ಈ ಒಂದು ನಿರ್ಧಾರದ ಬಗ್ಗೆ ಈಗಲೂ ವಿಷಾದಿಸ್ತಾರಂತೆ ನಟಿ ಪ್ರಿಯಾಂಕಾ ಚೋಪ್ರಾ ತಾಯಿ
ಪ್ರಿಯಾಂಕಾ ಚೋಪ್ರಾ, ಮಧು ಚೋಪ್ರಾ ಅವರ ಹೆಮ್ಮೆಯ ಮಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಪ್ರಿಯಾಂಕಾ ಅವರ ಆ ಒಂದು ವಿಚಾರವಾಗಿ ಮಧು ಅವರಿಗೆ ತಪ್ಪು ಮಾಡಿಬಿಟ್ಟೆ ಎಂಬ ಯೋಚನೆ ಈಗಲೂ ಆಗುತ್ತಿರುತ್ತದೆಯಂತೆ...
ಎಲ್ಲಾ ಪೋಷಕರಿಗೂ ಮಕ್ಕಳೂ ಚೆನ್ನಾಗಿ ಓದಿ ತಮ್ಮ ಕಾಲ ಮೇಲೆ ನಿಲ್ಲಬೇಕು ಎಂಬ ಹಠವಿರುತ್ತದೆ. ಇದೇ ಕಾರಣಕ್ಕೆ ತುಂಟಾಟವಾಡುವ ಎಳೆಯ ಪ್ರಾಯದ ಮಕ್ಕಳನ್ನು ದೂರದ ವಸತಿ ಶಾಲೆಗಳಲ್ಲಿಟ್ಟು ಪೋಷಕರು ಓದಿಸುತ್ತಾರೆ. ಜೊತೆ ಜೊತೆಗೆ ಕೊರಗುತ್ತಾರೆ. ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬಾಧೆ ಪಡುತ್ತಾರೆ. ಅದೇ ರೀತಿ ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಕೂಡ ತನ್ನ ಮಗಳನ್ನು ಕೇವಲ 7 ವರ್ಷದ ಪ್ರಾಯದಲ್ಲೇ ಹಾಸ್ಟೆಲ್‌ಗೆ ಕಳಿಸಿರುವುದಕ್ಕೆ ಈಗಲೂ ಬಾಧೆ ಪಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ, ಮಧು ಚೋಪ್ರಾ ಅವರ ಹೆಮ್ಮೆಯ ಮಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಪ್ರಿಯಾಂಕಾ ಅವರ ಆ ಒಂದು ವಿಚಾರವಾಗಿ ಮಧು ಅವರಿಗೆ ತಪ್ಪು ಮಾಡಿಬಿಟ್ಟೆ ಎಂಬ ಯೋಚನೆ ಈಗಲೂ ಆಗುತ್ತಿರುತ್ತದೆಯಂತೆ ರೊಡ್ರಿಗೋ ಕ್ಯಾನೆಲಾಸ್ ಅವರ ಸಮ್ಥಿಂಗ್ ಬಿಗರ್ ಟಾಕ್ ಶೋ ಪಾಡ್‌ಕ್ಯಾಸ್ಟ್‌ಗಾಗಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಧು ಚೋಪ್ರಾ ಅವರು ತನ್ನ ಮಗಳನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸಿದ್ದಕ್ಕಾಗಿ ವಿಷಾದಿಸುತ್ತೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಈ ಮಾತುಕತೆಯ ಸಮಯದಲ್ಲಿ ಮಧು ಚೋಪ್ರಾ ಅವರು ಪ್ರಿಯಾಂಕಾ ಅವರನ್ನು ಅವರಿಗೆ ಕೇವಲ 7 ವರ್ಷದವಳಿದ್ದಾಗ ಹಾಸ್ಟೆಲ್‌ಗೆ ಹಾಕಲು ನಿರ್ಧಾರ ಮಾಡಿದ್ದನ್ನು ನೆನಪು ಮಾಡಿಕೊಂಡರು. ನನಗೆ ಗೊತ್ತಿಲ್ಲ, ನಾನುಬ್ಬಳು ಸ್ವಾರ್ಥಿ ತಾಯಿ ಅಗಿದ್ದೇನೆಯೇ ಎಂದು ನಾನು ಆ ವಿಚಾರದ ಬಗ್ಗೆ ಈಗಲೂ ವಿಷಾದಿಸುತ್ತೇನೆ. ಅದು ನನಗೆ ಬಹಳ ನೋವಿನ ವಿಚಾರ. ಆದರೆ ನಾನು ಪ್ರತಿ ಶನಿವಾರ ನಾನು ನನ್ನ ಕೆಲಸವನ್ನು ಬಿಟ್ಟು ರೈಲು ಹತ್ತಿ ಆಕೆಯನ್ನು ನೋಡಲು ಹೋಗುತ್ತಿದ್ದೆ. ಅದು ಆಕೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತಿತ್ತು. ಏಕೆಂದರೆ ಆಕೆ ಬೋರ್ಡಿಂಗ್ ಸ್ಕೂಲ್‌ನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಳು. ಪ್ರತಿ ಶನಿವಾರ ಬಂದಾಗಲೆಲ್ಲಾ ಆಕೆ ನನಗಾಗಿ ಕಾಯುತ್ತಿದ್ದಳು. ಭಾನುವಾರ ನಾನು ಆಕೆಯೊಂದಿಗೆ ಇರುತ್ತಿದೆ. ಹಾಗೂ ಇಡೀ ವಾರ ಆಕೆಯ ಶಿಕ್ಷಕರು ನೀವು ನೀವು ಬರುವುದನ್ನು ನಿಲ್ಲಿಸಿ, ನೀವು ಬರುವ ಹಾಗಿಲ್ಲ ಎಂದು ಹೇಳುತ್ತಿದ್ದರು ಎಂದು ಮಧು ಚೋಪ್ರಾ ಹೇಳಿಕೊಂಡಿದ್ದಾರೆ.
ನನ್ನ ಈ ನಿರ್ಧಾರವೂ ವಿಷಾದ ಹಾಗೂ ಹೆಮ್ಮೆ ಎರಡರಿಂದಲೂ ಕೂಡಿದೆ. ಅದೊಂದು ವಿಷಾದದ ನಿರ್ಧಾರವಾಗಿದ್ರು ಪ್ರಿಯಾಂಕಾ ಅದರಿಂದ ಚೆನ್ನಾಗಿಯೇ ಹೊರಹೊಮ್ಮಿದಳು, ಹಾಗೂ ಆಕೆಯ ಕಾಲ ಮೇಲೆಯೇ ನಿಂತುಕೊಂಡಳು ಎಂದು ಮಧು ಚೋಪ್ರಾ ಹೇಳಿಕೊಂಡಿದ್ದಾರೆ. ಅಮ್ಮನೊಂದಿಗೆ ಪ್ರಿಯಾಂಕಾ ಬಹಳ ಆತ್ಮೀಯವಾದ ಸಂಬಂಧವನ್ನು ಹೊಂದಿದ್ದಾರೆ. ಆಕೆಯ ಏಳು ಬೀಳುಗಳಿಗೆಲ್ಲಾ ಜೊತೆಯಾಗಿದ್ದಾರೆ. ಪ್ರಿಯಾಂಕಾ ತಮ್ಮ ಸಿನಿಮಾ ಪ್ರಯಾಣ ಆರಂಭಿಸಿದ್ದು ತಮಿಳಿನಿಂದ ವಿಜಯ್ ನಟನೆಯ ತಮಿಳನ್ ಸಿನಿಮಾದ ಮೂಲಕ ಪ್ರಿಯಾಂಕಾ ಚೋಪ್ರ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಆಕೆಯ ಹಿಂದಿ ಡೆಬ್ಯೂಟ್ ಸಿನಿಮಾ ದಿ ಹೀರೋ- ಲವ್ ಸ್ಟೋರಿ ಆಫ್ ಎ ಸ್ಪೈ, ಈ ಸಿನಿಮಾವನ್ನು ಅನಿಲ್ ಶರ್ಮಾ ನಿರ್ದೇಶಿಸಿದ್ದು, ಇದರಲ್ಲಿ ಸನ್ನಿ ಡಿಯೋಲ್ ಹಾಗೂ ಪ್ರೀತಿ ಜಿಂಟಾ ಕೂಡ ಇದ್ದಾರೆ.
ಪ್ರಸ್ತುತ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದು,ಹಾಲಿವುಡ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದು, ದಂಪತಿಗೆ ಒಬ್ಬಳು ಮಗಳಿದ್ದಾರೆ.
ಇದನ್ನೂ ಓದಿ:ಕೆಲ ನಟಿಯರ ಜೊತೆ ನಟಿಸುವುದಕ್ಕೆ ತಮ್ಮ ಪತಿಗೆ ನಿರ್ಬಂಧ ಹೇರಿದ ಬಾಲಿವುಡ್‌ನ ಪತ್ನಿಯರು
ಇದನ್ನೂ ಓದಿ: ಖಳನಾಯಕಿಯರಾಗಿಯೂ ತಮ್ಮ ಖದರ್ ತೋರಿಸಿದ ಬಾಲಿವುಡ್‌ನ ನಟಿಯರಿವರು