ರಜನಿಕಾಂತ್ ವಿಜಯ್ ಅವರಿಗಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಜನಿ ಇದುವರೆಗೂ 170 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೆ ನಟ ವಿಜಯ್ ಅವರ ಸಿನಿಮಾ ಸಂಖ್ಯೆ 69. ನಟ ರಜನಿಕಾಂತ್ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರದಲ್ಲಿ ನಟನಿಸಿದ ನಾಯಕರು ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಸ್ಟೋರಿ ನೋಡಿ

ರಜನಿಕಾಂತ್-ದಳಪತಿ ವಿಜಯ್: ಯಾರ ಆಸ್ತಿ ಹೆಚ್ಚು?

ಸದ್ಯದ ಸುದ್ದಿ ಪ್ರಕಾರ, ತಮಿಳಿನ ಸ್ಟಾರ್ ಹೀರೋ ವಿಜಯ್ ದಳಪತಿ (Thalapathy Vijay) ಅವರು ತಮ್ಮ ಕೊನೆಯ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಅಂದರೆ, ಅವರೇ ಹೇಳುತ್ತಿರುವಂತೆ 'ಜನನಾಯಗನ್' ಸಿನಿಮಾ ಬಳಿಕ ನಟ ವಿಜಯ್ ಅವರು ಸಿನಿಮಾಗೆ ವಿದಾಯ ಹೇಳಲಿದ್ದಾರೆ. ಇದೇ ನನ್ನ ಕಟ್ಟಕಡೆಯ ಸಿನಿಮಾ ಎಂದು ಸ್ವತಃ ನಟ ವಿಜಯ್ ಘೋಷಿಸಿದ್ದಾರೆ.

ಅಚ್ಚರಿ ಎಂಬಂತೆ, ನಟ ರಜನಿಕಾಂತ್ (Rajinikanth) ಅವರೂ ಕೂಡ ಸಿನಿಮಾವೃತ್ತಿಯಿಂದ ಸದ್ಯದಲ್ಲೇ ರಿಟೈರ್‌ ಆಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ನಟ ರಜನಿಕಾಂತ್ ಅವರು ಮಲ್ಟಿ ಸ್ಟಾರರ್ ಸಿನಿಮಾ 'ಜೈಲರ್ 2'ದಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ನಟ ರಜನಿಕಾಂತ್ ಅವರೂ ಕೂಡ ಸಿನಿಮಾ ನಟನೆ ಮಾಡೋದು ಡೌಟ್ ಎನ್ನಲಾಗಿದೆ.

ಹಾಗಿದ್ದರೆ, ನಟ ರಜನಿಕಾಂತ್ ಹಾಗೂ ವಿಜಯ್ ಅವರಿಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಯಾರ ಅಸ್ತಿ ಎಷ್ಟಿದೆ? ಅವರಿಬ್ಬರ ಸಂಭಾವನೆ ಎಷ್ಟು? ದಳಪತಿ ವಿಜಯ್ ರಜನಿಕಾಂತ್‌ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆಯೇ.? ಈ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ..

ಯಾರ ಬಳಿ ಹೆಚ್ಚು ಆಸ್ತಿ ಇದೆ?

ಸಿಕ್ಕ ವರದಿಗಳ ಪ್ರಕಾರ, ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಸ್ತಿ ಸುಮಾರು 430 ಕೋಟಿಗಳಾಗಿದ್ದರೆ, ವಿಜಯ್ ಅವರ ಒಟ್ಟೂ ಆಸ್ತಿ ಸುಮಾರು 600 ಕೋಟಿಗಳಷ್ಟಿದೆ. ಸಿನಿಮಾ ಸಂಭಾವನೆ ವಿಷಯದಲ್ಲಿ ಇಷ್ಟು ದಿನ ಮೇಲಿದ್ದ ರಜನಿಕಾಂತ್ ಅವರನ್ನು ದಳಪತಿ ವಿಜಯ್ ಅವರು ತಮ್ಮ ಮುಂಬರುವ 'ಜನನಾಯಗನ್' ಸಿನಿಮಾ ಮೂಲಕ ಕೆಳಕ್ಕೆ ತಳ್ಳಿದ್ದಾರೆ. ವಿಜಯ್ ತಮ್ಮ ಕೊನೆಯ ಚಿತ್ರ 'ಜನನಾಯಕ' ಚಿತ್ರಕ್ಕಾಗಿ 275 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು, ನಟ ರಜನಿಕಾಂತ್ ತಮ್ಮ ಮುಂಬರುವ 'ಜೈಲರ್ 2' ಚಿತ್ರಕ್ಕಾಗಿ 200-230 ಕೋಟಿ ಪಡೆದಿದ್ದಾರೆ ಎಂದು ವರದಿಯಾಗಿದೆ.

ಆದರೆ, ಸಿನಿಮಾ ಸಂಖ್ಯೆಗೆ ಬಂದರೆ ನಟ ರಜನಿಕಾಂತ್ ವಿಜಯ್ ಅವರಿಗಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಜನಿ ಇದುವರೆಗೂ 170 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೆ ನಟ ವಿಜಯ್ ಅವರ ಸಿನಿಮಾ ಸಂಖ್ಯೆ 69. ನಟ ರಜನಿಕಾಂತ್ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರದಲ್ಲಿ ನಟನಿಸಿದ ನಾಯಕರು ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಐಎಮ್‌ಡಿಬಿ ವರದಿಯ ಪ್ರಕಾರ, 2018 ರಲ್ಲಿ ಬಿಡುಗಡೆಯಾದ ರಜನಿಕಾಂತ್ ನಟನೆಯ '2.0' ವಿಶ್ವಾದ್ಯಂತ 675 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ವಿಜಯ್ ಅವರ 'ಲಿಯೋ' ವಿಶ್ವಾದ್ಯಂತ 618 ಕೋಟಿ ರೂ.ಗಳನ್ನು ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.

ಮುಂಬರುವ ಸಿನಿಮಾಗಳು

ರಜನಿಕಾಂತ್ ನಟನೆ,ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ 'ಜೈಲರ್ 2' ಜೂನ್ 12, 2026 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು 2023 ರ ಸೂಪರ್ ಹಿಟ್ 'ಜೈಲರ್' ನ ಮುಂದುವರಿದ ಭಾಗ. ಮತ್ತೊಂದು ಚಿತ್ರ 'ತಲೈವರ್ 173' 2027 ರಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಅವರ ಕೊನೆಯ ಚಿತ್ರ 'ಜನನಾಯಗನ್' ಜನವರಿ 9, 2026 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ನಂತರ ವಿಜಯ್ ಚಿತ್ರರಂಗವನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ. ಭವಿಷ್ಯವನ್ನು ಬಲ್ಲವರಾರು? ಎಲ್ಲವನ್ನೂ ಕಾದು ನೋಡಬೇಕಷ್ಟೇ!