ಆರ್ಯನ್ ಡ್ರಗ್ಸ್ ಕೇಸ್ಗೆ ಟ್ವಿಸ್ಟ್: 25 ಕೋಟಿ ಲಂಚ ಕೇಸಲ್ಲಿ ಸಿಲುಕಿದ ಶಾರುಖ್ಗೆ ಬಂಧನದ ಭೀತಿ?
2021ರಲ್ಲಿ ಭಾರಿ ಸದ್ದು ಮಾಡಿದ್ದ ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, ಶಾರುಖ್ ಲಂಚ ಕೊಟ್ಟ ಆರೋಪ ಎದುರಿಸುತ್ತಿದ್ದಾರೆ. ಏನೀ ಹೊಸ ಬೆಳವಣಿಗೆ?
2021ರಲ್ಲಿ ಶಾರುಖ್ ಖಾನ್ (Shah rukh Khan) ಪುತ್ರ ಆರ್ಯನ್ ಖಾನ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳ ಡ್ರಗ್ಸ್ ಕೇಸ್ ಭಾರಿ ಸುದ್ದಿ ಮಾಡಿದ್ದು ನೆನಪಿರಬಹುದು. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ Cruise Drugs Case) ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ (Aryan Khan) ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಈ ಘಟನೆ ನಡೆದು ಒಂದೂವರೆ ವರ್ಷಗಳಾದರೂ ಇದರ ಕುರಿತು ಇನ್ನಷ್ಟು ಇಂಟರೆಸ್ಟಿಂಗ್ ಘಟನೆಗಳು ಹೊರಬರುತ್ತಲೇ ಇದೆ. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್ನಲ್ಲಿ ಒಳಗೇ ಇದ್ದರೆ, ಆರ್ಯನ್ ಖಾನ್ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದು, ಆರ್ಯನ್ ಖಾನ್ ಹಾಗೂ ಶಾರುಖ್ ಕುಟುಂಬ ಸದ್ಯ ನೆಮ್ಮದಿಯಿಂದ ಇದ್ದರೂ ಈ ಕೇಸ್ ಮಾತ್ರ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಲೇ ಇದೆ.
ಇದೀಗ ಪ್ರಕರಣ ಇನ್ನಷ್ಟು ತಿರುವು ಪಡೆದಿದ್ದು, ನಟ ಶಾರುಖ್ ಖಾನ್ ಬಂಧನದ ಭೀತಿ ಎದುರಿಸುವಂತಾಗಿದೆ! ಹೌದು. ಮಗನನ್ನು ರಕ್ಷಿಸಲು ಮುಂಬೈನ ನಾರ್ಕೋಟಿಕ್ಸ್ ನಿಯಂತ್ರಣ ಇಲಾಖೆಯ ಮಾಜಿ ವಿಭಾಗೀಯ ನಿರ್ದೇಶಕ ಸಮೀರ್ ವಾಖಂಡೆ ಅವರಿಗೆ ಶಾರುಖ್ ಖಾನ್ 25 ಕೋಟಿ ರೂಪಾಯಿ ಲಂಚ ಕೊಟ್ಟಿದ್ದರು ಎನ್ನುವ ಸುದ್ದಿ ಆಗ ಸಕತ್ ತಲ್ಲಣ ಸೃಷ್ಟಿಸಿತ್ತು. ಈಗ ಮತ್ತೆ ಅದೇ ಸುದ್ದಿ ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಈ ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರ ಮನವಿಯೊಂದನ್ನು ಕೋರ್ಟ್ ಮಾನ್ಯ ಮಾಡಿದ್ದು, ಕಿಂಗ್ ಖಾನ್‌ಗೆ ಭಾರಿ ತೊಂದರೆ ಒದಗಿಬಂದಿದೆ. ಶಾರುಖ್ ಅವರು ತಮ್ಮ ಪುತ್ರ ಆರ್ಯನ್ ಖಾನ್ನನ್ನು ಬಂಧಿಸಬಾರದು ಎಂದು ತಮಗೆ 25 ಕೋಟಿ ರೂಪಾಯಿ ಲಂಚ ನೀಡಿರುವುದಾಗಿ ಸಮೀರ್ ವಾಂಖೆಡೆ ತಿಳಿಸಿದ್ದು, ಈ ಪ್ರಕರಣದಲ್ಲಿ ಶಾರುಖ್ ಅವರನ್ನು ಎಂದು ಹೆಸರಿಸಲು ತಮಗೆ ಅನುಮತಿ ನೀಡುವಂತೆ ಅವರು ಕೋರ್ಟ್ ಅನ್ನು ಕೋರಿದ್ದು, ಇದಕ್ಕೆ ಕೋರ್ಟ್ ಅನುಮತಿ ನೀಡಿದೆ.
ಆರ್ಯನ್ ಖಾನ್ ಜೈಲಿನ ಮಿಸ್ಟ್ರಿಗೆ ಭಾರಿ ಟ್ವಿಸ್ಟ್: ಶಾರುಖ್ ಮೊಬೈಲ್ ಬಳಸಿದವರ್ಯಾರು?
ಇದರಿಂದಾಗಿ ತಮ್ಮ ಮಗನನ್ನು ರಕ್ಷಿಸಲು 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಸಿಬಿಐ ತನಿಖೆಯಲ್ಲಿ ತಿಳಿದಿರುವುದು ಈಗ ರಿವೀಲ್ ಆಗಿದೆ. ಈ ಪ್ರಕರಣದಲ್ಲಿ ಸಮೀರ್ ವಾಂಖೆಡೆಯವರು ಆರೋಪಿಯಾಗಿದ್ದು, ಅವರಿಗೆ ಕಳೆದ ಅಕ್ಟೋಬರ್ನಲ್ಲಿಯೇ ಹೈಕೋರ್ಟ್ ಜಾಮೀನು ನೀಡಿದೆ. ಈಗ ಅದರ ವಿಚಾರಣೆಯನ್ನು ಕೋರ್ಟ್ ಪುನಃ ಕೈಗೆತ್ತಿಕೊಂಡಿದೆ. ಈಗ ವಾಂಖೆಡೆಯವರು ಶಾರುಖ್ ಅವರನ್ನು ಅರ್ಜಿಯಲ್ಲಿ ಸೇರಿಸಲು ಕೋರಿದ್ದು, ಅದಕ್ಕೆ ಕೋರ್ಟ್ ಕೂಡ ಅನುಮತಿ ನೀಡಿರುವುದರಿಂದ ಈ ಕೇಸ್ಗೆ ಭಾರಿ ಟ್ವಿಸ್ಟ್ ಸಿಕ್ಕಂತಾಗಿದೆ. ಇದೇ ವೇಳೆ, ವಾಂಖೆಡೆಯವರಿಗೆ ಕೋರ್ಟ್ ಸೂಚನೆಯನ್ನೂ ನೀಡಿದ್ದು, ಇದೇ ಕೊನೆ, ಮುಂದೆ ಯಾವುದೇ ಬದಲಾವಣೆ ಮಾಡಲು ಅನುಮತಿ ನೀಡುವುದಿಲ್ಲ ಎಂದೂ ಹೇಳಿದೆ. ಈ ಅರ್ಜಿಯ ವಿಚಾರಣೆ ಜುಲೈ 20ರಂದು ನಡೆಯಲಿದ್ದು ಬದಲಾದ ಅರ್ಜಿಗೆ ಸಿಬಿಐ ಉತ್ತರಿಸಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ. ಸಮೀರ್ ವಾಖಂಡೆಗೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ಜುಲೈ 20ರ ತನಕ ಮುಂದೂಡಿದೆ.
ಕಳೆದ ಮೇ ತಿಂಗಳಿನಲ್ಲಿ ಶಾರುಖ್ ಅವರು ತನಿಖಾಧಿಕಾರಿ ಸಮೀರ್ ವಾಂಖೆಡೆ (Sameer Wakende) ಅವರಿಗೆ ಬರೆದಿದ್ದರು ಎನ್ನಲಾದ ಚಾಟ್ ಲೀಕ್ ಆಗಿತ್ತು. ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ (Cleanchit) ಅಂದರೆ ಅವರು ನಿರಪರಾಧಿ ಎಂದು ಸಾಬೀತು ಮಾಡಲು ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಡ್ರಗ್ಸ್ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು ಸಮೀರ್ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು ಎಂಬ ಆರೋಪದ ನಡುವೆಯೇ ಶಾರುಖ್ ಅವರು ಬರೆದಿದ್ದರು ಎನ್ನಲಾದ ಚಾಟ್ ಒಂದು ಸಕತ್ ಸದ್ದು ಮಾಡಿತ್ತು. ಸಮೀರ್ ವಾಂಖೆಡೆ ಅವರು ತಾವು ಯಾವುದೇ ಲಂಚವನ್ನು ನೀಡಿಲ್ಲ ಎಂದು ಸಾಬೀತುಪಡಿಸಲು ಶಾರುಖ್ ಖಾನ್ ಅವರೊಂದಿಗಿನ ಚಾಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಒಟ್ಟಿನಲ್ಲಿ ಈಗ ಪ್ರಕರಣ ಮತ್ತೊಂದು ಮಹತ್ವದ ಘಟ್ಟವನ್ನು ತಲುಪಿದೆ.
ಶಾರುಖ್ ಖಾನ್ ಫ್ಯಾನ್ಸ್ ಕಾತುರದಿಂದ ಕಾಯ್ತಿರೋ 'ಜವಾನ್' ಡೇಟ್ ಕೊನೆಗೂ ಫಿಕ್ಸ್