Asianet Suvarna News Asianet Suvarna News

ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ

ಕಳೆದ ವರ್ಷ ಮಗಳು ಹುಟ್ಟಿರುವ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಘೋಷಿಸಿದ ಬೆನ್ನಲ್ಲೇ ಟ್ರೋಲ್​ಗೆ ಒಳಗಾದರು. ಅದರೆ ಬಾಡಿಗೆ ತಾಯ್ತತನದ ಮೂಲಕ ಇವರು ಮಗುವನ್ನು ಪಡೆದದ್ದೇಕೆ? ನಟಿ ಹೇಳಿದ್ದೇನು?
 

Priyanka Chopra Open Up On Surrogacy told about medical condition
Author
First Published Jan 20, 2023, 5:12 PM IST

ಕಳೆದ ವರ್ಷ ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ  ತಾಯಿಯಾಗಿದ್ದರು. ಬಾಡಿಗೆ ತಾಯ್ತನದಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಕೂಡ ಒಳಗಾಗಿದ್ದರು. ಮಗುವಾದರೆ ಸೌಂದರ್ಯ ಕೆಡುತ್ತೆ, ದೇಹ ಬದಲಾಗುತ್ತೆ ಎಂದು ನಟಿಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುತ್ತಾರೆ ಎಂದು ಹಲವರು ಪ್ರಿಯಾಂಕಾ ಅವರಿಗೆ ಅಂದದ್ದುಂಟು. ಬಹಳ ದಿನಗಳ ನಂತರ ಪ್ರಿಯಾಂಕಾ ಚೋಪ್ರಾ (Priyanka Chopra) ಈ ಬಗ್ಗೆ ಮೌನ ಮುರಿದಿದ್ದಾರೆ. ತಾಯಿಯಾಗಲು ತಾನು ಬಾಡಿಗೆ ತಾಯ್ತನವನ್ನು ಏಕೆ ಆಶ್ರಯಿಸಿದೆ ಎಂದು ನಟಿ ಹೇಳಿದ್ದಾರೆ.  

ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ (Mary Chopra Jonas) ಎಂದು ಹೆಸರು ಇಟ್ಟಿರುವ ಪ್ರಿಯಾಂಕಾ, ಬಾಡಿಗೆ ತಾಯ್ತನದ ಕುರಿತು ಮೌನ ಮುರಿದಿದ್ದಾರೆ. ಮಗಳು ಹಾಗೂ ಪತಿಯ ಜೊತೆಗಿನ ಹಲವಾರ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅವರು ಮಗಳ ಮುಖವನ್ನು ಮಾತ್ರ ರಿವೀಲ್ (Reveal)​ ಮಾಡಲಿಲ್ಲ. ಪ್ರತಿಯೊಂದು ಫೋಟೋದಲ್ಲಿಯೂ ಮಗುವಿನ ಬೆನ್ನು ಕಾಣಿಸುತ್ತದೆಯೆ ವಿನಾ ಮುಖವನ್ನು ಅವರು ಕಾಣಿಸಲಿಲ್ಲ. ಆದರೆ  ಬಾಡಿಗೆ ತಾಯ್ತನದ ಮಾರ್ಗವನ್ನು ಏಕೆ ಆರಿಸಿಕೊಂಡೆ ಎನ್ನುವ ಮಾಹಿತಿಯನ್ನು ಬ್ರಿಟಿಷ್ ವೋಗ್ ಜೊತೆ ಅವರು  ರಿವೀಲ್ ಮಾಡಿದ್ದಾರೆ.

ಎರಡೇ ವರ್ಷಗಳಲ್ಲಿ ಮತ್ತೊಮ್ಮೆ ತಾಯಿಯಾಗ್ತಿರೋ ನಟಿಯಿಂದ ಬೇಬಿ ಬಂಪ್​ ಶೋ

ಅಂದಹಾಗೆ ಪ್ರಿಯಾಂಕಾ, ನಿಕ್​ ಮಗಳಿಗೆ ಈಗ ಒಂದು ವರ್ಷ. ಈ ಸಂದರ್ಭದಲ್ಲಿ ತಾವು ಮಗುವಿನ ಜನನ ಹಾಗೂ ಅದಕ್ಕೂ ಮುನ್ನ ಅನುಭವಿಸಿದ ನೋವಿನ ಕುರಿತು ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.  'ನನಗೂ ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುವ ಇಷ್ಟವಿರಲಿಲ್ಲ. ಆದರೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರಲಿಲ್ಲ.  ಹಲವಾರು ವೈದ್ಯಕೀಯ ಸಮಸ್ಯೆಗಳು (Medical Problems) ಇದ್ದವು. ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಇಚ್ಛಿಸಿದೆವು. ನಮ್ಮ ಮಗುವಿನ ಬಾಡಿಗೆ ತಾಯಿಯಾಗಲು ಬಯಸುವಾಕೆ  ತುಂಬಾ ದಯೆ ಉಳ್ಳವರೂ, ಸುಂದರಿಯೂ, ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ತಮ್ಮ ಗರ್ಭದಲ್ಲಿ ನೋಡಿಕೊಂಡರು' ಎಂದಿದ್ದಾರೆ ಪ್ರಿಯಾಂಕಾ.

ಬಾಡಿಗೆ ತಾಯ್ತನದ ಬಗ್ಗೆ ಇನ್ನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. ಬಹುಶಃ ನಾನು ಅನುಭವಿಸಿದ ತೊಂದರೆ, ನೋವು ಯಾರಿಗೂ ತಿಳಿದಿಲ್ಲ. ಆದರೆ ಬಾಡಿಗೆ ತಾಯಿ(Mother)ಯಾದುದಕ್ಕೆ ಸಾಕಷ್ಟು ಮಂದಿ ಸಾಕಷ್ಟು ವಿಧನಾಗಿ ಮಾತನಾಡಿಕೊಂಡರು. ಆದರೆ ನನ್ನ ನೋವನ್ನು ಯಾರೊಂದಿಗೆ ಹಂಚಿಕೊಳ್ಳಲು ನನಗೆ ಇಷ್ಟವಿಲ್ಲ.  ನನ್ನ ವೈದ್ಯಕೀಯ ಇತಿಹಾಸವನ್ನು ಹಂಚಿಕೊಳ್ಳಲು ನಾನು ಬಯಸುವುದಿಲ್ಲ ಎಂದಿದ್ದಾರೆ.

ಚಿತ್ರರಂಗಕ್ಕೆ ಪುನಃ ಬರಸಿಡಿಲು​: ಶೂಟಿಂಗ್​ ವೇಳೆ ನಟ ವಿಜಯ್​ ಸ್ಥಿತಿ ಚಿಂತಾಜನಕ

ಇದೇ ವೇಳೆ,  ಮಗಳು (Daughter)   ಜನಿಸಿದ ಸಂದರ್ಭದಲ್ಲಿ ತಾವು ಅನುಭವಿಸಿದ ನೋವಿನ ಕಥೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮ ಮಗಳು ಸಮಯಕ್ಕೂ ತುಂಬಾ ಮುಂಚೆಯೇ ಜನಿಸಿದಳು. ಅವಳು ಹೊರಗೆ ಬಂದಾಗ ನಾನು ಆಪರೇಷನ್ ರೂಮ್​(Operation room)ನಲ್ಲಿದ್ದೆ. ಅವಳು ತುಂಬಾ ಚಿಕ್ಕವಳಿದ್ದಳು, ನನ್ನ ಕೈಗಿಂತ ಚಿಕ್ಕ ಗಾತ್ರದಲ್ಲಿದ್ದಳು. ಅವಳು ಜನಿಸಿದಾಗ ನಿಕ್ ಮತ್ತು ನಾನು ಇಬ್ಬರೂ ಅಲ್ಲಿಯೇ ನಿಂತಿದ್ದೆವು. ಅವಳು ತುಂಬಾ ಚಿಕ್ಕವಳಿದ್ದಳು. ವೈದ್ಯರು ಅವಳನ್ನು ಹೇಗೆ ನೋಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ ನಾವು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆವು' ಎಂದಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ (Nick Jonas) 2018 ರಲ್ಲಿ ವಿವಾಹವಾದರು. ಕಳೆದ ವರ್ಷ ಜನವರಿಯಲ್ಲಿ ಮಗಳು ಹುಟ್ಟಿದ್ದ ಬಗ್ಗೆ ಘೋಷಣೆ ಮಾಡಿದ್ದರು. ಈ ನಡುವೆಯೇ  ಬಾಲಿವುಡ್​ನಿಂದ ಸ್ವಲ್ಪ ದೂರವಾಗಿ ಹಾಲಿವುಡ್​ನಲ್ಲಿ ಆ್ಯಕ್ಟಿವ್ ಆಗಿದ್ದಾರೆ.  ಪತಿ ಹಾಗೂ ಮಗಳ ಜೊತೆ ವಿದೇಶದಲ್ಲಿಯೇ ನೆಲೆಸಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Priyanka (@priyankachopra)

Follow Us:
Download App:
  • android
  • ios