮಾ ಈ ವರ್ಷ ಕೊನೆಯಲ್ಲಿ ಅಂದರೆ ಡಿಸೆಂಬರ್​ 22ರಂದು ರಿಲೀಸ್ ಆಗುತ್ತಿದೆ. ಆದರೆ ಒಟಿಟಿ ಡೀಲ್​ ಈಗಲೇ ಮುಗಿದಿದೆ. ಶೂಟಿಂಗ್ ಮುಗಿಯುವ ಮೊದಲೇ ಒಟಿಟಿ ರೈಟ್ಸ್ ಮರಾಟ ವಾಗಿರುವುದು ನಿರ್ಮಾಪಕರಿಗೆ ಭರ್ಜರಿ ಲಾಭ ತಂದು ಕೊಟ್ಟಿದೆ. ಈ ಸಿನಿಮಾ ಜೊತೆಗೆ ಶಾರುಖ್ ನಿರ್ದೇಶಕ ಅಟ್ಲಿ ಜೊತೆ ‘ಜವಾನ್​’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ‘ಜವಾನ್​’ ಕೂಡ ಭರ್ಜರಿ ಕಮಾಯಿ ಮಾಡುವ ಸೂಚನೆ ಸಿಕ್ಕಿದೆ. ಒಟ್ನಲ್ಲಿ ಈ ವರ್ಷದ ಕೊನೆಯಲ್ಲಿ ಶಾರುಖ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

Latest Videos
Follow Us:
Download App:
  • android
  • ios