Asianet Suvarna News Asianet Suvarna News

ಮನೆಯೊಳಗೆ ಬಿಟ್ಕೊಂಡ ಮೋನಾಗೆ ಕಿವಿ ಊದಿದ್ರು ಮಿಥುನ್ ಚಕ್ರವರ್ತಿ; ಬೋನಿ ಕಪೂರ್‌ಗೆ ರಾಕಿ ಕಟ್ಟಿದ್ರು ಶ್ರೀದೇವಿ

ಬೋನಿ ಕಪೂರ್ ತಮ್ಮ, ನಟ ಅನಿಲ್ ಕಪೂರ್ ನಾಯಕತ್ವದ 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ನಾಯಕಿಯಾಗಿ ಶ್ರೀದೇವಿ ಅವರನ್ನು ಆಯ್ಕೆ ಮಾಡಿದ್ದರು ಬೋನಿ ಕಪೂರ್. ಈ ಚಿತ್ರದ ಶೂಟಿಂಗ್ ವೇಳೆ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ನಡುವೆ ಕಷ್ಟಸುಖಗಳ ಹಂಚುವಿಕೆ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ನಟ ಮಿಥುನ್ ಚಕ್ರವರ್ತಿ ಬೋನಿ ಕಪೂರ್ ಪತ್ನಿ ಮೋನಾ ಕಪೂರ್ ಅವರಿಗೆ ಹೇಳಿದ್ದರಂತೆ. 

Producer Boney Kapoor married actress Sridevi in 1996 after Mr India Movie srb
Author
First Published Nov 12, 2023, 4:39 PM IST

ಬಾಲಿವುಡ್ ನಿರ್ಮಾಪಕ, ದಿವಂಗತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ನಿನ್ನೆ (11 ನವೆಂಬರ್) ತಮ್ಮ 68ನೇ ಹುಟ್ಟುಹಬ್ಬವನ್ನು ಆಯ್ಕೆಮಾಡಿಕೊಂಡರು. ಈ ಸಮಯದಲ್ಲಿ ಸಹಜವಾಗಿಯೇ ಅವರ ವೃತ್ತಿ ಜೀವನದ ಜತೆ ವೈಯಕ್ತಿಕ ಜೀವನದ ಬಗ್ಗೆ ಕೂಡ ಸುದ್ದಿ ಮುನ್ನೆಲೆಗೆ ಬಂದಿದೆ. ಹಾಗಿದ್ದರೆ ಬೋನಿ ಕಪೂರ್ ವೈಯಕ್ತಿಕವಾಗಿ ಸುದ್ದಿಯಾಗುವಂತಹ ಸಂಗತಿ ಏನು ನಡೆದಿದೆ ಅವರ ಜೀವನದಲ್ಲಿ? ಅದರಲ್ಲೆಷ್ಟು ಸತ್ಯ ಇದೆ, ಮಿಥ್ಯ ಇದೆ? ಇದಕ್ಕೆಲ್ಲಾ ಉತ್ತರ ಹುಡುಕಹೊರಟರೆ ಸಾಕಷ್ಟು ಸಂಗತಿಗಳು ಸಿಗತೊಡಗುತ್ತವೆ. 

ಬಾಲಿವುಡ್ ಅಂದರೆ ಹಿಂದಿ ಹಾಗು ತೆಲುಗು ಸಿನಿಮಾ ನಿರ್ಮಾಪಕರಾದ ಬೋನಿ ಕಪೂರ್ ಅವರು ಸುರಿಂದರ್ ಹಾಗೂ ನಿರ್ಮಲಾ ಕಪೂರ್ ಮಗ. ಅವರಿಗೆ ನಟ ಅನಿಲ್ ಕಪೂರ್ ತಮ್ಮ. 1983 ರಲ್ಲಿ ಬೋನಿ ಕಪೂರ್ ಅವರಿಗೆ ಮೋನಾ ಕಪೂರ್ ಜತೆ ಮದುವೆಯಾಗಿತ್ತು. ಬೋನಿ ಕಪೂರ್-ಮೋನಾ ಕಪೂರ್ ಜೋಡಿಗೆ ಅರ್ಜುನ್ ಕಪೂರ್ ಹಾಗೂ ಅನ್ಶುಲಾ ಕಪೂರ್ ಮಕ್ಕಳಿದ್ದರು. ಆದರೆ, ಮೋನಾ ಕಪೂರ್ ಅವರಿಗೆ ಬೋನಿ ಕಪೂರ್ ಅವರು 1996ರಲ್ಲಿ ವಿಚ್ಛೇದನ ನೀಡಿ ನಟಿ ಶ್ರೀದೇವಿಯನ್ನು ಪ್ರೀತಿಸಿ ಮದುವೆಯಾದರು. ಈ ಮೂಲಕ ಮೋನಾ-ಬೋನಿ ಮದುವೆ ಮುರಿದು ಬಿತ್ತು. 

ಬೋನಿ ಕಪೂರ್ ತಮ್ಮ, ನಟ ಅನಿಲ್ ಕಪೂರ್ ನಾಯಕತ್ವದ 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ನಾಯಕಿಯಾಗಿ ಶ್ರೀದೇವಿ ಅವರನ್ನು ಆಯ್ಕೆ ಮಾಡಿದ್ದರು ಬೋನಿ ಕಪೂರ್. ಈ ಚಿತ್ರದ ಶೂಟಿಂಗ್ ವೇಳೆ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ನಡುವೆ ಕಷ್ಟಸುಖಗಳ ಹಂಚುವಿಕೆ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ನಟ ಮಿಥುನ್ ಚಕ್ರವರ್ತಿ ಬೋನಿ ಕಪೂರ್ ಪತ್ನಿ ಮೋನಾ ಕಪೂರ್ ಅವರಿಗೆ ಹೇಳಿದ್ದರಂತೆ. ಆದರೆ, ಅದೇ ವೇಳೆ ಶ್ರೀದೇವಿ ಬೋನಿ ಕಪೂರ್ ಅವರಿಗೆ ರಾಕಿ ಕಟ್ಟಿದ್ದನ್ನು ಕಂಡ ಮೋನಾ ಕಪೂರ್ ಅವರಿಬ್ಬರ ಸಂಬಂಧದ ಬಗ್ಗೆ ತಮಗಿದ್ದ ಸಂಶಯವನ್ನು ದೂರ ತಳ್ಳಿದ್ದರಂತೆ. 

ಫ್ರೆಂಡ್ ಅಂದ್ರೆ ಕಾರ್ತಿಕ್ ಅಂದ್ರು ಸಂಗೀತಾ, ನಾಚಿ ನೀರಾದ್ರು ಬಿಗ್ ಬಾಸ್ ಮನೆ ಹ್ಯಾಂಡ್‌ಸಮ್ ಬಾಯ್!

ಆದರೆ, ಮಿಸ್ಟರ್ ಇಂಡಿಯಾ ಚಿತ್ರದ ಬಳಿಕ ಶ್ರೀದೇವಿ-ಬೋನಿ ಕಪೂರ್ ಸಂಬಂಧ ಗಾಢವಾಗುತ್ತ ಬಂದು ಕೊನೆಗೆ, ಬೋನಿ ಕಪೂರ್ ತಮ್ಮ ಹೆಂಡತಿ ಮೋನಾಗೆ ಹೇಳಿ ವಿಚ್ಛೇದನ ಪಡೆದರಂತೆ. ಬಳಿಕ, ಶಿರಡಿ ದೇವಸ್ಥಾನದಲ್ಲಿ ಶ್ರೀದೇವಿ ಜತೆ ಮದುವೆ ಮಾಡಿಕೊಂಡರು ಎನ್ನಲಾಗಿದೆ. ಶ್ರೀದೇವಿ ಜತೆ ಸಂಸಾರ ಮಾಡುತ್ತ ಬೋನಿ ಕಫುರ್ ಅವರಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಮಕ್ಕಳಾಗಿದ್ದಾರೆ. ಈಗ ಜಾಹ್ನವಿ ಬಾಲಿವುಡ್‌ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. 

ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳಿಗೆ ಭಾರೀ ತಾರತಮ್ಯ; ಸಿಡಿದೆದ್ದ 'ಗರಡಿ' ಬಿಸಿ ಪಾಟೀಲ್

ನಿರ್ಮಾಪಕ ಬೋನಿ ಕಪೂರ್ ಅವರ ಇಬ್ಬರು ಹೆಂಡತಿಯರೂ ಈಗ ಇಲ್ಲ. ನಟಿ ಶ್ರೀದೇವಿ ಅವರು 2018ರಲ್ಲಿ ನಿಧನ ಹೊಂದಿದ್ದರೆ ಮೊದಲ ಹೆಂಡತಿ ಮೋನಾ ಕಪೂರ್ ಅವರು 2012ರಲ್ಲಿಯೇ ತೀರಿಕೊಂಡಿದ್ದಾರೆ. ಈಗ ಮತ್ತೆ ಬೋನಿ ಕಪೂರ್ ಹೆಂಡತಿಯಿಲ್ಲದ ಒಬ್ಬಂಟಿಯೇ. ಆದರೆ, ಹೆಂಡತಿಯಿದ್ದೂ ನಟಿಯ ಪ್ರೇಮಪಾಶಕ್ಕೆ ಸಿಲುಕಿ, ಹೆಂಡತಿಗೆ ಡೈವೋರ್ಸ್‌ ಮಾಡಿ ನಟಿ ಶ್ರೀದೇವಿಯವರನ್ನು ಮದುವೆಯಾಗುವ ಮೂಲಕ ಆ ಕಾಲದಲ್ಲಿ ಬೋನಿ ಕಪೂರ್ ಬಹಳಷ್ಟು ಸುದ್ದಿಯಾಗಿದ್ದರು. ಅದೇ ಹಳೇ ಸುದ್ದಿ ಸಮಯಕ್ಕೆ ತಕ್ಕಂತೆ ಮತ್ತೆಮತ್ತೆ ನೆನಪಾಗುತ್ತದೆ. 

Follow Us:
Download App:
  • android
  • ios