ಕ್ಯಾನ್ಸರ್‌ನಿಂದ ತಂದೆಯನ್ನು ಕಳೆದುಕೊಂಡ ಹೆಬ್ಬುಲಿ ಚಿತ್ರದ ನಟಿ. ಸಾಮಾಜಿಕ ಜಾಲತಾಣದಲ್ಲಿ ತಂದೆಯ ಬಗ್ಗೆ ಬರೆದ ಪತ್ರದಲ್ಲಿ ತಾಯಿ ನೋವು ನೋಡಲಾಗದೇ ಕಣ್ಣೀರಿಟ್ಟಿದ್ದಾರೆ.

ಕಿಚ್ಚ ಸುದೀಪ್‌ ಅಭಿನಯದ 'ಹೆಬ್ಬುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ತಮ್ಮ ಪ್ರತಿಭೆ ತೋರಿದ ಬಹುಭಾಷಾ ನಟಿ ಅಮಲಾ ಪೌಲ್‌ ತನ್ನ ಜೀವನದ ಕರಾಳ ದಿನದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜನವರಿ 22ರಂದು ಅಮಲಾ ಪೌಲ್‌ ತಮ್ಮ ತಂದೆ ಪೌಲ್‌ ವರ್ಗಿಸ್‌ ಅವರನ್ನು ಕ್ಯಾನ್ಸರ್‌ನಿಂದಾಗಿ ಕಳೆದುಕೊಂಡಿದ್ದಾರೆ. ಈ ದುಖಃದಿಂದ ಹೊರ ಬರಲು ಕುಟುಂಬದವರು ಪಟ್ಟ ಸಂಕಟವನ್ನು ಅಮಲಾ ತಾಯಿ ಅನ್ನೈಸ್‌ ಪೌಲ್‌ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. 

ಕದ್ದುಮುಚ್ಚಿ ಮದುವೆಯಾದ ಕನ್ನಡದ ನಟಿ; ವೈರಲ್‌ ಆಯ್ತು ಅಂತ ಫೋಟೋ ಡಿಲಿಟ್!

'ತಂದೆಯನ್ನು ಕಳೆದುಕೊಂಡ ನೋವನ್ನು ಯಾವತ್ತೂ ಹೇಳಿಕೊಳ್ಳಲಾಗದು. ನಮಗೇ ತಿಳಿಯದಂತೆ ಕತ್ತಲಿನ ಪ್ರಪಂಚಕ್ಕೆ ಕಾಲಿಡುತ್ತೇವೆ. ಕ್ಯಾನ್ಸರ್‌ನಿಂದ ಅಪ್ಪನನ್ನು ಕಳೆದುಕೊಂಡ ನೋವು ನನಗೆ ಅದೆಷ್ಟೋ ಪಾಠ ಹೇಳಿಕೊಟ್ಟಿದೆ. ಅದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ' ಎಂದು ಶುರು ಮಾಡಿದ್ದಾರೆ.

'ನಾವು ಎಷ್ಟು ಸುಂದರವಾದ ಪ್ರಪಂಚದಲ್ಲಿ ಹುಟ್ಟಿದ್ದೇವೆ. ಅಡಿಯಿಂದ ಮುಡಿಯವರೆಗೂ ಸೊಸೈಟಿ ಏನೆಂದುಕೊಳ್ಳುತ್ತದೆ ಎಂದೇ ಚಿಂತಿಸುತ್ತೇವೆ. ಚಿಕ್ಕ ವಯಸ್ಸಿನಿಂದಲೂ ಏನು ಮಾಡಬೇಕು, ಏನು ಮಾಡಬಾರದು ಎಂಬ ಕಂಡೀಷನ್‌ ನಮ್ಮ ಸುತ್ತಲೇ ಇರುತ್ತದೆ. ಈ ಸುಳಿಯಲ್ಲಿ ನಮ್ಮ ಮನಸ್ಸು ಎಂಬ ಪುಟ್ಟ ಕಂದಮ್ಮನನ್ನು ಡಬ್ಬದಲ್ಲಿ ಕೂಡಿಡುತ್ತೇವೆ. ಅದರಿಂದ ಹೂರ ಬರುವುದೇ ನಮ್ಮ ಗುರಿಯಾಗಿ ಆ ಹೋರಾಟದಲ್ಲಿ ನಮ್ಮನ್ನು ನಾವು ಪ್ರೀತಿಸುವುದನ್ನು ಮರೆಯುತ್ತೇವೆ. ಜಗತ್ತು ಏನೆಂದರೂ ಪರ್ವಾಗಿಲ್ಲ, ಎಂದು ಹೇಳುತ್ತಾ ಡಬ್ಬದಲ್ಲಿರುವ ಪುಟ್ಟ ಕಂದಮ್ಮನ ಹೊರ ತರಲು ಪ್ರಯತ್ನಿಸಲು ಮರೆಯುತ್ತೇವೆ. ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಹಾರುತ್ತಾ ನಾವು ಕೆಳೆದುಕೊಂಡಿದ್ದನ್ನು ಹುಡುಕುತ್ತಾ ಹೋಗುತ್ತೇವೆ. ಅದು ಸಂಗಾತಿಯ ವಿಚಾರದಲ್ಲೇ ಇರಬಹುದು ಅಥವಾ ನಾವು ಮಾಡುವ ಕೆಲಸದಲ್ಲೇ ಇರಬಹುದು. ಅದರ ಬದಲು ನಮ್ಮನ್ನು ನಾವು ಪ್ರೀತಿಸೋಣ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸುವುದನ್ನು ಕಲಿಯೋಣ' ಎಂದು ಜೀವನದಲ್ಲಿ ಕಲಿತ ಪಾಠದ ಬಗ್ಗೆ ಹೇಳಿಕೊಂಡಿದ್ದಾರೆ.

ಅಮಲಾ ಪೌಲ್‌ ವಿಚ್ಛೇದನಕ್ಕೆ ನಟ ಧನುಷ್ ಕಾರಣ!

ಅಷ್ಟೇ ಅಲ್ಲದೇ 'ಈ ಸಂದರ್ಭದಲ್ಲಿ ಎಂಥದ್ದೇ ಸಂಕಷ್ಟ ಬಂದರೂ, ಅದನ್ನು ಧೈರ್ಯವಾಗಿ ಎದುರಿಸಲು ನಾನು ಸಿದ್ಧಳಾಗಿರುವೆ. ಅದರಲ್ಲೂ ಹಗಲಿರುಳು ಎಂದು ಲೆಕ್ಕಿಸದೇ ಕೆಲಸ ಮಾಡುವ ನಮ್ಮ ತಾಯಿಯನ್ನು ಮರೆಯುವುದು ಬೇಡ. ತನ್ನ ಇಡೀ ಜೀವನವನ್ನೇ ಗಂಡನಿಗೆ, ಮಕ್ಕಳಿಗೆ ಮೀಸಲಿಡುತ್ತಾಳೆ. ಈ ಸಂದರ್ಭದಲ್ಲಾದರೂ ಅಕೆಯ ಜೊತೆ ನಿಂತು ಕತ್ತಲಿಂದ ಹೊರ ಬರಲು ಸಹಾಯ ಮಾಡೋಣ. ನಿನ್ನನ್ನು ನೀನು ಪ್ರೀತಿಸು ಎಂದು ಹೇಳೋಣ. ಅಪ್ಪನ ಸಾವಿನಿಂದ ಖಿನ್ನತೆಯಲ್ಲಿರುವ ನಾವು, ನಮ್ಮನ್ನು ನಾವು ಪ್ರೀತಿಸಿ ಆರೈಕೆ ಮಾಡಿಕೊಳ್ಳುವ ಮೂಲಕ ನಾವಿಬ್ಬರೂ ಫೀನಿಕ್ಸ್‌ನಂತೆ ಹಾರಲು ಸಾಧ್ಯವಾಯಿತು' ಎಂದು ದುಖಃವನ್ನು ಅಭಿಮಾನಿಗಳೊಂದಿಗೆ ತೋಡಿ ಕೊಂಡಿದ್ದಾರೆ.

View post on Instagram