Asianet Suvarna News Asianet Suvarna News

ಫ್ರೆಂಡ್ ಅಂದ್ರೆ ಕಾರ್ತಿಕ್ ಅಂದ್ರು ಸಂಗೀತಾ, ನಾಚಿ ನೀರಾದ್ರು ಬಿಗ್ ಬಾಸ್ ಮನೆ ಹ್ಯಾಂಡ್‌ಸಮ್ ಬಾಯ್!

ಬಿಗ್ ಬಾಸ್ ಮನೆಯ ಸದಸ್ಯರಲ್ಲಿ ಅತಿ ಹೆಚ್ಚು ಗಮನಸೆಳೆಯುತ್ತಿರುವ ಜೋಡಿ ಎಂದರೆ ಅದು ಸಂಗೀತಾ ಮತ್ತು ಕಾರ್ತಿಕ್. ಸಂಗೀತಾ ಅವರಿಗೆ ನೆಟ್ಟಿಗರು 'ಕರ್ನಾಟಕ ಕ್ರಶ್' ಎಂದು ಬಿರುದು ನೀಡಿದ್ದರೆ, ಕಾರ್ತಿಕ್ ಅವರಿಗೆ ಸುರಸುಂದರಾಂಗ, ಹ್ಯಾಂಡ್‌ಸಮ್ ಬಾಯ್ ಮುಂತಾದ ಬಿರುದು ನೀಡಿ ಕಾಮೆಂಟ್ ಮಾಡುತ್ತಿದ್ದಾರೆ. 

Sangeetha Sringeri says Friend means Karthik Mahesh in Bigg Boss kannada season 10 srb
Author
First Published Nov 12, 2023, 1:03 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ಗೇಮ್ ಶೋ 5ನೇ ವಾರ ಮುಗಿಸಿ ಮುನ್ನುಗ್ಗುವ ಹಂತದಲ್ಲಿದೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಇಂದು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿರುವ 'ಸೂಪರ್ ಸಂಡೆ ವಿತ್ ಸುದೀಪ' ದಿನ ಸಂಚಿಕೆಯ ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಜತೆಗೆ, 'ಪ್ರತಿಯೊಬ್ಬರೂ ಒಂದೊಂದು ಪಟಾಕಿ ತೆಗೆದುಕೊಂಡು ಅದನ್ನು ತಮ್ಮ ಇಷ್ಟದ ವ್ಯಕ್ತಿಗೆ ಡೆಡಿಕೇಟ್ ಮಾಡಬೇಕು' ಎಂದಿದ್ದಾರೆ. 

ಈ ವೇಳೆ ಮಾತನಾಡಿದ ಸುದೀಪ್ ಕಾರ್ತಿಕ್ ಮಹೇಶ್ ಬಳಿ 'ಫ್ರಂಡ್ಸ್ ಅಂದ್ರೆ ಏನು?' ಅಂತ ಕೇಳಿದ್ದಾರೆ. ಸ್ವತಃ ತಾವೇ ಉದಾಹರಣೆಯನ್ನೂ ನೀಡಿದ್ದಾರೆ. ಸುದೀಪ್ ಅವರು 'ಫ್ರೆಂಡ್ ಅಂದ್ರೆ, ಅದೇ ನನ್ ಫ್ರಂಡ್ ಮದ್ವೆ ಅಂತ ನಾವೆಲ್ಲ ಹೋಗ್ತೀವಲ್ಲಾ.. ಅದಾ?' ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ 'ಬಿಜಲಿ ಇಲ್ದೇ ದೀಪಾವಳಿ ಪೂರ್ಣ ಆಗಲ್ಲ ಸರ್' ಎಂದಿದ್ದಾರೆ. ತಕ್ಷಣವೇ ಸಂಗೀತಾ ಕಡೆ ತಿರುಗಿದ ಕಿಚ್ಚ ಸುದೀಪ್ 'ಸಂಗೀತಾ ಅವ್ರೇ, ನಿಮ್ಮ ಪ್ರಕಾರ ಫ್ರೆಂಡ್ ಅಂದ್ರೆ ಏನು' ಎಂದು ಕೇಳಲು 'ಫ್ರೆಂಡ್ ಅಂದ್ರೆ ಕಾರ್ತಿಕ್' ಎಂದಿದ್ದಾರೆ. ತಕ್ಷಣವೇ ಸುದೀಪ್ 'ಗ್ರೇಟ್ ಫ್ರೆಂಡ್, ಗ್ರೇಟ್ ಲವ್' ಎಂಬಂತೆ ರಿಯಾಕ್ಷನ್ ಕೊಟ್ಟಿದ್ದಾರೆ. ಅದೇ ವೇಳೆ ಸಂಗೀತಾ ಮಾತು ಕೇಳಿದ ಕಾರ್ತಿಕ್ ನಾಚಿ ನೀರಾಗಿದ್ದಾರೆ. 

ಸಂಗೀತಾ ಮುಖದಲ್ಲಿ ಮಾತ್ರ ನಗು ಕಾಣ್ತಾ ಇದೆ, ಪ್ರತಾಪ್‌ಗೆ ಒಳ್ಳೇದಾಗಲಿ; ನೆಟ್ಟಿಗರ ಮಾತಿನ ಮರ್ಮವೇನು?

ಬಿಗ್ ಬಾಸ್ ಮನೆಯ ಸದಸ್ಯರಲ್ಲಿ ಅತಿ ಹೆಚ್ಚು ಗಮನಸೆಳೆಯುತ್ತಿರುವ ಜೋಡಿ ಎಂದರೆ ಅದು ಸಂಗೀತಾ ಮತ್ತು ಕಾರ್ತಿಕ್. ಸಂಗೀತಾ ಅವರಿಗೆ ನೆಟ್ಟಿಗರು 'ಕರ್ನಾಟಕ ಕ್ರಶ್' ಎಂದು ಬಿರುದು ನೀಡಿದ್ದರೆ, ಕಾರ್ತಿಕ್ ಅವರಿಗೆ ಸುರಸುಂದರಾಂಗ, ಹ್ಯಾಂಡ್‌ಸಮ್ ಬಾಯ್ ಮುಂತಾದ ಬಿರುದು ನೀಡಿ ಕಾಮೆಂಟ್ ಮಾಡುತ್ತಿದ್ದಾರೆ. ಕಾರ್ತಿಕ್-ಸಂಗೀತಾ ಜೋಡಿ ಹಲವರು 'ಜೋಡಿ ಅಂದ್ರೆ ಹೀಗಿರ್ಬೇಕು' ಅಂತಿದ್ದರೆ ಹಲವರು ಅವರಿಬ್ಬರ ಒಡನಾಟ ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆ. 

ಬೆಳ್ಳಿತೆರೆ ಮೇಲೆ ಬೆಳಗುತ್ತಿದೆ ಮತ್ತೊಂದು ದೇಸಿ ಕಥೆ! ಯೋಗರಾಜ್ ಭಟ್-ಬಿ.ಸಿ. ಪಾಟೀಲ್ 'ಗರಡಿ' ಹೇಗಿದೆ?

ಒಟ್ಟಿನಲ್ಲಿ, ಎರಡು ಕಾರಣಗಳಿಗೆ ಇಂದಿನ ಸಂಚಿಕೆ ತೀವ್ರು ಕುತೂಹಲ ಕೆರಳಿಸುತ್ತಿದೆ. ವರ್ತೂರು ಸಂತೋಷ್ ಅವರು ಸಾಕಷ್ಟು ಓಟು ಪಡೆದಿದ್ದರೂ ತಾವು ಬಿಗ್ ಬಾಸ್ ಮನೆಯಿಂದ ನಿರ್ಗಮಿಸಲು ಬಯಸುವುದಾಗಿ ಹೇಳಿಕೊಂಡು ಅತ್ತಿದ್ದಾರೆ. ಹೀಗಾಗಿ, ಈ ಬಾರಿ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದು ತೀವ್ರ ಚರ್ಚೆಯಾಗುತ್ತಿದೆ. ನೀತು, ಈಶಾನಿ ಅಥವಾ ವರ್ತೂರು ಸಂತೋಷ್ ಈ ಮೂವರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಅದನ್ನು ತಿಳಿಯಲು ಇಂದಿನ ಸಂಚಿಕೆ, ಅಂದರೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ರಾತ್ರಿ 9.00 ಗಂಟೆಯ ಸಂಚಿಕೆ ನೋಡಬೇಕು.

Follow Us:
Download App:
  • android
  • ios