Asianet Suvarna News Asianet Suvarna News

ಇಂಡಿಯಾ ಅಂದ್ರೆ ಶಿಲ್ಪಾ ಪತಿ ರಾಜ್​ಕುಂದ್ರಾ ದೃಷ್ಟಿಯಲ್ಲಿ ಹೀಗಂತೆ! ವಿಡಿಯೋ ಕೇಳಿ ಛೀಮಾರಿ ಹಾಕ್ತಿದ್ದಾರೆ ನೆಟ್ಟಿಗರು

ತಮ್ಮ ಮುಂಬರುವ ಚಿತ್ರದ ಪ್ರಮೋಷನ್​ ಸಮಯದಲ್ಲಿ ಇಂಡಿಯಾ ಮತ್ತು ಶಾರುಖ್​ ಕುರಿತು ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಆಡಿದ ಮಾತುಗಳಿಂದ ನೆಟ್ಟಿಗರು ಗರಂ ಆಗಿದ್ದಾರೆ. 
 

Raj Kundra talks about what works in India and Bollywood ShahRukh Khan sex suc
Author
First Published Oct 19, 2023, 1:17 PM IST

ಬಾಲಿವುಡ್​ ಎವರ್​ಗ್ರೀನ್​ ತಾರೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಅದು 2021ರ ಘಟನೆ.  ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು.  ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ರಾಜ್​ ಕುಂದ್ರಾ ಜೈಲಿನಿಂದ ಹೊರಬಂದ ಬಳಿಕ ಕೆಲವು ತಿಂಗಳು ಎಲ್ಲಿಯೂ ಹೊರಗಡೆ ಹೋಗುತ್ತಿರಲಿಲ್ಲ. ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗೀಗ ಅವರು ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಎಲ್ಲಿಗೆ ಹೋದರೂ ಮುಖವನ್ನು ಸಂಪೂರ್ಣ ಮುಚ್ಚಿಕೊಂಡೇ ತಿರುಗಾಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಮುಖಕ್ಕೆ ಹೆಲ್ಮೆಟ್​ ರೀತಿ ಧರಿಸಿಕೊಂಡು ಓಡಾಡುತ್ತಾರೆ. ಇದಕ್ಕಾಗಿ ಇದಾಗಲೇ ಇವರು ಸಕತ್​ ಟ್ರೋಲ್​ಗೂ ಒಳಗಾಗಿದ್ದರು. ಇಂಥ ಕೆಟ್ಟ ಕೆಲ್ಸ ಮಾಡಿರುವ ಕಾರಣ, ಮುಖ ತೋರಿಸಲಾಗ್ತಿಲ್ಲ ಎನ್ನುತ್ತಿದ್ದಾರೆ.  

ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್​!

ಆದರೆ ಇದೇ ಮೊದಲ ಬಾರಿಗೆ ತಮ್ಮ ಮಾಸ್ಕ್​ ತೆಗೆದಿರುವ ರಾಜ್​ಕುಂದ್ರಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ತಮ್ಮ ಮುಂಬರುವ ಚಿತ್ರ UT 69 ಕುರಿತು ಅವರು ಮಾತನಾಡುತ್ತಿದ್ದರು. ಆದರೆ ಭಾರತದ ಬಗ್ಗೆ ಇವರಾಡಿದ ಮಾತುಗಳಿಂದ ಮತ್ತೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಅವರು  ಹೇಳಿದ್ದು ಏನೆಂದರೆ, ನಿಮಗೆಲ್ಲಾ ಇಂಡಿಯಾ ಮತ್ತು ಬಾಲಿವುಡ್​ ಬಗ್ಗೆ ಗೊತ್ತೇ ಇದೆ. ಇಲ್ಲಿ ನಡೆಯುವುದು ಎರಡೇ ವಿಷಯ. ಒಂದು ಸೆಕ್ಸ್​ ಇನ್ನೊಂದು ಶಾರುಖ್​ ಖಾನ್​ ಎಂದಿದ್ದಾರೆ. ಅಲ್ಲಿ ನೆರೆದವರು ಒಹೋ ಎಂದು ಸಂತೋಷದಿಂದ ನಕ್ಕಿದ್ದಾರೆ. ಆದರೆ ಇದರ ವಿಡಿಯೋ ವೈರಲ್​ ಆಗುತ್ತಲೇ ನೆಟ್ಟಿಗರು ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಳ್ತಿದ್ದಾರೆ. ಥೂ ನಿನ್​ ಜನ್ಮಕ್ಕೆ ಅಂತಿದ್ದಾರೆ ಟ್ರೋಲಿಗರು. ಇಂಥ ಕೆಟ್ಟ ಮಾತನಾಡಲು ನಿನಗೆ ನಾಚಿಕೆ ಆಗಲ್ವಾ ಎಂದು ಹಲವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನೀನು ಸೆಕ್ಸ್​ನ ರಾಜಾ ಅಂತ ಎಲ್ಲರಿಗೂ ಗೊತ್ತು. ಹಾಗಂತ ಭಾರತದ ಮರ್ಯಾದೆ ಹರಾಜು ಹಾಕಲು ನಿಮಗೆಷ್ಟು ಧೈರ್ಯ ಎಂದು ಕೆಲವರು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ. ನಿಮ್ಮದೇನಿದ್ದರೂ ಪತ್ನಿ ಶಿಲ್ಪಾ ಮುಂದೆ ಇಟ್ಟುಕೊಂಡಿ, ಇಂಥ ಕೀಳು ಸಂಸ್ಕೃತಿಯನ್ನು ಇಲ್ಲಿ ಬಿಂಬಿಸಬೇಡಿ ಎಂದು ಕೆಲವರು ರಾಜ್​ ಕುಂದ್ರಾ ಅವರ ವಿರುದ್ಧ ಕಿಡಿ ಕಾರಿದ್ದರೆ, ಇನ್ನು ಕೆಲವರು ಜೈಲಿಗೆ ಹೋಗಿ ಬಂದರೂ ಇನ್ನೂ ಬುದ್ಧಿ ಬಂದಿಲ್ಲ ಅಲ್ವಾ ನಿಮಗೆ ಎಂದು ಪ್ರಶ್ನಿಸುತ್ತಿದ್ದಾರೆ. 

ಇನ್ನು ಕೆಲವರು ಅವರು ಹೇಳ್ತಿರೋದು ಭಾರತದ ಬಗ್ಗೆಯಲ್ಲ 'ಇಂಡಿಯಾ' ಬಗ್ಗೆ ಎಂದು ರಾಜಕೀಯವನ್ನು ಎಳೆದು ತಂದಿದ್ದಾರೆ. ಇನ್ನು ಕೆಲವರು, ಅವರು ಬಾಲಿವುಡ್​ನಲ್ಲಿ ಬಿಕರಿಯಾಗ್ತಿರೋದು ಸೆಕ್ಸ್​  ಮತ್ತು ಶಾರುಖ್​ ಎಂದಿದ್ದಾರೆ. ಭಾರತದ ಬಗ್ಗೆ ಅವರು ಹೇಳಿಲ್ಲ ಎಂದು ನಟನ ಪರ ವಹಿಸಿಕೊಂಡಿದ್ದಾರೆ. ಶಾರುಖ್​ ಅಭಿಮಾನಿಗಳಂತೂ ಇನ್ನಿಲ್ಲದಂತೆ ಸಿಟ್ಟಿಗೆದ್ದಿದ್ದಾರೆ. ನೀನು ಮಾಸ್ಕ್​ ಹಾಕ್ಕೊಂಡೇ ಓಡಾಡು, ಇಲ್ಲಾಂದ್ರೆ ಚಪ್ಪಲಿ ಏಟು ಬೀಳುತ್ತೆ ಎಂದು ಒಂದಿಷ್ಟು ಮಂದಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಭಾರತ ದೇಶದ ಸಂಸ್ಕ್ರತಿಗೆ ಅಪಮಾನ ಮಾಡುತ್ತಿದ್ದಾನೆ ಈತ. ವಿದೇಶದಲ್ಲಿಯೇ ಇದ್ದವನು ಹಣ ನೋಡಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾಗಿದ್ದಾನೆ. ಈತನ ಮನಸ್ಸು ಸಗಣಿಯಿಂದ ತುಂಬಿದೆ ಎಂದು ಬಳಕೆದಾರರೊಬ್ಬರು ಕಿಡಿ ಕಾರಿದ್ದಾರೆ. 

ಓಟಿಟಿಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್​​ ದೃಶ್ಯಗಳು- ಜನರೂ ರಿಪೋರ್ಟ್​ ಮಾಡಲ್ಲ: ನಟಿ ಸುಹಾಸಿನಿ ಹೇಳಿದ್ದೇನು?

Follow Us:
Download App:
  • android
  • ios