ಎರಡೇ ವರ್ಷಗಳಲ್ಲಿ ಮತ್ತೊಮ್ಮೆ ತಾಯಿಯಾಗ್ತಿರೋ ನಟಿಯಿಂದ ಬೇಬಿ ಬಂಪ್ ಶೋ
ಕಳೆದ ವರ್ಷವಷ್ಟೇ ಮಗುವಿನ ತಾಯಿಯಾಗಿರುವ ನಟಿ ಎವೆಲಿನ್ ಶರ್ಮಾ ಮತ್ತೊಮ್ಮೆ ತಾಯಿಯಾಗುತ್ತಿದ್ದು, ಅದರ ಸಂತಸ ಶೇರ್ ಮಾಡಿಕೊಂಡಿದ್ದಾರೆ.
ನಟಿ ಎವೆಲಿನ್ ಶರ್ಮಾ ನೆನಪಿದೆಯೆ? ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡಿ ಭಾರಿ ಜನಪ್ರಿಯ ಪಡೆದ ಜರ್ಮನಿಯ ಈ ಖ್ಯಾತ ನಟಿ ಕಳೆದ ವರ್ಷದ ನವೆಂಬರ್ನಲ್ಲಿ ತಾಯಿಯಾಗಿದ್ದರು. ‘ಮೇ ತೆರಾ ಹೀರೋ’, ‘ಜಬ್ ಹ್ಯಾರಿ ಮೆಟ್ ಸೇಜಲ್’, ‘ಸಾಹೋ’, ‘ನೌಟಂಕಿ ಸಾಲಾ’ ಮೊದಲಾದ ಚಿತ್ರಗಳಲ್ಲಿ ಎವೆಲಿನ್ ನಟಿಸಿದ್ದಾರೆ. ಅವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅವರಿಗೆ ಅಭಿಮಾನಿ ಬಳಗ ದೊಡ್ದದಿದೆ. ‘ಸಾಹೋ’ ಬಳಿಕ ಅವರು ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ.
ಈಕೆಯ ಸುದ್ದಿ ವೈರಲ್ ಅಗಿದ್ದು, ಅವರು ತಾಯಿಯಾದ ಮೇಲೆ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಹಂಚಿಕೊಂಡಿದಾಗ. ಈಕೆ ಕಳೆದ ವರ್ಷ ಮೇ 15ರಂದು ತಮ್ಮ ಬಾಯ್ಫ್ರೆಂಡ್ ತುಷಾನ್ ಭಿಂಡಿ ಜತೆ ವಿವಾಹವಾದರು. ಜೂನ್‌ನಲ್ಲಿ ಅವರು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ನವೆಂಬರ್ನಲ್ಲಿ ಅವರಿಗೆ ಮಗು ಜನಿಸಿತು. ಅವಾ ಎಂದು ಮಗುವಿಗೆ ಹೆಸರಿಡಲಾಗಿದೆ. ಮಗುವಿನ ಜತೆಗಿನ ಹಲವು ಫೋಟೋಗಳನ್ನು ಎವೆಲಿನ್ ಈ ಮೊದಲು ಹಂಚಿಕೊಂಡಿದ್ದರು. ಮಗುವಿಗೆ ಎದೆ ಹಾಲು ಕುಡಿಸುವ ದೃಶ್ಯವನ್ನು ಈಕೆ ತೋರಿಸಿದ್ದರು. ಇದು ಹಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ತಾಯ್ತನವನ್ನು ಈ ರೀತಿ ತೋರಿಸುವುದು ಎಷ್ಟು ಅಸಭ್ಯ ಎಂದು ಹಲವರು ಹೇಳಿದ್ದರು.
ಆಸ್ಕರ್ ರೇಸ್ನಲ್ಲಿ ದಿ ಕಾಶ್ಮೀರ್ ಫೈಲ್ಸ್: 'Propaganda' ಎಂದವರಿಗೆ ಕಪಾಳಮೋಕ್ಷ
ಈಗ ಇದೇ ನಟಿ ಮತ್ತೊಮ್ಮೆ ವೈರಲ್ ಆಗಿದ್ದಾರೆ. ಇದಕ್ಕೆ ಕಾರಣ, ತಾಯಿಯಾಗಿ ಒಂದೇ ವರ್ಷದಲ್ಲಿ ನಟಿ ಮತ್ತೊಂದು ಅಚ್ಚರಿಯ ಮಾಹಿತಿಯೊಂದನ್ನು ನಟಿ ಬಹಿರಂಗಪಡಿಸಿದ್ದಾರೆ. ಅದೇನೆಂದರೆ ಪತಿ ತುಷಾನ್ ಭಿಂಡಿ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಈ ನಟಿ. ನಟಿ ಎವೆಲಿನ್ ಶರ್ಮಾ ಅವರು ಎರಡನೆಯ ಬಾರಿ ಪಾಲಕರಾಗಿರುವುದಾಗಿ ಘೋಷಿಸಿದ್ದಾರೆ. ಎರಡು ವರ್ಷಗಳ ನಂತರ ಎರಡನೇ ಗರ್ಭಧಾರಣೆಯನ್ನು ನಟಿ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಎವೆಲಿನ್ ಮಗುವಿನ ಬಂಪ್‌ನೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಡುವಾಗ ನಗು ಬೀರಿದ್ದಾರೆ. ಆಕೆಯ ಸೆಲೆಬ್ರಿಟಿ ಸ್ನೇಹಿತರು ಮತ್ತು ಅಭಿಮಾನಿಗಳು ಪೋಸ್ಟ್‌ನಲ್ಲಿ ಅಭಿನಂದನಾ ಸಂದೇಶಗಳನ್ನು ಹಾಕುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ನಟಿ ಎವೆಲಿನ್, 'ನನ್ನ ತೋಳುಗಳಲ್ಲಿ ನಿನ್ನನ್ನು ಹಿಡಿದಿಡಲು ಕಾಯಲು ಸಾಧ್ಯವಿಲ್ಲ. ಬೇಬಿ #2 ದಾರಿಯಲ್ಲಿದೆ ಎಂದಿದ್ದಾರೆ. ನಟರಾದ ಸೋನಾಲ್ ಚೌಹಾನ್, 'ಅವ್ವ ಅಭಿನಂದನೆಗಳು ನನ್ನ ಪ್ರೀತಿ ನಿನ್ನ ಜೊತೆ ಇದೆ ಎಂದಿದ್ದಾರೆ. 2018 ರಲ್ಲಿ ಮೊದಲ ಬಾರಿಗೆ ಭೇಟಿಯಾದ ಎವೆಲಿನ್ ಮತ್ತು ತುಷಾನ್ ಅವರು ಅಕ್ಟೋಬರ್ 2019ರಲ್ಲಿ ವಿವಾಹವಾಗಿದ್ದಾರೆ. ಆಸ್ಟ್ರೇಲಿಯಾದ ದಂತ ವೈದ್ಯ ತುಷಾನ್ ಭಿಂಡಿ ಅವರೊಂದಿಗೆ ಎವೆಲಿನ್ ಹಲವು ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಕೊನೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿಷಯವನ್ನು ಎವೆಲಿನ್ ಗೆಳೆಯನಿಗೆ ಕಿಸ್ ಮಾಡುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್ನ ಭಯಾನಕ ಭವಿಷ್ಯ!
ತುಷಾನ್ ಸಿಡ್ನಿಯ ಪ್ರಸಿದ್ಧ ಹಾರ್ಬರ್ ಸೇತುವೆಯಲ್ಲಿ ಎವೆಲಿನ್ ಅವರನ್ನು ಪ್ರಪೋಸ್ ಮಾಡಿದ್ದರು. ಅಲ್ಲದೆ ಪ್ರಪೋಸ್ ಮಾಡುವ ಸಂದರ್ಭದಲ್ಲಿ ಎವೆಲಿನ್ ಅವರ ನೆಚ್ಚಿನ ಹಾಡನ್ನು ಬ್ಯಾಕ್‍ಗ್ರೌಂಡ್‍ನಲ್ಲಿ ಪ್ಲೇ ಮಾಡಲು ತುಷಾನ್ ಗಿಟಾರಿಷ್ಟ್ ನಲ್ಲಿ ನೇಮಿಸಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎವೆಲಿನ್, ತುಷಾನ್ ನನಗೆ ಪ್ರಪೋಸ್ ಮಾಡುವ ಮೊದಲು ಒಂದು ಕವಿತೆಯನ್ನು ಓದಿದ್ದರು. ಈ ಕನಸು ನನಸಾಗುವಂತಿದೆ. ತುಷಾನ್ ನನಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಪರ್ಫೆಕ್ಟ್ ಆಗಿ ಪ್ರಪೋಸ್ ಮಾಡಿದ್ದರು ಎಂದು ತಿಳಿಸಿದ್ದರು.
ಹೀಗೆ ಪ್ರತಿಯೊಂದು ವಿಷಯವನ್ನು ವಿಶಿಷ್ಟ ರೀತಿಯಲ್ಲಿ ಹೇಳಿಕೊಳ್ಳುತ್ತಿರುವ ನಟಿ, ಈಗ ಎರಡನೆಯ ಬಾರಿ ಮಗುವಾಗಿರುವ ಸುದ್ದಿಯನ್ನೂ ವಿಶಿಷ್ಟ ರೀತಿಯಲ್ಲಿ ಪೊಸ್ಟ್ ಮಾಡಿದ್ದಾರೆ. ಎವೆಲಿನ್ 2012ರಲ್ಲಿ ‘ಫ್ರಂ ಸಿಡ್ನಿ ವಿತ್ ಲವ್’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ‘ಹೇ ಜವಾನಿ ಹೇ ದಿವಾನಿ’, ‘ನೌಟಂಕಿಸಾಲಾ’, ‘ಮೈ ತೇರಾ ಹೀರೋ’, ಯಾರಿಯನ್ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ ಪ್ರಭಾಸ್ ನಟನೆಯ ‘ಸಹೋ’ ಚಿತ್ರದಲ್ಲೂ ಎವೆಲಿನ್ ಅಭಿನಯಿಸಿದ್ದರು.