Asianet Suvarna News Asianet Suvarna News

ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳಿಗೆ ಭಾರೀ ತಾರತಮ್ಯ; ಸಿಡಿದೆದ್ದ 'ಗರಡಿ' ಬಿಸಿ ಪಾಟೀಲ್

ನಮ್ಮ ಪ್ರಾದೇಶಿಕ ಚಲನಚಿತ್ರಗಳಿಗೆ ಹಂಚಿಕೆ ಹಾಗೂ ಪ್ರದರ್ಶನಗಳ ವಿಷಯದಲ್ಲಿ ಸಮಾನ ನ್ಯಾಯ ದೊರಕಿಸಿಕೊಡುವುದು ತುಂಬಾ ಮುಖ್ಯವಾಗಿದೆ. ವಿಶೇಷವಾಗಿ ಇಂತಹ ಪರಭಾಷ ಚಿತ್ರಗಳ ಬಿಡುಗಡೆಗಳೊಂದಿಗೆ ಸ್ಪರ್ಧಿಸುವಾಗ. ಹಾಗಾಗಿ ತಾವುಗಳು ಈ ಕೂಡಲೇ ಮಧ್ಯೆ ಪ್ರವೇಶಿಸಿ ಈ ವಿಷಯವನ್ನು ಕೂಡಲೇ ಪರಿಶೀಲಿಸಿ ಪರಿಹರಿಸಬೇಕೆಂದು ನಾನು ವಿನಂತಿಸುತ್ತೇನೆ. 

Lack of prime time to kannada films Garadi film producer BC Patil complaint to film chamber against multiplexes srb
Author
First Published Nov 11, 2023, 4:34 PM IST

ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಡಿ ಸಿನಿಮಾ ಶೋಗಳನ್ನು ಕಡಿಮೆ ಮಾಡುವ ಬಗ್ಗೆ ಹುನ್ನಾರ ನಡೆದಿದೆ ಎನ್ನಲಾಗಿದೆ. ನಾಳೆ, ಅಂದರೆ 12 ನವೆಂಬರ್ 2023ರಂದು ಪರಭಾಷಾ ಚಿತ್ರವೊಂದು ಕರ್ನಾಟಕದಲ್ಲಿ ತೆರೆಕಾಣಲಿದ್ದು, ಈ ಕಾರಣಕ್ಕೆ ಕರ್ನಾಟಕದ ಎಲ್ಲಾ ಮಲ್ಟಿಫ್ಲೆಕ್ಸ್‌ಗಳಲ್ಲಿ ಬಹುತಾರಾಗಣದ ಕನ್ನಡ ಚಿತ್ರ  'ಗರಡಿ' ಶೋವನ್ನು ಕಡಿತಗೊಳಿಸುವ ಬಗ್ಗೆ ಸಂಚು ನಡೆಯುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಗರಡಿ ನಿರ್ಮಾಪಕರಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದ್ದು, ಸದ್ಯ ಅದು ವೈರಲ್ ಆಗುತ್ತಿದೆ. ಪತ್ರದ ಬರಹ ಹೀಗಿದೆ..

'ಶ್ರೀ ಎಂ.ಎನ್. ಸುರೇಶ್ ಅಧ್ಯಕ್ಷರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಂ.28, ಪ್ರೈ ಗೌಂಡ್, ಕ್ರೆಸೆಂಟ್ ರೋಡ್ Joras-560 001
ವಿಷಯ: ಭಾನುವಾರ ತೆರೆಕಾಣಲಿರುವ ಪರಭಾಷಾ ಚಲನಚಿತ್ರಕ್ಕಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಗರಡಿ' ಚಲನಚಿತ್ರ ಪ್ರದರ್ಶನಗಳನ್ನು ಕಡಿಮೆ ಮಾಡುತ್ತಿರುವ ಬಗ್ಗೆ 

ಮಾನ್ಯರೇ, ನಮ್ಮ ನಿರ್ಮಾಣ ಸಂಸ್ಥೆ ಅಡಿಯಲ್ಲಿ, ಕನ್ನಡದ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ನಿರ್ದೇಶಿಸಿರುವ 'ಗರಡಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌, ಬಿ.ಸಿ. ಪಾಟೀಲ್, ಯಶಸ್ ಸೂರ್ಯ, ಸೋನಲ್ ಮಂತೆರೋ ಹಾಗೂ ರವಿಶಂಕರ್ ಸೇರಿದಂತೆ ಇನ್ನೂ ಅನೇಕ ಖ್ಯಾತ ನಾಮರು ನಟಿಸಿದ್ದಾರೆ. ಈ ಚಿತ್ರ ನವೆಂಬರ್ 10ರಂದು (10 ನವೆಂಬರ್ 2023) ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಇಂತಹ ಸಂದರ್ಭದಲ್ಲಿ, ದೀಪಾವಳಿ ಹಬ್ಬದ ಪ್ರಯುಕ್ತ., ಇದೇ ಭಾನುವಾರ ಪರಭಾಷೆ ಚಿತ್ರವೊಂದು ರಾಜ್ಯದೆಲ್ಲೆಡೆ ತೆರೆಕಾಣಲು ಸಜ್ಜಾಗಿದ್ದು, 
ಮಲ್ಟಿಫ್ಲೆಕ್ಸ್‌ಗಳಲ್ಲಿ ನಮ್ಮ ಗರಡಿ' ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಗಣೀಯವಾಗಿ ತಗ್ಗಿಸುವ ಹುನ್ನಾರ ನಡೆಸಲಾಗುತ್ತಿದೆ. ಪ್ರೇಕ್ಷಕರ ಮೆಚ್ಚುಗೆ ಪಡೆದ ಅದ್ಧೂರಿ ತಾರಾಗಣವಿರುವ ಯಶಸ್ವಿ, ಚಿತ್ರವೊಂದಕ್ಕೆ ಈ ಪರಿಸ್ಥಿತಿ ಎದುರಾಗುತ್ತಿರುವುದು ನಮ್ಮ ಚಿತ್ರತಂಡಕ್ಕೆ ಮಾತ್ರವಲ್ಲದೆ ಇಡೀ ಚಿತ್ರೋದ್ಯಮದ ಪಾಲಿಗೆ ಇದೊಂದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

ರಾಕಿ ಬಗ್ಗೆ ಇಲ್ಲಿದೆ ಮತ್ತೊಂದು Exclusive: ಹೊಸ ಹೆಜ್ಜೆಗೆ ಮುನ್ನುಡಿ ಬರೆದ ಯಶ್!

ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ವ್ಯಾವಹಾರಿಕ ಗುರಿ ಹಾಗೂ ಚಿತ್ರರಂಗಕ್ಕೆ ಅವುಗಳ ಕೊಡುಗೆಗಳನ್ನು ನಾನು ಗೌರವಿಸುತ್ತೇನೆ. ಆದರೆ, ಪರಭಾಷಾ ಚಿತ್ರಗಳಿಗಾಗಿ ನಮ್ಮ 'ಗರಡಿ' ಚಿತ್ರದಂತಹ ಯಶಸ್ವಿ ಪ್ರಾದೇಶಿಕ ಚಲನಚಿತ್ರಗಳ ವಿರುದ್ಧ ಅವುಗಳು ಅನುಸರಿಸುತ್ತಿರುವ ಈ ಇಬ್ಬಂಧಿ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಒಂದು ವೇಳೆ ಬರುವ ಭಾನುವಾರ ನಮ್ಮ ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಮಲ್ಟಿಫ್ಲೆಕ್ಸ್‌ಗಳು ಕಡಿತಗೊಳಿಸಿದರೆ ಅದು ನಮ್ಮ ಚಿತ್ರದ ವ್ಯಾಪ್ತಿ ಹಾಗೂ ಯಶಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಷ್ಟೇ ಅಲ್ಲದೆ ಕನ್ನಡ ಅಭಿಮಾನಿಗಳ ಭಾವನೆಗಳನ್ನು ಕೆರಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ನಾನು ಹುಟ್ಟಿದ್ದೇ ಪರಮಾಶ್ಚರ್ಯ, ತಮ್ಮ ಬರ್ತ್ ಸೀಕ್ರೆಟ್ ರಿವೀಲ್ ಮಾಡಿದ ಕ್ರೇಜಿ ಸ್ಟಾರ್!

ನಮ್ಮ ಪ್ರಾದೇಶಿಕ ಚಲನಚಿತ್ರಗಳಿಗೆ ಹಂಚಿಕೆ ಹಾಗೂ ಪ್ರದರ್ಶನಗಳ ವಿಷಯದಲ್ಲಿ ಸಮಾನ ನ್ಯಾಯ ದೊರಕಿಸಿಕೊಡುವುದು ತುಂಬಾ ಮುಖ್ಯವಾಗಿದೆ. ವಿಶೇಷವಾಗಿ ಇಂತಹ ಪರಭಾಷ ಚಿತ್ರಗಳ ಬಿಡುಗಡೆಗಳೊಂದಿಗೆ ಸ್ಪರ್ಧಿಸುವಾಗ. ಹಾಗಾಗಿ ತಾವುಗಳು ಈ ಕೂಡಲೇ ಮಧ್ಯೆ ಪ್ರವೇಶಿಸಿ ಈ ವಿಷಯವನ್ನು ಕೂಡಲೇ ಪರಿಶೀಲಿಸಿ ಪರಿಹರಿಸಬೇಕೆಂದು ನಾನು ವಿನಂತಿಸುತ್ತೇನೆ. ಮಲ್ಟಿಫೆಕ್ಸ್‌ಗಳಲ್ಲಿ 'ಗರಡಿ'ಗೆ ನ್ಯಾಯಯುತವಾದ ಪ್ರಾತಿನಿಧ್ಯ ಮತ್ತು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನೀವು ಈ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ನಂಬುತ್ತೇನೆ.'ಎಂದು ಬರೆಯಲಾಗಿದೆ.

Lack of prime time to kannada films Garadi film producer BC Patil complaint to film chamber against multiplexes srb

Follow Us:
Download App:
  • android
  • ios