ಬಹುಭಾಷಾ ನಟಿ ಅಮಲಾ ಪೌಲ್ ವೈಯಕ್ತಿಕ ಜೀವನ ದಿನೇ ದಿನೇ ಒಂದೊಂದು ತಿರುವು ಪಡೆದುಕೊಳ್ಳು ತ್ತಿದೆ. ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿರುವ ಅಮಲಾ ಪೌಲ್ ಈಗಾ ಪ್ರಿಯಕರ ಭವಿಂದರ್‌ ಸಿಂಗ್‌ ಜೊತೆ ಸಿಂಪಲ್‌ ಆಗಿ ಹಸೆಮಣೆ ಏರಿದ್ದಾರೆ.

ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ; ಇದು ಲವ್‌ ಅಲ್ಲ Live-in-Relationship!

ಹೌದು! ಅಮಲಾ ಪೌಲ್‌ ಮತ್ತು ಭವಿಂದರ್‌ ಸಿಂಗ್‌ ಸಿಂಪಲ್‌ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭವಿಂದರ್‌ ಈ ಅಮೂಲ್ಯ ಕ್ಷಣಗಳ ಫೋಟೋವನ್ನು 'ಮದುವೆ ಫೋಟೋಗಳು ' ಎಂದು ಬರೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಪತಿ ಭವಿಂದರ್‌ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಡಿಲಿಟ್‌ ಆಗುವ ಮುನ್ನವೇ ಫೋಟೋಗಳು ಫುಲ್‌ ವೈರಲ್‌ ಆಗಿವೆ. 

ಭವಿಂದರ್‌ ಸಿಂಗ್ ಮುಂಬೈ ಮೂಲದ ಗಾಯಕನಾಗಿದ್ದು, ಹಲವು ವರ್ಷಗಳಿಂದ ಈ ಇಬ್ಬರೂ ಪ್ರೀತಿಸುತ್ತಿದ್ದರು, ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.  ಆದರೆ ಸಂದರ್ಶನವೊಂದರಲ್ಲಿ 'ನಾನು ಜೀವನದಲ್ಲಿ ಈಗ ಸಾಧನೆ ಮಾಡುವುದರ ಕಡೆ ಗಮನ ಹರಿಸುತ್ತಿದ್ದೇನೆ. ಇದಕ್ಕೆ ಕಾರಣ ನನ್ನ ಲೈಫ್‌ನಲ್ಲಿ ಇರುವ ವ್ಯಕ್ತಿ. ಯಾವುದನ್ನೂ ಲೆಕ್ಕಚಾರ ಹಾಕದೇ  ಪ್ರೀತಿ ತೋರಿಸುವುದು ತಾಯಿ ಮಾತ್ರ. ಆದರೆ ಒಬ್ಬ ವ್ಯಕ್ತಿ ಮಾತ್ರ ನಿಮಗಾಗಿ ಎಲ್ಲವನ್ನೂ ಬಿಟ್ಟು ನಿಮ್ಮ ಪ್ಯಾಷನ್ ಅರ್ಥ ಮಾಡಿಕೊಳ್ಳುತ್ತಾರೆ, ಎಂದರೆ ನಾನು ಎಷ್ಟು ಲಕ್ಕಿ ಇರಬೇಕು' ಎಂದು ಹೇಳಿದ್ದರು. ಈಗ ಅಭಿಮಾನಿಗಳಿಗೆ ಅರ್ಥವಾಯ್ತು ಆ ಮಾತುಗಳು ಭವಿಂದರ್‌ ಸಿಂಗ್‌ ಹೇಳಿದ್ದು ಎಂದು. 

ಅಮಲಾ ಪೌಲ್‌ ವಿಚ್ಛೇದನಕ್ಕೆ ನಟ ಧನುಷ್ ಕಾರಣ!

ಈ ಜೋಡಿ ಖುಷಿಯಾಗಿ ಇರಲಿ. ದಾಂಪತ್ಯ ಜೀವನ ಸುಖಕರವಾಗಿರಲಿ ಎಂಬುದು ಸುವರ್ಣನ್ಯೂಸ್. ಕಾಮ್ ಹಾರೈಕೆಯೂ ಹೌದು.