ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್!
ಇಷ್ಟು ದಿನ ರಾಜ್ ಕುಂದ್ರಾ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೆ, ಇದೀಗ ನಟಿ ಶಿಲ್ಪಾ ಶೆಟ್ಟಿನೂ ಅವರ ಹಾದಿ ಹಿಡಿದಿದ್ದಾರೆ.
ಬಾಲಿವುಡ್ ಎವರ್ಗ್ರೀನ್ ತಾರೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಅದು 2021ರ ಘಟನೆ. ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು. ಇವರ ಪತಿ, ಖ್ಯಾತ ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.
ರಾಜ್ ಕುಂದ್ರಾ ಜೈಲಿನಿಂದ ಹೊರಬಂದ ಬಳಿಕ ಕೆಲವು ತಿಂಗಳು ಎಲ್ಲಿಯೂ ಹೊರಗಡೆ ಹೋಗುತ್ತಿರಲಿಲ್ಲ. ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗೀಗ ಅವರು ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಎಲ್ಲಿಗೆ ಹೋದರೂ ಮುಖವನ್ನು ಸಂಪೂರ್ಣ ಮುಚ್ಚಿಕೊಂಡೇ ತಿರುಗಾಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಮುಖಕ್ಕೆ ಹೆಲ್ಮೆಟ್ ರೀತಿ ಧರಿಸಿಕೊಂಡು ಓಡಾಡುತ್ತಾರೆ. ಇದಕ್ಕಾಗಿ ಇದಾಗಲೇ ಇವರು ಸಕತ್ ಟ್ರೋಲ್ಗೂ ಒಳಗಾಗಿದ್ದರು. ಇಂಥ ಕೆಟ್ಟ ಕೆಲ್ಸ ಮಾಡಿರುವ ಕಾರಣ, ಮುಖ ತೋರಿಸಲಾಗ್ತಿಲ್ಲ ಎನ್ನುತ್ತಿದ್ದಾರೆ.
ಈಚೆಗೆ ನಡೆದ ಗಣೇಶೋತ್ಸವದ ಸಂದರ್ಭದಲ್ಲಿಯೂ ರಾಜ್ ಕುಂದ್ರಾ ಮುಖವನ್ನು ಮುಚ್ಚಿಕೊಂಡು ಗಣೇಶನನ್ನು ಮನೆಗೆ ಬರಮಾಡಿಕೊಂಡು ಟ್ರೋಲ್ ಆಗಿದ್ದರು. ನಂತರ ಗಣೇಶನ ವಿಸರ್ಜನೆ ಸಂದರ್ಭದಲ್ಲಿಯೂ ಮುಖ ಮುಚ್ಚಿಕೊಂಡು ಪತ್ನಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪುನಃ ಟ್ರೋಲ್ಗೆ ಒಳಗಾದರು. ಪತ್ನಿ ಶಿಲ್ಪಾ ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದರೆ, ರಾಜ್ ಕುಂದ್ರಾ ಮಾತ್ರ ಮುಖಕ್ಕೆ ಮುಖವಾಡ ಧರಿಸಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾಣಿಸಿಕೊಂಡರು.
ಆದರೆ ಇದೀಗ ಕುತೂಹಲ ಎನ್ನುವಂತೆ ನಟಿ ಶಿಲ್ಪಾ ಶೆಟ್ಟಿಯೂ ಪತಿಗೆ ಸಾಥ್ ನೀಡಿದ್ದಾರೆ. ಅವರೂ ಮುಖವನ್ನು ಸಂಪೂರ್ಣ ಮುಚ್ಚಿಕೊಂಡು ಪತಿಯ ಜೊತೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಪತಿಗೆ ತಕ್ಕ ಪತ್ನಿ ಎಂದು ಕೆಲವರು ಹೇಳುತ್ತಿದ್ದರೆ, ಇಷ್ಟು ದಿನ ಪತಿ ಮಾತ್ರ ಮಾಡಿದ ಕೆಟ್ಟ ಕೆಲಸಕ್ಕೆ ಮುಖ ಮುಚ್ಚಿಕೊಳ್ತಿದ್ರೆ, ಅವ್ರ ಜೊತೆ ನೀವೂ ಸೇರಿಕೊಂಡ್ರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಬೇಕಿತ್ತು ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಜನಪ್ರಿಯ ಸೂಪರ್‌ಹೀರೋ ಕಾರ್ಟೂನ್ ಪವರ್ ರೇಂಜರ್ಸ್ ಅನ್ನು ನೆನಪಿಸಿ "ಎಸ್‌ಪಿಡಿ ಎಮರ್ಜೆನ್ಸಿ" ಎಂದು ಕಮೆಂಟ್ ಮಾಡಿದ್ದಾರೆ. ವೈರಲ್ ಆಗಿರೋ ವಿಡಿಯೋದಲ್ಲಿ ಅಲ್ಲಿರುವ ಜನರು ಹಲವಾರು ರೀತಿ ಕಮೆಂಟ್ ಮಾಡಿದ್ದನ್ನು ಕೇಳಬಹುದು. ರೇಂಜ್ ರೋವರ್ಸ್ ಸೂಪರ್‌ಮ್ಯಾನ್ ನಟರ ರೀತಿ ಕಪ್ಪು ಮುಖವಾಡ ಧರಿಸಿ ಹೋಗುತ್ತಿದ್ದೀರಲ್ವ ಎಂದೆಲ್ಲ ಮಾತನಾಡುವುದು ಕೇಳಿಸುತ್ತಿದೆ.