Asianet Suvarna News Asianet Suvarna News

ಡಮ್ಮಿ ಕುದುರೆ ಮೇಲೆ ಹಾಟ್‌ ಬಟ್ಟೆ ತೊಟ್ಟು Radhika Apte ಪೋಸ್; ನೆಟ್ಟಿಗರು ಗರಂ!

ರಾಧಿಕಾ ಪದೇ ಪದೇ ಟ್ರೋಲ್ ಆಗಲು ಕಾರಣವೇನು? ಹಾಟ್ ಬಟ್ಟೆ ಓಕೆ ಆದ್ರೆ ಪೋಸ್ ನಾಟ್ ಓಕೆ....

Radhika Apte poses on dummy horse raises netizen eyebrows vcs
Author
First Published Sep 16, 2022, 10:20 AM IST

ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ಹೊಸ ಅಲೆಯ ಯೋಚನೆಗಳನ್ನು ಸೃಷ್ಟಿ ಮಾಡಿರುವ ನಟಿ ರಾಧಿಕಾ ಆಪ್ಟೆ (Radhika Apte) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಸಿಂಪಲ್ ಆಂಡ್ ಹಂಬಲ್ ಆಗಿ ಕಾಣಿಸಿಕೊಳ್ಳುವ ನಟಿ ಅಷ್ಟೇ ಬೋಲ್ಡ್ ಆಂಡ್ ಹಾಟ್‌ ಲುಕ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಹಿಳಾ ಪ್ರಧಾನ ಸಿನಿಮಾಗಳನ್ನು ಹೆಚ್ಚಿಗೆ ಆಯ್ಕೆ ಮಾಡಿಕೊಳ್ಳುವ ರಾಧಿಕಾ ಸೊಸೈಟಿಯಲ್ಲಿ ಡಾಮಿನೇಟ್ ಮಾಡುತ್ತಿರುವ ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುತ್ತಾರೆ. ಹೀಗಾಗಿ I dont care attitude ಹೆಚ್ಚಿದೆ...

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಡಮ್ಮಿ ಕುದುರೆ ಮೇಲೆ ಕುಳಿತುಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಕೆಂಪು ಮತ್ತು ನೀಲಿ ಕಾಂಬಿನೇಷನ್‌ ಉಡುಪು ಧರಿಸಿರುವ ರಾಧಿಕಾ ಕಾಲುಗಳು ಅಗಲವಾಗಿ ಚಾಚುತ್ತ ಕುಳಿತುಕೊಂಡಿದ್ದಾರೆ ಹಾಗೆ ಕಣ್ಣುಗಳನ್ನು ಮುಚ್ಚಿದ್ದಾರೆ. ಹಾಟ್ ಗರ್ಲ್‌, ದೇವರೇ ನಾವು ಎಷ್ಟು ಕೊಳಕು ಜನ, ರೈಡ್‌ನ ಎಂಜಾಯ್ ಮಾಡು ಎಂದು ಕಾಮೆಂಟ್‌ಗಳು ಬಂದಿದೆ. 

ನ್ಯೂಡ್ ಕ್ಲಿಪ್‌ಗಳಿಂದ ಹಿಡಿದು ಬಾತ್ರೂಮ್ ಸೆಲ್ಫಿ ಲೀಕ್‌ಗಳವರೆಗೂ ಇವೆ ಈ ನಟಿಯ ವಿವಾದ

ಈ ಫೋಟೋವನ್ನು ನೆಟ್ಟಿಗರು ಎರಡು ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಸಖತ್ ಸಿಂಪಲ್ ಆಗಿದ್ದುಕೊಂಡು ಚಪ್ಪಲಿ ಹಾಕದೇ ಮಗು ರೀತಿ ಅಟವಾಡುತ್ತಿದ್ದೀರಾ ಎಂದು ಅಭಿಮಾನಿಗಳು ಹೇಳಿದ್ದರೆ ಇನ್ನೂ ಕೆಲವರು ಇದು ಸೆಕ್ಸ್ಯುಯಲ್ ರೀತಿ ಕಾಣಿಸುತ್ತಿದೆ ಕಣ್ಣು ಮುಚ್ಚಿಕೊಂಡು ರೈಡ್ ಎಂಜಾಯ್ ಮಾಡುತ್ತಿರುವ ಹಾಗಿದೆ ಎಂದಿದ್ದಾರೆ. ಪದೇ ಪದೇ ಡಬಲ್ ಮೀನಿಂಗ್ ಥಿಂಗ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿರುವುದಕ್ಕೆ ನೆಟ್ಟಿಗರು ಗರಂ ಅಗಿದ್ದಾರೆ.

Radhika Apte poses on dummy horse raises netizen eyebrows vcs

ಪೋನ್ ಸೆಕ್ಸ್‌:

ಬಿ-ಟೌನಲ್ಲಿ ಉಳಿಯಬೇಕು ಹೆಸರು ಮಾಡಬೇಕು ಎಂದು ರಾಧಿಕಾ ಆಪ್ಟೆ ಕಣ್ಣಿಗೆ ಬಿದ್ದ ಸಿನಿಮಾಗಳಿಗೆಲ್ಲಾ ಆಡಿಷನ್ ಕೊಟ್ಟಿದ್ದಾರೆ. ಜೀವನದಲ್ಲಿ ಮರೆಯಲಾಗದ ಆಡಿಷನ್ ಅಂದ್ರೆ ದೇವ್ ಡಿ ಎಂದು ಈ ಹಿಂದೆ ಹೇಳಿದ್ದರು. 'ನಾನು ದೇವ್ ಡಿ ಆಡಿಷನ್ ನೀಡಲು ಪೋಸ್ ಸೆಕ್ಸ್ ಮಾಡಬೇಕಿತ್ತು. ಅಗ ನಾನು ಪುಣೆಯಲ್ಲಿ ವಾಸವಿದ್ದೆ. ಈ ಘಟನೆ ನಡೆಯುವವರೆಗೂ ನನಗೆ ಈ ಪೋಸ್ ಸೆಕ್ಸ್‌ ಅಂದ್ರೆ ಏನೆಂದು ಗೊತ್ತಿರಲಿಲ್ಲ. ಅದೂ ಎಲ್ಲರ ಎದುರು ಈ ರೀತಿ ನಟಿಸಬೇಕಿತ್ತು. ಯಾರ ಬಗ್ಗೆನೂ ಕೇರ್ ಮಾಡದೆ ನಾನು ಆಡಿಷನ್ ನೀಡಿದೆ ಸೂಪರ್ ಆಗಿತ್ತು. ಆದರೆ ಆ ದೃಶ್ಯ ಸರಿಯಾಗಿ ಬರಲಿಲ್ಲ' ಎಂದು ರಾಧಿಕಾ ಹೇಳಿಕೊಂಡಿದ್ದರು.

ಬೇರೆ ನಟಿಯರ ಸ್ತನದ ಗಾತ್ರ ದೊಡ್ಡದಿದೆ ಎಂದು ನಾನು ರಿಜೆಕ್ಟ್ ಆಗುತ್ತಿದ್ದೆ; ಬಿಟೌನ್‌ನ ಕರಾಳಮುಖ ಬಿಚ್ಚಿಟ್ಟ ನಟಿ ರಾಧಿಕಾ

ಕಾಸ್ಟಿಂಗ್ ಕೌಚ್:

ಕಾಸ್ಟಿಂಗ್ ಕೌಚ್ (Costing Couch) ಘಟನೆಯನ್ನು ಬಹಿರಂಗಪಡಿಸಿದಾಗ ರಾಧಿಕಾ ಕೂಡ ಬೆಳಕಿಗೆ ಬಂದಿದ್ದರು. ಹೀರೋ ಜೊತೆ ಮಲಗಲು ನಿರ್ಮಾಪಕರೊಬ್ಬರು ಕೇಳಿದ್ದರೆಂದು ರಾಧಿಕಾ ಬಹಿರಂಗ ಪಡಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಅದೇ ಸಮಯದಲ್ಲಿ, ಮತ್ತೊಂದು ಸಂದರ್ಶನದಲ್ಲಿಯೂ ಅವರು ಚಿತ್ರದ ಆಡಿಷನ್ ಸಮಯದಲ್ಲಿ ಫೋನ್‌ನಲ್ಲಿ ಅಶ್ಲೀಲವಾಗಿ ಮಾತನಾಡ ಬೇಕಾಯಿತು ಎಂದು ಹೇಳಿದ್ದರು. ಮತ್ತೊಂದು ಘಟನೆಯನ್ನು ಉಲ್ಲೇಖಿಸಿ, ರಾಧಿಕಾ ಅವರು ಚಿತ್ರೀಕರಣದ ಮೊದಲ ದಿನದ ಸೆಟ್‌ನಲ್ಲಿ ದಕ್ಷಿಣದ ಪ್ರಸಿದ್ಧ ನಟರೊಬ್ಬರು ತಮ್ಮ ಪಾದಗಳನ್ನು ಮುದ್ದಿಸಿದ್ದಾರೆ ಎಂದು ಹೇಳಿದ್ದರು. ಈ ಕೃತ್ಯವನ್ನು ಕಂಡು ಶಾಕ್‌ ಆದ ಆಕೆ ಆ ನಾಯಕನಿಗೆ ಕಪಾಳಮೋಕ್ಷ ಮಾಡಿದರು. ಈ ಘಟನೆಯ ನಂತರ ರಾಧಿಕಾ ಟಾಲಿವುಡ್ ಅನ್ನು ಪುರುಷ ಪ್ರಧಾನ ಸಮಾಜ (Male Dominating) ಎಂದು ಹೀಯಾಳಿಸಿದ್ದರು.

2017 ರಲ್ಲಿ, ರಾಧಿಕಾ ಮತ್ತೆ ವಿವಾದಗಳಲ್ಲಿ ಸಿಲುಕಿಕೊಂಡರು. ಈ ವೇಳೆ ರಾಧಿಕಾ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿರುವ ಸೆಲ್ಫಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಧಿಕಾ ಆಪ್ಟೆ, ಚಿತ್ರದಲ್ಲಿ ಕಾಣುತ್ತಿರುವ ಮಹಿಳೆ ನಾನಲ್ಲ.ಮದುವೆಯ ದಿನ ಯಾವುದೇ ಫೋಟೋ ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರುರಾಧಿಕಾ ಬ್ರಿಟೀಷ್ ಪಿಟೀಲು ವಾದಕ ಮತ್ತು ಗಾಯಕ ಬೆನೆಡಿಕ್ಟ್ ಟೇಲರ್ ಅವರನ್ನು 2012 ರಲ್ಲಿ ವಿವಾಹವಾದರು, ಸುಮಾರು ಒಂದು ವರ್ಷಗಳ ಕಾಲ ಜೊತೆಗಿದ್ದರು. ತಮಾಷೆಯೆಂದರೆ ರಾಧಿಕಾ ಬಳಿ ಈ ಮದುವೆಯ ಯಾವುದೇ ಫೋಟೋಗಳಿಲ್ಲ. 

 

 
 
 
 
 
 
 
 
 
 
 
 
 
 
 

A post shared by Radhika (@radhikaofficial)

Follow Us:
Download App:
  • android
  • ios