Asianet Suvarna News Asianet Suvarna News

'ರಾಕೆಟ್ರಿ' ಸಿನಿಮಾದಿಂದ ಮನೆ ಕಳೆದುಕೊಂಡ್ರಾ ಆರ್ ಮಾಧವನ್; ಸ್ಪಷ್ಟನೆ ನೀಡಿದ ನಟ

ರಾಕೆಟ್ರಿ ಸಿನಿಮಾಗಾಗಿ ಮಾಧವನ್ ಮನೆ ಮಾರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.  ತನ್ನ ಮನೆಯನ್ನೇ ಮಾರಿ ಸಿನಿಮಾ ಮಾಡಿದ್ದರು ಎನ್ನುವ ವದಂತಿಗೆ ಸ್ವತಃ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. 

R Madhavan Reaction On Losing His House While Funding Rocketry movie sgk
Author
Bengaluru, First Published Aug 18, 2022, 5:48 PM IST

ಖ್ಯಾತ ನಟ ಆರ್. ಮಾಧವನ್ ರಾಕೆಟ್ರಿ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಈ ಸಿನಿಮಾ ಬಳಿಕ ದೋಖ್ಲ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಾಧವನ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ರಾಕೆಟ್ರಿ ಸಿನಿಮಾಗಾಗಿ ಮಾಧವನ್ ಮನೆ ಮಾರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.  ತನ್ನ ಮನೆಯನ್ನೇ ಮಾರಿ ಸಿನಿಮಾ ಮಾಡಿದ್ದರು ಎನ್ನುವ ವದಂತಿಗೆ ಸ್ವತಃ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಧವನ್ ನಾನು ಮನೆ ಕಳೆದುಕೊಂಡಿಲ್ಲ, ನನ್ನ ಮನೆಯಲ್ಲೇ ಇದ್ದೀನಿ ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಸುದ್ದಗೆ ಬ್ರೇಕ್ ಹಾಕಿದ್ದಾರೆ. 'ದಯವಿಟ್ಟು ಈ ಸುದ್ದಿಯನ್ನು ಯಾರು ನಂಬಬೇಡಿ, ನಾನು ಮನೆ ಅಥವಾ ಏನನ್ನು ಕಳೆದುಕೊಂಡಿಲ್ಲ' ಎಂದಿದ್ದಾರೆ. ರಾಕೆಟ್ರಿ ಸಿನಿಮಾ ಮಾಡಲು ಮಾಧವನ್ ತನ್ನ ಮನೆಯನ್ನು ಮಾರಿ ಸಿನಿಮಾ ಮಾಡಿದ್ದರು ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಮನೆ ಕಳೆದುಕೊಂಡಿದ್ದಾರೆ ಎಂದು ಹರಿದಾಡುತ್ತಿದ್ದ ಸುದ್ದಿಯ ಸ್ಟ್ರೀನ್ ಶಾಟ್ ಶೇರ್ ಮಾಡಿ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ನನ್ನ ಮನೆ ಅಥವಾ ಏನನ್ನೂ ಕಳೆದುಕೊಂಡಿಲ್ಲ' ಎಂದು ಹೇಳಿದರು. 'ವಾಸ್ತವವಾಗಿ ರಾಕೆಟ್ರಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಈ ವರ್ಷ ಬಹಳ ಹೆಮ್ಮೆಯಿಂದ ಭಾರೀ ಆದಾಯ ತೆರಿಗೆಯನ್ನು ಪಾವತಿಸುತ್ತಾರೆ. ದೇವರ ಅನುಗ್ರಹ ನಾವೆಲ್ಲರೂ ಬಹಳ ಒಳ್ಳೆಯ ಮತ್ತು ಹೆಮ್ಮೆಯ ಲಾಭವನ್ನು ಗಳಿಸಿದ್ದೇವೆ. ನಾನು ಇನ್ನೂ ಪ್ರೀತಿಸುತ್ತೇನೆ ಮತ್ತು ನನ್ನ ಮನೆಯಲ್ಲಿ ವಾಸಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ಈ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಸ್ಪಷ್ಟನೆ ನೀಡಿದರು. 

ನಾಲ್ಕೈದು ಸಿನಿಮಾ ಹಿಟ್ ಆಗಿದ್ದಕ್ಕೆ ಸೌತ್‌ ಸಿನಿರಂಗ ಮಾದರಿ ಎನ್ನಲು ಸಾಧ್ಯವಿಲ್ಲ; ಆರ್ ಮಾಧವನ್

ಮಾಧವನ್ ಅವರ ಚೊಚ್ಚಲ ನಿರ್ದೇಶನದ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಈ ವರ್ಷದ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ ಈ ಚಿತ್ರ ಇದಾಗಿದೆ. ಬಾಲಿವುಡ್ ಸ್ಟಾರ್  ಶಾರುಖ್ ಖಾನ್ ಹಿಂದಿ ಆವೃತ್ತಿಯಲ್ಲಿ ಮತ್ತು ಸೂರ್ಯ ತಮಿಳು ಆವೃತ್ತಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡಿಲ್ಲ. ಆದರೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.


'ರಾಕೆಟ್ರಿ' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಆರ್ ಮಾಧವನ್

ಆರ್ ಮಾಧವನ್ ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎರಡೂ ಕಡೆ ಫೇಮಸ್ ಆಗಿದ್ದಾರೆ. ಹಿಂದಿ, ತಮಿಳು, ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಚಿತ್ರಗಳಲ್ಲಿ ಮಾಧವನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ 3 ಈಡಿಯಟ್ಸ್, ರಂಗ್ ದೇ ಬಸಂತಿ, 13 ಬಿ, ತನು ವೆಡ್ಸ್ ಮನು, ಗುರು, ರೆಹನಾ ಹೈ ತೇರ್ರೆ ದಿಲ್ ಮೇ ಮತ್ತು ಜೀರೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆಗೆ ಆರ್ ಮಾಧವನ್ ವೆಬ್ ಸೀರಿಸ್ ನಲ್ಲೂ ಮಿಂಚಿದ್ದಾರೆ.  ಡಿ ಕಪಲ್ಡ್ ವೆಬ್ ಸರಣಿಯಲ್ಲಿ ಮಿಂಚಿದ್ದರು. ಸದ್ಯ ಆರ್ ಮಾಧವನ್ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೋಖ್ಲಾ ಮತ್ತು ಅಮ್ರಿಕಿ ಪಂಡಿತ್ ಸಿನಿಮಾಗಳ ಚಿತ್ರೀಕಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. 

Follow Us:
Download App:
  • android
  • ios