ಮಿಸೆಸ್‌ ಅಂಡರ್ಕವರ್ ಸಿನಿಮಾ ಪ್ರಚಾರದಲ್ಲಿ ರಾಧಿಕಾ ಆಪ್ಟೆ. ಮೂಗು ಮತ್ತು ಸ್ತನ ಸರ್ಜನಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದು ಯಾರು?

ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ರಾಧಿಕಾ ಆಪ್ಟೆ ಪ್ರತಿ ಸಿನಿಮಾ ರಿಲೀಸ್ ಸಮಯದಲ್ಲಿ ವೈರಲ್ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಮಿಸೆಸ್ ಅಂಡರ್ಕವರ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಾಗ ಯಾವ ರೀತಿ ಅವಮಾನಗಳು ಮತ್ತು ಬಾಡಿ ಶೇಮ್‌ಗಳನ್ನು ಎದುರಿಸಿದ್ದರು ಎಂದು ರಿವೀಲ್ ಮಾಡಿದ್ದಾರೆ. ಮೂಗು ಮತ್ತು ಸ್ತನ ಬಗ್ಗೆ ಮಾತನಾಡಲು ಧೈರ್ಯ ಯಾರಿಗಿದೆ ಎಂದ ನೆಟ್ಟಿಗರು... 

Add Asianetnews Kannada as a Preferred SourcegooglePreferred

35 ವರ್ಷದ ರಾಧಿಕಾ ಆಪ್ಟೆ ಸಿನಿಮಾ ಜರ್ನಿ ಅದ್ಭುತವಾಗಿದೆ ಆದರೆ ಆರಂಭದಲ್ಲಿ ಹಾಗೆ ಇರಲಿಲ್ಲ. 'ಪ್ರತಿಯೊಬ್ಬರು ಯೋಚನೆ ಮಾಡುವ ರೀತಿ ಬೇರೆ ಇರುತ್ತದೆ. ನಾನು ಹಳ್ಳಿ ಹುಡುಗಿ ಪಾತ್ರಕ್ಕೆ ಮಾತ್ರ ಸೂಕ್ತ ಎನ್ನುತ್ತಿದ್ದು..ಈ ಯೋಚನೆ ಹಲವು ವರ್ಷಗಳಿಂದ ಇದೆ ಆದರೆ ಬದಲಾಪುರ್‌ ಸಿನಿಮಾ ಎಲ್ಲರ ದೃಷ್ಟಿ ಬದಲಾಯಿಸಿತ್ತು. ಬದಲಾಪುರ್ ಸಿನಿಮಾ ಆದ್ಮೇಲೆ ನಾನು ಹೆಚ್ಚಿಗೆ ಸೆಕ್ಸ್‌ ಕಾಮಿಡಿ ಸಿನಿಮಾಗಳನ್ನು ಮಾಡುವುದು ಎಂದು ತಿಳಿದುಕೊಂಡರು. ನಾನು ಸ್ಟ್ರಿಪ್ ಮಾಡಬಹುದಿತ್ತು. ಆದರೆ ಆ ದಾರಿ ಹಿಡಿಯಬಾರದು ಎಂದು ನಾನು ಮತ್ತೊಂದು ದಾರಿ ಆಯ್ಕೆ ಮಾಡಿಕೊಂಡೆ. ಅದೇ ರೀತಿ ಆಫರ್‌ಗಳು ಬಂದಾಗ ನಾನು ಒಪ್ಪಿಕೊಳ್ಳಲಿಲ್ಲ. ಎಲ್ಲರ ಗ್ರಹಿಕೆಗಳು ಬೇರೆ ತರ ಇರುತ್ತೆ' ಎಂದು ರಾಧಿಕಾ ಆಪ್ಟೆ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಡಮ್ಮಿ ಕುದುರೆ ಮೇಲೆ ಹಾಟ್‌ ಬಟ್ಟೆ ತೊಟ್ಟು Radhika Apte ಪೋಸ್; ನೆಟ್ಟಿಗರು ಗರಂ!

ರಾಧಿಕಾ ಅವಕಾಶಗಳನ್ನು ಹುಡುಕುವಾಗ ಪಾತ್ರಕ್ಕೆ ಅಗತ್ಯವಿದೆ ಇಲ್ಲ ಎಂಬುದನ್ನು ಯೋಚನೆ ಮಾಡದೆ ನಿರ್ದೆಶಕರು ಹೇಳುತ್ತಿದ್ದರು ಎಂದು ತೂಕ ಇಳಿಸಿಕೊಳ್ಳುತ್ತಿದ್ದರಂತೆ. 'ನಾನು ತುಂಬಾ ದಪ್ಪ ಇದ್ದೆ ಎನ್ನುವ ಕಾರಣ ತುಂಬಾ ಸಿನಿಮಾ ಆಫರ್‌ಗಳನ್ನು ಕಳೆದುಕೊಂಡಿರುವೆ. ಅದು ಕೇವಲ 3 ರಿಂದ 4 ಕೆಜಿ ದಪ್ಪವಿದ್ದೆ ಅಷ್ಟೆ. ಸಿನಿಮಾ ರಂಗಕ್ಕೆ ನಾನು ಹೊಸದಾಗಿ ಕಾಲಿಟ್ಟಾಗ ಬಿಟ್ಟಿ ಸಲಹೆ ಕೊಡುವವರು ಹೆಚ್ಚಿರುತ್ತಾರೆ. ಯಾಕೆ ನಿಮ್ಮ ಮೂಗಿಗೆ ಸರ್ಜರಿ ಮಾಡಿಸಿ ಶೇಪ್ ಮಾಡಿಸಬಾರದು? ನಿಮ್ಮ ಸ್ತನ ಚಿಕ್ಕದ್ದು ಸರ್ಜರಿ ಅಥವಾ ಇಂಜೆಕ್ಷನ್‌ ತೆಗೆದುಕೊಂಡು ದೊಡ್ಡದು ಮಾಡಿಸಿಕೊಳ್ಳಿ ಎನ್ನುತ್ತಿದ್ದರು. ಈ ಮಾತುಗಳನ್ನು ಕೇಳಿಸಿಕೊಳ್ಳಲು ಆಗುತ್ತಿರಲಲ್ಲ ಈ ನಡುವೆ ಅನೇಕರು ಬಾಡಿ ಶೇಮಿಂಗ್ ಮಾಡುತ್ತಿದ್ದರು. ಕಳೆದು ಮೂರ್ನಾಲ್ಕು ವರ್ಷಗಳಿಂದ ನಾವು ಧೈರ್ಯವಾಗಿ ಪಬ್ಲಿಕ್‌ನಲ್ಲಿ ಈ ರೀತಿ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಈಗ ಏನೂ ಮಾಡಲು ಆಗುತ್ತಿರಲಿಲ್ಲ ಆದರೆ ಈಗ ನೀವು ನನ್ನ ಜೊತೆ ಈ ರೀತಿ ಮಾತನಾಡಿದ್ದರೆ ನಾನು ಪ್ರಾಜೆಕ್ಟ್‌ನಿಂದ ಹೊರ ನಡೆಯುವೆ ಅಥವಾ ನಿಮ್ಮನ್ನು ಹೊರ ಕಳುಹಿಸುವೆ ಎನ್ನಬಹುದು' ಎಂದು ರಾಧಿಕಾ ಹೇಳಿದ್ದಾರೆ.

ನ್ಯೂಡ್ ಕ್ಲಿಪ್‌ಗಳಿಂದ ಹಿಡಿದು ಬಾತ್ರೂಮ್ ಸೆಲ್ಫಿ ಲೀಕ್‌ಗಳವರೆಗೂ ಇವೆ ಈ ನಟಿಯ ವಿವಾದ

ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ರಾಧಿಕಾ ಆಪ್ಟೆ 17 ವರ್ಷ ಜರ್ನಿ ಪೂರೈಸಿದ್ದಾರೆ. ಬೇರೆ ನಟಿಯರು ದೊಡ್ಡ ಗಾತ್ರದ ಸ್ತನ ಮತ್ತು ತುಟಿ ಹೊಂದಿರುವ ಕಾರಣಕ್ಕೆ ತಾನು ಸಿನಿಮಾಗಳಿಂದ ರಿಜೆಕ್ಟ್ ಆಗುತ್ತಿದ್ದೀನಿ ಎನ್ನುವ ಶಾಕಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ರಾಧಿಕಾ ಮಿಡ್ ಡೇಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. 'ಇತ್ತೀಚಿಗೆ ನಾನು ಸಿನಿಮಾಗಳಿಂದ ರೆಜೆಕ್ಟ್ ಆಗುತ್ತಿದ್ದೀನಿ, ಬೇರೆ ನಟಿಯರಿಗೆ ದೊಡ್ಡ ಗಾತ್ರದ ಸ್ತನ ಮತ್ತು ತುಟಿ ಇರುವ ಕಾರಣ ನಾನು ತಿರಸ್ಕರಿಸ್ಪಟ್ಟಿದ್ದೀನಿ. ಹೆಚ್ಚು ಸೆಕ್ಸಿಯಾಗಿ ಕಾಣುವವರು ಹೆಚ್ಚು ಸೇಲ್ ಆಗತ್ತಾರೆ ಅಂತ ನನಗೆ ಒಬ್ಬರು ಹೇಳಿದರು. ಆದರೆ ಹೆಚ್ಚು ಮಹಿಳೆಯರು ಇದ್ದರೇ ಅನೇಕ ವಿಚಾರಗಳು ಬದಲಾಗುತ್ತವೆ ಎಂದು ಹೇಳಿದ್ದಾರೆ. 

ಈ ಒತ್ತಡ ಮೊದಲೇ ಇತ್ತು. ವೃತ್ತಿ ಜೀವನದ ಪ್ರಾರಂಭದಲ್ಲಿ ನನ್ನ ದೇಹ ಮತ್ತು ಮುಖದ ಮೇಲೆ ಸಾಕಷ್ಟು ಕೆಲಸ ಮಾಡಲು ಹೇಳಿದರು. ನಾನು ನಡೆಸಿದ ಮೊದಲ ಸಭೆಯಲ್ಲಿ ನನ್ನ ಮೂಗಿನ ಬಗ್ಗೆ ಹೇಳಿದರು. ಎರಡನೇ ಮೀಟಿಂಗ್‌ನಲ್ಲಿ ನನ್ನ ಸ್ತನದ ಗಾತ್ರ ಹೆಚ್ಚಿಸುವಂತೆ ಹೇಳಿದರು. ನಂತರ ನನ್ನ ಕಾಲುಗಳ ಬಗ್ಗೆ ಹೇಳಿದರು. ನನ್ನ ಕೂದಲಿಗೆ ಬಣ್ಣ ಹಚ್ಚಲು ನನಗೆ 30 ವರ್ಷಗಳು ಬೇಕಾಯಿತು. ಇದರಿಂದ ನಾನು ಒತ್ತಡಕ್ಕೆ ಒಳಗಾಗಿಲ್ಲ. ಆದರೆ ನಾನು ಕೋಪಗೊಂಡಿದ್ದೇನೆ. ಇವೆಲ್ಲವೂ ನನ್ನ ದೇಹವನ್ನು ಇನ್ನಷ್ಟು ಪ್ರೀತಿಸಲು ನನಗೆ ಸಹಾಯ ಮಾಡಿತು. ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ' ಂದು ರಾಧಿಕಾ ಚಿತ್ರರಂಗದಲ್ಲಿ ನಟಿಮಣಿಯರಿಗೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಒತ್ತಡ ಹೇರುತ್ತಾರೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.