'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್‌ಗೆ ಜೋಡಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ ಅಮಲಾ ಪೌಲ್‌ ವೈಯಕ್ತಿಕ ಜೀವನದಲ್ಲಿ ದಿನೇ ದಿನೇ ಹೊಸದೊಂದು ಗಾಸಿಪ್‌ ಕೇಳಿ ಬರುತ್ತಿದೆ. 

ಕದ್ದುಮುಚ್ಚಿ ಗಾಯಕ ಭವೀಂದ್ರ ಸಿಂಗ್‌ ಜೊತೆ ಓಡಾಡುತ್ತಿದ್ದ ಅಮಲಾ ಕೆಲ ತಿಂಗಳುಗಳ ಹಿಂದೆ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ಈ ಫೋಟೋಗಳನ್ನು ಸ್ವತಃ ಭವೀಂದರ್‌ ಸಿಂಗ್‌ ಶೇರ್ ಮಾಡಿಕೊಂಡು ವೈರಲ್‌ ಆಗುತ್ತಿದ್ದಂತೆ ಡಿಲಿಟ್‌ ಮಾಡಿದ್ದಾರೆ.  ಇಷ್ಟೆಲ್ಲಾ ಅವಾಂತರ ಕಂಡ ನಂತರ ಅಮಲಾ ಮಾಜಿ ಪತಿ ವಿಜಯ್ ಅವರ ತಂದೆ ಅಜಗಪ್ಪನ್  ಪ್ರತಿಕ್ರಿಯೆ ನೀಡಿದ್ದಾರೆ.

ಕದ್ದುಮುಚ್ಚಿ ಮದುವೆಯಾದ ಕನ್ನಡದ ನಟಿ; ವೈರಲ್‌ ಆಯ್ತು ಅಂತ ಫೋಟೋ ಡಿಲಿಟ್!

ನಿರ್ದೇಶಕ ವಿಜಯ್ ಜೊತೆ ಹಸೆಮಣೆ ಏರಿದ ನಂತರ ಅಮಲಾ ಚಿತ್ರರಂಗಕ್ಕೆ ಗುಡ್‌ ಬೈ ಹೇಳಬೇಕೆಂದು ಅತ್ತೆ -ಮಾವ ನಿರ್ಧರಿಸಿದ್ದರು ಅದರೆ ಅದನ್ನು ನಿರಾಕರಿಸಿ ಅಮಲಾ ಅವರ ವಿರುದ್ಧ ನಿಂತ ಕಾರಣವೇ ಅವರೊಟ್ಟಿಗೆ  ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಲಿಲ್ಲ.

ಅಪ್ಪನ ಸಾವು, ಅಮ್ಮನ ನೋವು ನೋಡಿ ಕಣ್ಣೀರಿಟ್ಟ ಖ್ಯಾತ ನಟಿ!

'ಅಮಲಾಳನ್ನು ಮದುವೆಯಾಗಿ  ನನ್ನ ಮಗನ  ಜೀವನವೇ ಹಾಳಾಯಿತು. ಮದುವೆಯಾದ ನಂತರ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ ಅಮಲಾ ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಸಂಗ-2 ಮತ್ತು ವಡಾಚೆನ್ನೈ ಸಿನಿಮಾ ಕಥೆಯನ್ನು ಒಪ್ಪಿಕೊಂಡರು. ಯಾರಿಗೂ ಇಷ್ಟವಿಲ್ಲದಿದ್ದರೂ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಮುಂದಾದ ಅಮಲಾ ನಿರ್ಧಾರದಿಂದ  ದಿನವೂ ಜಗಳವಾಗುತ್ತಿತ್ತು. ಕೊನೆಗೆ ನನ್ನ ಮಗನ  ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಚಿಂತಿಸಿ ವಿಚ್ಛೇಧನ ನೀಡಲು ನಿರ್ಧಾರ ಮಾಡಬೇಕಾಯ್ತು' ಎಂದು ನಿರ್ಮಾಪಕ  ಎ.ಎಲ್. ಅಜಗಪ್ಪನ್ ಹೇಳಿಕೊಂಡಿದ್ದಾರೆ.