ಅನ್‌ಲಾಕ್‌ ಪಕ್ರಿಯೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಚಿತ್ರಮಂದಿರಗಳು ತೆರೆಯುವಂತೆ ಅನುಮತಿ ನೀಡಿ, ಶೇ.50 ಸೀಟುಗಳನ್ನಷ್ಟೆೇ ಭರ್ತಿ ಮಾಡಲು ಅನುಮತಿ ನೀಡಲಾಗಿತ್ತು. ಇತ್ತೀಚಿಗೆ ಹೊರಡಿಸಿರುವ ಹೊಸ ಆದೇಶದ ಪ್ರಕಾರ ಶೇ.100 ಸೀಟುಗಳಿಗೆ ಅನುಮತಿ ನೀಡಲಾಗಿದೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಚಿತ್ರಮಂದಿರ ಮಾಲೀಕರು ರಾಜ್ಯದ ಈ ಕ್ರಮಕ್ಕೆ ಸಂತಸವನ್ನೂ ವ್ಯಕ್ತಪಡಿಸಿದ್ದರು. ಆದರೆ ಇದು ಕೇಂದ್ರ ಸರಕಾರದ ಮಾರ್ಗಸೂಚಿಗೆ ವಿರುದ್ಧವಾಗಿದ್ದಾರೆ, ಸರಕಾರದ ನಿಲುವಿಗೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ತಮಿಳುನಾಡು ಚಲನಚಿತ್ರ ವಾಣಿಜ್ಯ ಮಂಡಳಿಗೆ ವೈದ್ಯರೊಬ್ಬರು ಭಾವುಕವಾಗಿ ಪತ್ರ ಬರೆದಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.  

ಚಿತ್ರಕಥೆ ಲೀಕ್‌ ಆದ ನಂತರ ರಿಲೀಸ್‌ ದಿನಾಂಕ ರಿವೀಲ್ ಮಾಡಿದ ವಿಜಯ್? 

ಪತ್ರದಲ್ಲಿ ಏನಿದೆ?
ಪುದುಚೆರಿ ವೈದ್ಯರಾದ ಅರವಿಂದ್ ಶ್ರೀನಿವಾಸ್ ಈ ವಿಚಾರದ ಬಗ್ಗೆ ನಟ ವಿಜಯ್ ದಳಪತಿ ಪತ್ರ ಬರೆಯುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 'ಕೊರೋನಾ ಪ್ಯಾಂಡಮಿಕ್‌ನಿಂದ ಸಾವಿರಾರು ವೈದ್ಯರು, ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರು ದಣಿದಿದ್ದಾರೆ. ನಾವು ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ಅಥವಾ ಗೌರವ ಬೇಕಿಲ್ಲ. ಆದರೆ ಜನರಿಗೆ ಮೋಜು ಮಸ್ತಿಗಾಗಿ ತೆಗೆದುಕೊಂಡಿರುವ ಈ ನಿರ್ಧಾರ ಇನ್ನೊಬ್ಬರನ್ನು ಬಲಿ ತೆಗೆದುಕೊಳ್ಳುತ್ತದೆ, ' ಎಂದು ಹೇಳುವ ಪತ್ರ ಶೇರ್ ಮಾಡಿದ್ದಾರೆ. ಆ ಮೂಲಕ ಕಳೆದ 10 ತಿಂಗಳಿಂದ ವೈದ್ಯ ಸಿಬ್ಬಂದಿಯನ್ನು ಕೊರೋನಾ ವಾರಿಯರ್ಸ್ ಎಂದು ಕರೆದು, ಗೌರವಿಸಲಾಗುತ್ತಿದೆ. ಆದರೆ, ಅವರ ಕಷ್ಟ ಕಡಿಮೆ ಮಾಡಲು ಜನರು ಜಾಗೃತರಾಗಿರಬೇಕೆಂಬುದನ್ನು ಮನಗಾಣಿಸಲು ವೈದ್ಯರು ಯತ್ನಿಸಿದ್ದಾರೆ. 

ರಿಲೀಸ್‌ ಆಗುವ ಮುನ್ನವೇ ಮಾಸ್ಟರ್ ಚಿತ್ರದ ಕಥೆ ಲೀಕ್? 

ಅರವಿಂದ್ ಪತ್ರ: 
ಡಿಯರ್ ವಿಜಯ್ ಸರ್, ಸಿಂಬು ಸರ್ ಹಾಗೂ ತಮಿಳು ನಾಡು ಸರ್ಕಾರ. 
ನಾವು  ಸುಸ್ತಾಗಿದ್ದೀವಿ, ಎಲ್ಲರೂ ದಣಿದಿದ್ದಾರೆ. ಆಗಿರುವ ತೊಂದರೆಯಿಂದ ಎಲ್ಲವನ್ನು ಸರಿ ಮಾಡಬೇಕೆಂದು ವೈದ್ಯರು, ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರು ಎಡೆಬಿಡದೇ ಶ್ರಮಿಸುತ್ತಿದ್ದಾರೆ. ಇದರಿಂದ ಆಗುವ ಪರಿಣಾಮ ಗೊತ್ತಿದ್ದರೂ ನಾವೆಲ್ಲರೂ ಹೆದರದೇ ಕೆಲಸ ಮಾಡುತ್ತಲೇ ಇದ್ದೇವೆ. ನಾವು ಮಾಡಿರುವ ಕೆಲಸವನ್ನು ಹೊಗಳಿ ಕೊಳ್ಳುತ್ತಿಲ್ಲ. ಆದರಿದು ಸತ್ಯ. ನಮ್ಮೆದುರು ಕ್ಯಾಮೆರಾ ಇಲ್ಲ, ನಾವು ಯಾವುದೇ ಸ್ಟಂಟ್‌ ಮಾಡಲಾಗದು. ಹೀರೋಗಳಂತೂ ಅಲ್ವೇ ಅಲ್ಲ. ಆದರೆ ಉಸಿರಾಡಲು ನಮಗಾದರೂ ಸಮಯ ಬೇಕು ಅಲ್ವಾ? ಯಾರೊಬ್ಬರ ಮೋಜಿಗಾಗಿ ನಾವು ಬಲಿಯಾಗುವುದು ಎಷ್ಟು ಸರಿ? ಸೋಂಕು ಕಡಿಯಾಗಿಲ್ಲ. ಈಗಲೂ ಜನರು ಆ ಸೋಂಕಿಗೆ ಸಾಯುತ್ತಿದ್ದಾರೆ. ಈ ಸಮಯದಲ್ಲಿ ಚಿತ್ರಮಂದಿರಗಳಿಗೆ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೆ, ಅದು ಆತ್ಮಹತ್ಯೆ ಯತ್ನಕ್ಕೆ ಸಮ.  ಜೀವಕ್ಕೆ ಹದರುವವರು ಖಂಡಿತವಾಗಿಯೂ ಜನ ತುಂಬಿರುವ ಚಿತ್ರಮಂದಿರಕ್ಕೆ ಬರುವುದಿಲ್ಲ. ಮಸ್ತಿಗಾಗಿ ಹಣ ಕೊಟ್ಟು ಪ್ರಾಣ ಕಳೆದುಕೊಳ್ಳುವುದಿಲ್ಲ. ದಯವಿಟ್ಟು ನಮ್ಮ ಬಗ್ಗೆಯೂ ಚಿಂತಿಸಿ. ಇದರ ಬಗ್ಗೆ ನಾನು ವೈಜ್ಞಾನಿಕವಾಗಿ ವಿವರಣೆ ನೀಡಲು ಬಯಸುತ್ತೇನೆ. ಇಂತಿ ನಿಮ್ಮ ದಣಿದಿರುವ ಡಾಕ್ಟರ್,' ಎಂದು ಅರವಿಂದ್ ಪತ್ರ ಮುಸಿದ್ದಾರೆ. ವೈದ್ಯ ಲೋಕದ ಕಷ್ಟ ಕಾರ್ಪಣ್ಯವನ್ನು ತಮ್ಮದೇ ದಾಟಿಯಲ್ಲಿ ವಿವರಿಸಿದ್ದು ಎಲ್ಲ ಮನಕ್ಕೂ ಮುಟ್ಟುವಂತಿದೆ.

ಜನವರಿ 13ರಂದು ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ರಿಲೀಸ್ ಆಗುತ್ತಿದೆ. ವೈದ್ಯ ಅರವಿಂದ್ ಬರೆದಿರುವ ಪತ್ರದಿಂದ ವಿಜಯ್ ನಿರ್ಧಾರ ಬದಲಾಯಿಸುತ್ತಾರೆ ಎಂದು ನೆಟ್ಟಿಗರು ಆಶಿಸುತ್ತಿದ್ದಾರೆ.

ದೇಶದಲ್ಲೇ ಮೊದಲ ಬಾರಿ ಸಿನಿಮಾ ಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿದ್ದ ತಮಿಳು ನಾಡಿಗೆ ಹಿನ್ನಡೆಯಾಗಿದೆ. ಈ ಅನುಮತಿ ಕೇಂದ್ರ ಸರಕಾರದ ಮಾರ್ಗಸೂಚಿಗೆ ವಿರೋಧವಾಗಿದ್ದು, ಹಿಂಪಡೆಯುವಂತೆ ಗೃಹ ಸಚಿವಾಲಯ ತಮಿಳು ನಾಡು ಸರಕಾರಕ್ಕೆ ಪತ್ರ ಬರೆದಿದೆ. ಈ ಕೊರೋನಾ ಮಾರ್ಗಸೂಚಿ ಜ.31ರವರೆಗೂ ವಿಸ್ತರಣೆಯಾಗಿದೆ.