KGF 2ಗೆ ಅಲ್ಲು ಅರ್ಜುನ್ ಫಿದಾ; ಯಶ್, ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದೇನು?
ಕೆಜಿಎಫ್-2 ನೋಡಿ ಟಾಲಿವುಡ್ ಸ್ಟಾರ್ ಪುಷ್ಪ(Pushpa) ಹೀರೋ ಅಲ್ಲು ಅರ್ಜುನ್(Allu Arjuna) ಮೆಚ್ಚಿಕೊಂಡಿದ್ದಾರೆ. ಕೆಜಿಎಫ್-2 ಸಿನಿಮಾ ವೀಕ್ಷಿಸಿರುವ ಅಲ್ಲು ಅರ್ಜುನ್, ರಾಕಿಂಗ್ ಯಶ್ ಸೇರಿದಂತೆ ಇಡೀ ತಂಡವನ್ನು ಕೊಂಡಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಬ್ಲಾಕ್ ಬಸ್ಟರ್ ಕೆಜಿಎಫ್-2 ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಬರೆದಿದೆ. ಎಲ್ಲಾ ದಾಖಲೆಗಳನ್ನು ದೂಳಿಪಟ ಮಾಡಿರುವ ಕೆಜಿಎಫ್-2 ಸಿನಿಮಾ ಬಿಡುಗಡೆಯಾಗಿ ವಾರ ಕಳೆದರೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರು ರಾಕಿ ಭಾಯ್ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ದಾಖಲೆ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಮಂದಿಯನ್ನು ಬೆಚ್ಚಿಬೀಳಿಸಿರುವ ಕೆಜಿಎಫ್-2 ಬಿಡುಗಡೆಯಾಗಿ 7 ದಿನಗಳಲ್ಲಿ ಬರೋಬ್ಬರಿ 250 ಕೋಟಿ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರು ಮಾತ್ರವಲ್ಲದೆ ಸಿನಿಮಾ ನೋಡಿ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಸಹ ಹಾಡಿ ಹೊಗಳಿದ್ದಾರೆ.
ಇದೀಗ ಕೆಜಿಎಫ್-2 ನೋಡಿ ಟಾಲಿವುಡ್ ಸ್ಟಾರ್ ಪುಷ್ಪ(Pushpa) ಹೀರೋ ಅಲ್ಲು ಅರ್ಜುನ್(Allu Arjuna) ಮೆಚ್ಚಿಕೊಂಡಿದ್ದಾರೆ. ಕೆಜಿಎಫ್-2 ಸಿನಿಮಾ ವೀಕ್ಷಿಸಿರುವ ಅಲ್ಲು ಅರ್ಜುನ್, ರಾಕಿಂಗ್ ಯಶ್ ಸೇರಿದಂತೆ ಇಡೀ ತಂಡವನ್ನು ಕೊಂಡಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ರವಿ ಬಸ್ರೂರು ಸಂಗೀತ, ಭುವನ್ ಗೌಡ ಕ್ಯಾಮರಾ ಕೈಚಳಕ ಸೇರಿದಂತೆ ಇಡೀ ತಂಡದ ಶ್ರಮಕ್ಕೆ ಅಲ್ಲು ಅರ್ಜುನ್ ಬೇಶ್ ಎಂದಿದ್ದಾರೆ. ಸಿನಿಮಾ ನೋಡಿ ಅಲ್ಲು ಅರ್ಜುನ್ ಟ್ವಿಟ್ಟರ್ ನಲ್ಲಿ ವಿಮರ್ಷೆ ಮಾಡಿದ್ದಾರೆ.
'ಕೆಜಿಎಫ್-2 ಸಿನಿಮಾಗೆ ದೊಡ್ಡ ಅಭಿನಂದನೆ. ಅದ್ಭುತ ಪರ್ಫಾಮೆನ್ಸ್ ನೀಡಿದ ಯಶ್, ಸಂಜಯ್ ದತ್ ಅವರು ಮತ್ತು ರವೀನಾ ಟಂಡನ್ ಹಾಗೂ ಶ್ರೀನಿಧಿ ಶೆಟ್ಟಿ ಎಲ್ಲಾ ಕಲಾವಿದರು ಅಧ್ಬುತ. ರವಿ ಬಸ್ರೂರ್ ಬಿಜಿಎಮ್, ಭುವನ್ ಗೌಡ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ನನ್ನ ಅಭಿನಂದನೆಗಳು' ಎಂದಿದ್ದಾರೆ.
KGF 2 ಥಿಯೇಟರ್‌ನಲ್ಲಿ ರಿಯಲ್ ಬುಲೆಟ್ ಗನ್: ಹಾವೇರಿಯಲ್ಲಿ ಸಿನಿಮೀಯ ಘಟನೆ!
'ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ. ಅವರ ದೃಷ್ಟಿ ಮತ್ತು ನಂಬಿಕೆಗೆ ಹ್ಯಾಟ್ಸಾಪ್. ಭಾರತೀಯ ಸಿನಿಮಾರಂಗದ ಬಾವುಟವನ್ನು ಅತೀ ಎತ್ತರಕ್ಕೆ ಹಾರಿಸಿದ ಇಡಿ ಕೆಜಿಎಫ್-2 ತಂಡಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಟ್ವೀಟ್ ಗೆ ನಟಿ ಶ್ರೀನಿಧಿ ಶೆಟ್ಟಿ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ಈ ಮೊದಲು ಅಲ್ಲು ಅರ್ಜುನ್ ಆರ್ ಆರ್ ಆರ್ ಸಿನಿಮಾವನ್ನು ಕೊಂಡಾಡಿದ್ದರು. ಸಿನಿಮಾ ಬಗ್ಗೆ ವಿಮರ್ಶೆ ಮಾಡಿದ್ದರು. ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ.
ಅಂದಹಾಗೆ ಕೆಜಿಎಫ್-2 ಈಗಾಗಲೇ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ. ಬಾಹುಬಲಿ-2, ಆರ್ ಆರ್ ಆರ್ ಕಲೆಕ್ಷನ್ ಬೀಟ್ ಮಾಡಿ ಕೆಜಿಎಫ್-2 ನಂಬರ್ 1 ಆಗಿ ಅಬ್ಬರಿಸುತ್ತಿದೆ. 1000 ಕೋಟಿ ರೂಪಾಯಿ ನತ್ತ ದಾಪುಗಾಲಿಟ್ಟಿರುವ ಕೆಜಿಎಫ್-2 ಸದ್ಯದಲ್ಲೇ 1000 ಕೋಟಿ ಕ್ಲಬ್ ಸೇರುವ ಮೂಲಕ ಮತ್ತೊಂದು ದಾಖಲೆ ಬರೆಯಲಿದೆ. ಕನ್ನಡ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರೀತಿಗೆ ಕನ್ನಡಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಷಯ ತೃತೀಯಕ್ಕೆ ಫ್ಯಾನ್ಸ್‌ಗೆ ವಿಶೇಷ ಗಿಫ್ಟ್: ಬಂಗಾರದ ನಾಣ್ಯದ ರೂಪದಲ್ಲಿ ಯಶ್, ಅಪ್ಪು!
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಅಭಿನಯ, ಸಂಜಯ್ ದತ್ ಆರ್ಭಟ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್, ಪ್ರಕಾಶ್ ರೈ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅದ್ದೂರಿ ಮೇಕಿಂಗ್, ಆಕ್ಷನ್, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. ವಾರದ ಬಳಿಕವೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.